ದೂರ ಸ್ವಲ್ಪ ದೂರ ಬಂದು ನೋಡ ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು ನೋಡು ನನ್ನ ಕಡೆಗೆ
ನೀ ನೋಡುವಾಗ ನನಗೆ ನಾನು ಸಿಗದೇ ಓಡುವೆನು
ಮಾತೊಂದು ತುಟಿಯಂಚಲ್ಲಿ ಕರಗಿ ಎಲ್ಲೋ ನೋಡುವೆನು
ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೆ ನೀನೆ ನೋಡು||೨||
ನೀ ಮನದ ಒಳಗೆ ಇರುವೆ ಆದರೂ ನಿಲ್ಲುವೆ ದೂರ
ನೀ ಇಲ್ಲದ ಘಳಿಗೆ ನನಗೆ ಸಾವಿರ ಮುಳ್ಳಿನ ಹಾರ
ಹೇಳದೇನೆ ಅಪ್ಪಿಬಿಡಲೇನು ಒಂದು ಸಣ್ಣ ಮುತ್ತನಿಡಲೇನು
ಕಣ್ಣ ಹನಿಯೊಂದು ಎಲ್ಲ ಹೇಳುತಿದೆ ನೀನೆ ಬಂದು ನೋಡು
ದೂರ ಸ್ವಲ್ಪ ದೂರ ಬಂದು ನೋಡ ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು ನೋಡು ನನ್ನ ಕಡೆಗೆ
ಈ ವಿರಹ ನಡುವೆ ಇರಲು ಯಾತಕೆ ಇಷ್ಟಿದೆ ಸಲುಗೆ
ಓ ನಾ ನಗುವೆ ನಗುತಾ ಇರುವೆ ಆದರೂ ವೇದನೆ ನನಗೆ
ಒಂದು ಬಾರಿ ಅತ್ತು ಬಿಡಲೇನು ತೋಳಿನಲ್ಲಿ ಸತ್ತು ಬಿಡಲೇನು
ಸಣ್ಣ ಹೃದಯವಿದು ತುಂಬ ನಡುಗುವುದು ನೀನೆ ನೋಡು
ದೂರ ಸ್ವಲ್ಪ ದೂರ ಬಂದು ನೋಡ ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು ನೋಡು ನನ್ನ ಕಡೆಗೆ
ನೀ ನೋಡುವಾಗ ನನಗೆ ನಾನು ಸಿಗದೇ ಓಡುವೆನು
ಮಾತೊಂದು ತುಟಿಯಂಚಲ್ಲಿ ಕರಗಿ ಎಲ್ಲೋ ನೋಡುವೆನು
ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೆ ನೀನೆ ನೋಡು||೨||