ಮೊನ್ನೆ ಟೀ ಶಾಪ್ ನಲ್ಲಿ ಟೀ ಕುಡಿತ ಇದ್ದೆ ಸ್ನೇಹಿತನೊಬ್ಬ ಕೇಳ್ತಿದ್ದ ಏನೋ ನಿನ್ನ ಹಲ್ಲುಗಳಲ್ಲಿ ಕಪ್ಪು ಗೆರೆಗಳು ಇದೆಯಲ್ಲ ಏನಾಯಿತು ಚೆನ್ನಾಗೆ ಇತ್ತಲ್ಲ???
ಸಿಗರೆಟ್ಟು ಹೆಚ್ಚಾಯಿತು ಅಂತ ಕಾಣ್ಸುತ್ತೆ .
ನಾನು ಒಂಬತ್ತನೇ ಕ್ಲಾಸಿಂದ ಸಿಗೆರಟು ಹೊಡಿತಿದಿನಿ ನನ್ನ ಹಲ್ಲೆಲ್ಲ ಕರೆಕ್ಟ್ ಆಗಿ ಇದೆ ಅಂತಂದ.
ಅದಕ್ಕೆ ನಾನಂದೆ ನೀನು ಈ ಏಳು ವರ್ಷದಲ್ಲಿ ಹೊಡೆದ ಸಿಗೆರಟಿಗಿಂತ ಹತ್ತು ಪಟ್ಟು ನಾನು ಎರಡು ವಾರದಲ್ಲಿ ಹೊಡೆದಿದಿನಿ ಅಂತಂದ್ರೆ ನಂಬುತ್ತಿಯಾ ???
ಯಾಕೆ ಏನಾಯಿತು??
ಅದಕ್ಕೆ ಏನಂಥ ಹೇಳಲಿ ನಂಬಿಕೆ ದ್ರೋಹ ಆಯಿತು ಅಂತ ಹೇಳಲಾ ಅಲ್ಲಾ. ಪ್ರೀತಿಯಿಂದ ಪ್ರೀತಿಯಲ್ಲಿ ಮೋಸಹೋದೆ ಅಂತ ಹೇಳಲಾ. ನನ್ನಿಂದ ಯಾರಿಗೆ ಮೋಸ ಆಗಬಾರದು ಅಂತ ಎಲ್ಲರನ್ನು ಬಿಟ್ಟು ಬಂದೆ ಅವರಿಂದಲೇ ಮೋಸ ಆಯಿತು ಅಂತ ಹೇಳಲಾ?? ಯಾರಿಗಾಗಿ ನನ್ನ ಈ ಬದುಕು ಅಂಥ ಮುಡುಪಾಗಿ ಇಟ್ಟಿದ್ದೆ ಅವರೇ ಎಲ್ಲವನ್ನ ಬಿಟ್ಟು ಹೋದಮೇಲೆ ಈ ಬದುಕು ಇನ್ನ್ಯಾರಿಗೆ. ಬದುಕುವ ಆಶೆಯಂತು ಇಲ್ಲಾ ಸಾಯುವ ಮನಸು ಇದೆ ಆದರೆ ಅದರಿಂದ ಪ್ರೀತಿಯ ಬದುಕು ಹಾಳಾಗಬಾರದೆಂದು ಈ ಸಿಗರೆಟ್ನೊಂದಿಗೆ ಬದುಕು ಸಾಗಿಸುತ ಇದ್ದೇನೆ
ಇದು ಕಥೆಯಲ್ಲ ಜೀವನ - ಗೋಡಂಬಿ
Monday, October 4, 2010
Saturday, October 2, 2010
ಪತ್ರ ಬರೆಯಲಾ ಇಲ್ಲಾ ಚಿತ್ರ ಬಿಡಿಸಲಾ
ಪತ್ರ ಬರೆಯಲು ಪ್ರೇಮಿಯಲ್ಲ
ಚಿತ್ರ ಬಿಡಿಸಲು ಚಿತ್ರಕಾರನಲ್ಲ
ಕತೆ ಬರೆಯಲು ಕತೆಗರಾನಲ್ಲ
ಲೇಖನ ಬರೆಯೋಣವೆಂದರೆ ಲೇಖಕನಲ್ಲ
ಅದರೂ ಏನೋ ಬರೀಬೇಕು ಮನದಲ್ಲಿ ಇರೋದನೆಲ್ಲ ಅಕ್ಷರಗಳಾಗಿ ಮೂಡಿಸಬೇಕು....ಭಾವೆನೆಗಳೆಲ್ಲ ಬರಹವಾಗಬೇಕು ಅದಕ್ಕೊಂದು ಬ್ಲಾಗ್ ಬೇಕು ಅದೇ ಗೋಡಂಬಿ
ಚಿತ್ರ ಬಿಡಿಸಲು ಚಿತ್ರಕಾರನಲ್ಲ
ಕತೆ ಬರೆಯಲು ಕತೆಗರಾನಲ್ಲ
ಲೇಖನ ಬರೆಯೋಣವೆಂದರೆ ಲೇಖಕನಲ್ಲ
ಅದರೂ ಏನೋ ಬರೀಬೇಕು ಮನದಲ್ಲಿ ಇರೋದನೆಲ್ಲ ಅಕ್ಷರಗಳಾಗಿ ಮೂಡಿಸಬೇಕು....ಭಾವೆನೆಗಳೆಲ್ಲ ಬರಹವಾಗಬೇಕು ಅದಕ್ಕೊಂದು ಬ್ಲಾಗ್ ಬೇಕು ಅದೇ ಗೋಡಂಬಿ
Subscribe to:
Posts (Atom)