Monday, January 13, 2014

ಹುಚ್ಚು ಪ್ರೀತಿ

ಹುಚ್ಚಿಯಂತೆ ಪ್ರೀತಿಸುತ್ತಿರುವೆ  ನೀ ನನ್ನ ಇಂದು. 
ಕೊಚ್ಚ್ಚಿ ಹೋಗುತಿರುವೆ ಆ ಪ್ರೀತಿಯ ರಭಸದಲ್ಲಿ ನಾನಿಂದು
ಕಟ್ಟಿ ಹಾಕಿರುವೆ ನಿನ್ನೆಡೆಗೆ ಜಾರಬರದೆಂದು 
ಬಿಚ್ಚಿಬಿಟ್ಟರೆ ಹಾರಿ ಹೋಗಬಹುದೆಂದು 
ಎಲ್ಲವನ್ನು ಬಿಟ್ಟು ದೂರ ತೀರಕ್ಕೆ 
ಮರಳಿ ಬಾರದ  ಲೋಕಕ್ಕೆ 
---------******--------------

ತೆಂಗಿನ ಮರ

ನೀ ಒಂದು ಬೆಳೆಯುತಿರುವ ತೆಂಗಿನ ಮರದಂತೆ
ನಾ ತೆಂಗಿನ ಮರದ ಬುಡದಲ್ಲಿ ಹುಲ್ಲಿನಂತೆ
ನೀ ಬೆಳದಂತೆ  ನಾ ಕಳೆ
ಕಳೆ ತೆಗೆದಂತೆ ಹೆಚ್ಚಿದೆ ನಿನ್ನ ಬೆಲೆ
-----------************----------------

ತಂಗಾಳಿ

ಕಡಲ ತೀರದಲ್ಲಿ ಕುಳಿತಿರಲು ತಂಗಾಳಿ ಯಾಗಿ ನೀ ಬಂದೆ. 
ಸುಡುವ ಮನದ ಬೇಗುದಿಯ ತಣಿಸುವ ಗೆಳತಿಯಾಗಿ 
ಬೇಗುದಿಯ ತಣಿಸುವ ತವಕದಲ್ಲಿ 
ಮನಸನ್ನು ಕೊಚ್ಚಿಕೊಂಡು ಹೋಗದಿರು ಸುನಾಮಿಯಾಗಿ
--------------********-----------------

Monday, August 5, 2013

ಸ್ನೇಹಿತರ ದಿನ

ನೆನೆ ನೆನೆಯುತಾ ಮಾತಾಡುವವರಿಗೆ  ಇಂದು ಸ್ನೇಹಿತರ ದಿನ.
ನಿಜವಾದ ಸ್ನೇಹಿತರಿಗೆ ಸ್ನೇಹ ಅನುದಿನ
ನಗು ನಗುತ ಮುಂದುವರೆಯಲಿ ಈ ಸ್ನೇಹ
ಕೊನೆಯಾಗದಿರಲಿ ಎಂದೆಂದಿಗೂ ಸಹ
ಎ ಸ್ನೇಹದ ಆರಂಭ ಆಕಸ್ಮಿಕ
ಅಂತ್ಯ    ಎಂಬ ಮಾತಿಲ್ಲಿ ಅನವಶ್ಯಕ

Friday, July 26, 2013

ಅಭಿನಂದನೆ

ನೀನೊಂದು ಜ್ಞಾನದ ಕಡಲು.
ಪ್ರೀತಿ ವಿಶ್ವಾಸದಿಂದ ಕೂಡಿದೆ ನಿನ್ನ ಒಡಲು
ಒಡಲ ಸೇರಲು ಹಾತೊರೆಯುತಿವೆ ನದಿಗಳ ಸಾಲು
ನಾನೊಂದು ಪುಟ್ಟ ತೊರೆ
ಆಲಿಸಲಾರೆ ದೂರದ ಕಡಲ ಕರೆ

ಆದರೂ ಅಭಿನಂದಿಸುವೆ ನಿನ್ನ ಮನಸಾರೆ

Saturday, March 23, 2013

Ivanu geleyanalla song lyrics from the Movie Mungaru Male

Ivanu geleyanalla, gelathi nanu modale alla,
ivanu iniyanalla, thumba saniha bandihanalla,
novinallu naguthihanalla, yake ithara
jana manave kelu jara beda ivana kadege
yake ninage sallada salige
irali anthara….

Ivanu geleyanalla…gelathi nanu modale alla

Olava hadiyalli ivanu nanage hoovo mullo
manada kadalinalli ivanu aleya bhikara suliyo
ariyadantha hosa kampanavo yako kanenu
aritha maretha jeeva valadanthe ivana kadege
soladanthe kaye manave
ulisu nannanu

Ivanu iniyanalla,thumba saniha bandihanalla

Thilidu thilidu ivanu thana thane sothihanalla
olume emba sulige eju barade ilidihanalla
savinallu naguvuda balla enu kalamala
muluguvavana koogu chachuvanthe madide kaiya
jaribiduvude e hrudaya eno talamala..
Ivanu iniyanalla,thumba saniha bandihanalla

ಇವನು ಗೆಳೆಯನಲ್ಲ (Ivanu geleyanall tumba saniha bandihanall from Mungaru male)

ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ ತುಂಬಾ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ ಯಾಕೆ ಈ ಥರ
ಜಾಣ ಮನವೇ ಕೇಳು ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅಂತರ


ಇವನು ಇನಿಯಲ್ಲ ತುಂಬ ಸನಿಹ ಬಂದಿಹನಲ್ಲ

ಒಲವ ಹಾದಿಯಲ್ಲಿ ಇವನು ನನಗೆ ಹೂವೋ ಮುಳ್ಲೋ       
ಮನದ ಕಡಲಿನಲ್ಲಿ ಇವನು ಅಲೆಯೋ ಭೀಕರ ಸುಳಿಯೊ
ಅರಿಯದಂಥ ಹೊಸ ಕಂಪನವೊ ಯಾಕೋ ಕಾಣೆನೊ
ಅರಿತೊ ಮರೆತೊ ಜೀವ ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯೇ ಮನವೆ ಉಳಿಸು ನನ್ನನು

ಇವನು ಇನಿಯಲ್ಲ ತುಂಬ ಸನಿಹ ಬಂದಿಹನಲ್ಲ

ತಿಳಿದು ತಿಳಿದು ಇವನು ತನ್ನ ತಾನೇ ಸುಡುತಿಹನಲ್ಲ
ಒಲುಮೆ ಎಂಬ ಸುಳಿಗೆ ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲು ನಗುವುದ ಬಲ್ಲ ಏನೋ ಕಳವಳ
ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯ
ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ 

ಇವನು ಇನಿಯನಲ್ಲ ತುಂಬ ಸನಿಹ ಬಂದಿಹನಲ್ಲ