ಬಾಳ ದಾರಿಯಲ್ಲಿ ಇರುಳು
ಕವಿದ ಹೊತ್ತಲಿ
ಪ್ರೀತಿ ಕಣ್ಣು ತೆರೆದ ದೀಪ
....ಮಗಳು ಜಾನಕಿ....
ಒಂದೇ ಮೂಲ ಎರಡು ನದಿಗೆ
ರೆಕ್ಕೆ ಎರಡು ಹಕ್ಕಿಗೆ
ಹರಿವ ನದಿಯು ಹರಿಯಲಿಹದು
ಇಂದಿನಂತೆ ನಾಳೆಯೂ
....ಮಗಳು ಜಾನಕಿ....
ನಿನ್ನ ದಾರಿ ನೀನೆ ನಡೆದು
ಸೇರಬೇಕು ಗುರಿಯನು
ತಡೆಯಬಹುದೇ ಕಡಲ ಕಡೆಗೆಓಡುವಂಥ ತೊರೆಯನು
ಒಂದು ಸತ್ಯ ನೂರು ಮಿಥ್ಯಾತೆರೆದ ಕಣ್ಣಿನಾಟಕೆ....ಮಗಳು ಜಾನಕಿ....
ಇಂದು ಸೋಲು ನಾಳೆ ಗೆಲುವು
ಇರುಳಲುರಿವ ದೀಪ ಸಾಲು
ಮರೆಯಲೊಂದು ತಾಯ ಕರುಳು
ಮರುಗುತಿಹುದು ಹಗಲು ಇರುಳು
....ಮಗಳು ಜಾನಕಿ...
ಇಂದಿನಿರುಳ ಗರ್ಭದಲ್ಲಿ
ಒಂದು ಹಗಲು ಅಡಗಿದೆ
ಕುದಿವ ಕಡಲ ನಡುವೆ ಒಂದು
ಮುಳುಗದಿರುವ ಹಡಗಿದೆ
ಕಾರಿರುಳಿನ ಒಡಲಿನಲ್ಲಿ
ತೂಗುವ ಕನಸು
ಕಣ್ಣ ಹನಿಯ ಕೆಳಗೆ ನಗೆಯ
ನವಿಲಾ ನನಸು
ಅಗ್ನಿಯಿಂದ ಎದ್ದ ಬೆಳಕು