Saturday, January 26, 2013

ಸೋನೆ ಮಳೆ


ಸೋನೆ ಮಳೆಯು ಸುರಿಯುತಿರಲು
ಗೆಳತಿ, ನಿನ್ನ ನೆನಪು ಮನದಿ ಸುಳಿಯುತಿರಲು
ಮನವಿಂದು ತ್ಹೊಯಿದಿದೆ
ಮಳೆಯಿಂದಲ್ಲ ಕಣ್ಣಿರಿನಿಂದ
ಬಿಸಿಲು ಮತ್ತೆ ಮಳೆಯೂ ಕಳ್ಳಾಟ ಆಡುತಿರಲು
ಗೆಳತಿ ನಿನ್ನ ನೆನಪು ಮೂಡಿದೆ ಮನದಲ್ಲಿ  ಕಾಮನ ಬಿಲ್ಲಿನಂತೆ 


ಕಾದಿರುವೆ ನಿನಗಾಗಿ


ಮತ್ತೆ ಮತ್ತೆ ನಡೆಯುತಿರುವ ಕಹಿ ಘಟನೆಗಳು
ಮನಸಿನ ಸಿಹಿ ಭಾವನೆಗೆ ಹುಳಿ ಹಿಂಡಿದೆ.
ಮನಸೆಲ್ಲಾ ಖಾಲಿ ಖಾಲಿ
ತನ್ನವರೆಲ್ಲಾ ದೂರ ದೂರ
ಈ ಹೃದಯ ಭಾರ ಭಾರ
ಈ ಮನಸ್ಸಿನ ಖಾಲಿ ಮನೆಯನ್ನೂ ತುಂಬುವ ಓ ಅತಿಥಿ ಎಲ್ಲಿರುವೆ
ಬರಡಾಗಿರುವ ಈ ಬನದಲ್ಲಿ ಅರಳುವ ಹೂವೆ
ನಿನಗಾಗಿ ಕಾದಿರುವೆ