Tuesday, September 20, 2016

ಯಾರೋ ಇವನು ಜೋಕುಮಾರ ಕಣ್ಣಲ್ಲಿ ನಿಂತ, ಯಾರೇ ಕೂಗಾಡಲಿ ಚಿತ್ರದ ಗೀತೆ


ಯಾರೋ ಇವನು ಜೋಕುಮಾರ ಕಣ್ಣಲ್ಲಿ ನಿಂತ
ಯಾರೋ ಇವನು ಮಾಯಗಾರ ಯಾರಿಗೆ ಸ್ವಂತ
ಸಾವಿರ ಆಲೋಚನೆ ಮೌನದಿ ಸಂಭಾಷಣೆ ಯಾರೋ ... ಯಾರೋ ಕಾಣೆ
ಯಾರಿವನು ಯಾರಿವನೋ
ಯಾರಿವನು ಯಾರಿವನೋ
ಇವನ್ಯಾರ ಮಗನೋ ಕಾಣೆ ನಾ ಕಾಣೆ
ಹೆಸರೇನೋ ಹೆಸರೇನೋ ಯಾವೂರ ನಾಯಕನೋ
ಜೊತೆಗಾರ ನಗುವನೋ ಕಾಣೆ ನನ್ನಾಣೆ.

ಎದೆ ಬಡಿತ ಯಾತಕೋ ತಾಳ ತಪ್ಪಿದೆ  ಇಂದು ಇವನ ನೋಡಿ
ಇದೇನೋ ಸೂಚನೆ ಇದೆಂಥ ಯೋಚನೆ
ಹೊಸದಾದ ದಿಗಿಲು ಯಾಕೋ ಕಾಣೆ
ತುಟಿಲಿ ಕಂಪನ ಎದೆಲಿ ತಲ್ಲಣ
ಬಹಳಾನೇ ಇಷ್ಟ ದೇವಾರಾಣೆ
ಯಾರಿವನು ಯಾರಿವನೋ
ಯಾರಿವನು ಯಾರಿವನೋ
ಇವನ್ಯಾರ ಮಗನೋ ಕಾಣೆ ನಾ ಕಾಣೆ

ಕಾಲ್ಗಳು ಯಾತಕೋ ದಾರಿಯ ತಪ್ಪಿದಂತೆ 
ಆ ಥರ ಹಿಂದೆಯೇ ಸಾಗಿದೆ ಸಾಗಿದೆ 
ರಾತ್ರಿಯಾದರೆ ಚಂದ್ರನ ಹಾಗೆ ಕಂಬಳಿಲಿ ಬಂದ
ಹಗಲು ಕಂಡರೆ ನನ್ನ ಸುತ್ತಲೂ ಹಾಲು ಬೆಳಕೇ ಆಗ
ಪೂರ್ವ ಪರವೇ ಇಲ್ಯಾರಿಗೂ  ತಿಳಿದಿಲ್ಲ ತಿಳಿದಿಲ್ಲ
ಪೂರ್ವ ಸೂರ್ಯ ಬಂದಂತೆ ಬಂದಿರುವ
ಖುಷಿಯೊಂದೇ ಹಂಚಲು ಸ್ನೇಹಿ ಎನ್ನುವ ರೂಪದಲ್ಲಿ ಬಂದ

ಇದೇನೋ ಸೂಚನೆ ಇದೆಂಥ ಯೋಚನೆ
ಹೊಸದಾದ ದಿಗಿಲು ಯಾಕೋ ಕಾಣೆ

ಬಂಧು ಹಾಗೆ ಕಣ್ಣ ನೀರ ತಡೆಯೋಕೇ ಬಂದ
ಕೂಲಿ ಹಾಗೆ  ನಮ್ಮ ಭಾರ ಹೊರುತಾನೆ
ಸ್ನೇಹ ಎಂದರೆ ಹಾಲು ಜೇನು ಎಂಬ ಸತ್ಯವನ್ನು
ಈ ಹುಡುಗನು ತೋರಿದ
 ಎಂದೂ ಬರೆದ ಋತುವಂತೆ ತಂದವನು
ಎಲ್ಲಾ  ಗೆಲ್ಲೊ ಚೇತರಿಕೆ ತಂದವನು
ನಮ್ಮೊಳಗೇ ತುಂಬಿದ ಎಲ್ಲಾ ಉತ್ತರ
ಆದರಿವನೆ ಪ್ರಶ್ನೆ

ಯಾರಿವನು ಯಾರಿವನೋ
ಯಾರಿವನು ಯಾರಿವನೋ
ಇವನ್ಯಾರ ಮಗನೋ ಕಾಣೆ ನಾ ಕಾಣೆ
ಹೆಸರೇನೋ ಹೆಸರೇನೋ ಯಾವೂರ ನಾಯಕನೋ
ಜೊತೆಗಾರ ನಗುವನೋ ಕಾಣೆ ನನ್ನಾಣೆ. 

No comments:

Post a Comment