Saturday, August 25, 2012

ತಪ್ಪು

ಒಂದು ಸಣ್ಣ ತಪ್ಪಿನಿಂದ ಮಾತು ಸತ್ತು ಹೋಗಿ.
ಮನಸೆಲ್ಲ ಕಪ್ಪು ಮೋಡ ಕವಿದಂತೆ.
ಆ ಮೋಡ ಸರಿಸಲು ಬರಬೇಕಿನ್ನು ಮುಗುಳ್ನಗೆಯ ರವಿ ಕಿರಣ.
ಇಲ್ಲ ಬರಬೇಕು ಅಳುವೆಂಬ ವರ್ಷಧಾರೆ.
ಮುಗುಳ್ನಗೆ ಬಂದರೆ ತಪ್ಪಿನ ಮುಸುಕನ್ನು ಸರಿಸಿದಂತೆ
ವರ್ಷಧಾರೆ ಬಂದರೆ ತಪ್ಪಿನ ಮುಸುಕನ್ನು ಪುಡಿ ಮಡಿ ಮನವನ್ನೂ ತಣಿಸಿದಂತೆ.
ಮುಗುಳ್ನಗೆ ಇಲ್ಲ ವರ್ಷಧಾರೆ ಯಾವುದಾದರು  ಸರಿ
ಬೇಕಿಲ್ಲ ಈ ಮನಕಿನ್ನು ದುಃಖದ ಈ ಪರಿ

ಕತ್ತಲೆ


ಕತ್ತಲೆಯಲ್ಲಿ ಕುಳಿತಿರಲು
ಮನ ತುಂಬ ಕಹಿ ನೆನಪುಗಳು
ಬೆಳಕಿನೆಡೆಗೆ ಹೊರಬರಲು ಪರಿತಪಿಸುವ ಜೀವಗಳು
ಮೇಣದ ಬತ್ತಿಯ ಬೆಳಕನ್ನು ಅಪ್ಪಲು ಹೋಗಿ ಸಿಕ್ಕಿಬಿದ್ದ ಹುಳದಂತೆ
ಚಡಪಡಿಸುತ್ತಿರುವ ಜೀವಗಳು

ಹೋಗುವ ಮುನ್ನಾ!!!!!


   ಹೋಗುವ ಮುನ್ನಾ!!!!! 

ಮುಗಿದು ಹೋದ ಕಥೆಗೆ ಮುನ್ನುಡಿ ಬರೆಯುವ ಆಶೆ ಯಾಕೆ.
ಬಾಡಿ ಹೋದ ಹೂವಿಗೆ ನೀರು ಎರೆಯುವ ಆಶೆ ಯಾಕೆ.
ಮೊಸರಾದ ಹಾಲನ್ನು ಮತ್ತೆ ಹಾಲಗಿಸುವ ಯತ್ನ ಯಾಕೆ.
ಮುದುಡಿದ ಮನಸನ್ನು ಅರಳಿಸುವ ಯತ್ನ ಯಾಕೆ
ಕಲ್ಲನು ಕರಗಿಸುವ ಯತ್ನ ಯಾಕೆ.

ನೀ ನಲಿದಾಗ ನಾ ನಲಿದೆ ನೀ ಅತ್ಹಾಗ ನಾ ಅತ್ತೆ.
ನಿನ್ನ ನೋವಿಗೆ ನಲಿವಾಗಿ ಇರಬೇಕು ಎಂದು ನಾ ಬಯಸಿದೆ.
ನಾ ಆಡಿದ ಮಾತುಗಳೆಲ್ಲ  ತಪ್ಪಾದವು.
ನಾ ಮಾಡದ ತಪ್ಪನ್ನು ತಪ್ಪೆಂದು ಒಪ್ಪಿಕೊಂಡೆ.
ನೀ ಮುನಿಸಿಕೊಳ್ಳುವೆಯೆಂಬ ಭಯದಿಂದ

ಅಂದು ನಾ ಆಡಿದ ತಪ್ಪು ಮಾತುಗಳೆಲ್ಲ ಸರಿಯಿದ್ದವು
ಇಂದು ನಾ ಆಡುವ ಮಾತುಗಳೆಲ್ಲ ತಪ್ಪೆಂದು ತೋರುತಿವೆ.
ನಾ ಬೇಡವೆಂದು ತಿರಸ್ಕ್ರತ ವಾದಮೇಲೆ.ನನ್ನ ಮಾತುಗಳು ಹೇಗೆ ಇಷ್ಟವಾಗುವವು.
ನನ್ನ ಸರಿ ಮಾತುಗಳೆಲ್ಲ ಕಷ್ಟವಾಗುವವು.


ನೆನ್ನೆ ಮೊನ್ನೆ ಬಂದವರೆಲ್ಲ ದೊಡ್ಡವರಾದರು.ಅಂದು ಬಂದ ನಾನು ಸಣ್ಣವನಾದೆ.
ಸಣ್ಣವನಾದರು ಸಣ್ಣದೊಂದು ಜಾಗವಿದೆಯೆಂದು ಖುಷಿಯಾದೆ
ಹೇಳಲು ಹೋದರೆ ನೂರಾರು ವಿಷಯಗಳು ಮನದಲ್ಲಿ. ಆದರೆ ಕೇಳಲು ಕಿವಿಗಳೆಲ್ಲಿ.
ಎಲ್ಲೇ ಇರು ಹೇಗೆ ಇರು ಸಂತೋಷವಾಗಿರು. ಎಂದೆಂದಿಗೂ ನೀ ನನ್ನ ನೆನಪಿನಲ್ಲಿರು

ಇನ್ನು ನಾ ಏನು ಹೇಳಲಾರೆ ನಾ ಏನು ಕೇಳಲಾರೆ.ನಾ ಹೇಳಿದರೆ ತಪ್ಪಾಗಬಹುದು
ನನ್ನಿಂದಾದ ತಪ್ಪುಗಳಿಗೆ ಕ್ಷಮೆಯಿರಲಿ.ನಿನ್ನ ಜೀವನ ಪೂರ ಸುಖವಾಗಿರಲಿ.
ಕಲ್ಲುಮನ ಕರಗಲಿ.ಬಂಧು ಮಿತ್ರರ ಬಾಳೆಲ್ಲ ಬೆಳಗಲಿ.
ನಾನಿನ್ನು ಬರೆಯಲಾರೆ. ಓದುವರಿಲ್ಲ ನನ್ನ ಮನದಾಳದ ಮಾತುಗಳನ್ನ.
ನಾನಿನ್ನು ಬರಲಾರೆ ಬರಮಾಡಿಕೊಳ್ಳುವರಿಲ್ಲ
ಬದುಕು ಬಡವಾಗಿದೆ. ಭಾವನೆಗಳೆಲ್ಲ ಬಳಲಿ………….