Saturday, March 23, 2013

Ivanu geleyanalla song lyrics from the Movie Mungaru Male

Ivanu geleyanalla, gelathi nanu modale alla,
ivanu iniyanalla, thumba saniha bandihanalla,
novinallu naguthihanalla, yake ithara
jana manave kelu jara beda ivana kadege
yake ninage sallada salige
irali anthara….

Ivanu geleyanalla…gelathi nanu modale alla

Olava hadiyalli ivanu nanage hoovo mullo
manada kadalinalli ivanu aleya bhikara suliyo
ariyadantha hosa kampanavo yako kanenu
aritha maretha jeeva valadanthe ivana kadege
soladanthe kaye manave
ulisu nannanu

Ivanu iniyanalla,thumba saniha bandihanalla

Thilidu thilidu ivanu thana thane sothihanalla
olume emba sulige eju barade ilidihanalla
savinallu naguvuda balla enu kalamala
muluguvavana koogu chachuvanthe madide kaiya
jaribiduvude e hrudaya eno talamala..
Ivanu iniyanalla,thumba saniha bandihanalla

ಇವನು ಗೆಳೆಯನಲ್ಲ (Ivanu geleyanall tumba saniha bandihanall from Mungaru male)

ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ ತುಂಬಾ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ ಯಾಕೆ ಈ ಥರ
ಜಾಣ ಮನವೇ ಕೇಳು ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅಂತರ

ಇವನು ಇನಿಯಲ್ಲ ತುಂಬ ಸನಿಹ ಬಂದಿಹನಲ್ಲ

ಒಲವ ಹಾದಿಯಲ್ಲಿ ಇವನು ನನಗೆ ಹೂವೋ ಮುಳ್ಲೋ       
ಮನದ ಕಡಲಿನಲ್ಲಿ ಇವನು ಅಲೆಯೋ ಭೀಕರ ಸುಳಿಯೊ
ಅರಿಯದಂಥ ಹೊಸ ಕಂಪನವೊ ಯಾಕೋ ಕಾಣೆನೊ
ಅರಿತೊ ಮರೆತೊ ಜೀವ ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯೇ ಮನವೆ ಉಳಿಸು ನನ್ನನು

ಇವನು ಇನಿಯಲ್ಲ ತುಂಬ ಸನಿಹ ಬಂದಿಹನಲ್ಲ

ತಿಳಿದು ತಿಳಿದು ಇವನು ತನ್ನ ತಾನೇ ಸುಡುತಿಹನಲ್ಲ
ಒಲುಮೆ ಎಂಬ ಸುಳಿಗೆ ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲು ನಗುವುದ ಬಲ್ಲ ಏನೋ ಕಳವಳ
ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯ
ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ 

ಇವನು ಇನಿಯನಲ್ಲ ತುಂಬ ಸನಿಹ ಬಂದಿಹನಲ್ಲ

Neeralli Sanna Aleyondu Moodi Choorada Chandraneega- kannada song lyrics from Hudugaru movie

Neeralli Sanna Aleyondu Moodi Choorada Chandraneega
Illondu Chooru Allondu Chooru Ondaga Beku Bega
Thusu Doora Summane Jotheyalli Bandeya
Naduvello Mellage Maayavadeya

Neeralli Sanna Aleyondu Moodi Choorada Chandraneega
Illondu Chooru Allondu Chooru Ondaga Beku Bega

Iddalli Aalisa Balle Ninnella Pisumaathu
Nannalli Neeniruvaga Inneke Rujuvathu
Nenapinalle Neeneega Yendiginta Saniha
ALisalaare Naanindu Manada Gode Baraha
Sahiyada Mele Saha Geetheyondu Mareyayitheke Nodu
Illondu Saalu Allondu Saalu Berethaagalene Haadu

Neeralli Sanna Aleyondu Moodi Choorada Chandraneega
Illondu Chooru Allondu Chooru Ondaga Beku Bega

Daareeli Hoogidavondu Kattilla Hoomale
Kannalli Kannidu Neenu Mattilla Aamele
Kaanaballe Kanasallu Ninna Hejje Guruthu
Kela Beda Innenu Neenu Nanna Kurithu
Edeyaaladinda Madhu Mouna ondu Karevaaga Jantiyagi
Illondu Jeeva Allondu Jeeva Irabeke Ontiyaagi

Neeralli Sanna Aleyondu Moodi Choorada Chandraneega
Illondu Chooru Allondu Chooru Ondaga Beku Bega

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ (Neeralli Sanna Aleyondu Moodi)

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ 
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಈಗ 
ತುಸು ದೂರ ಸುಮ್ಮನೆ  ಜೊತೆಯಲಿ ಬಂದೆಯಾ 
ನಡುವೆಲ್ಲೋ ಮೆಲ್ಲಗೆ ಮಾಯವಾದೆಯೋ ||೨|| 

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ 
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಈಗ 

ಇದ್ದಲ್ಲೇ ಆಲಿಸ ಬಲ್ಲೆ ನಿನ್ನೆಲ್ಲ ಪಿಸುಮಾತು 
ನನ್ನಲ್ಲಿ ನೀನಿರುವಾಗ ಇನ್ನೇಕೆ ರುಜುವಾತು 
ನೆನಪಿನಲ್ಲೇ ನೀನೀಗ ಎಂದಿಗಿಂತ ಸನಿಹ 
ಆಲಿಸಲಾರೆ ನಾನೀಗ ಮನದ ಗೋಡೆ ಬರಹ 
ಸಹಿಯಾದ ಮೇಲೆ ಸಹ ಗೀತೆಯೊಂದು ಮರೆಯಾಯಿತೆಕೆ ನೋಡು 
ಇಲ್ಲೊಂದು ಸಾಲು ಅಲ್ಲೊಂದು ಸಾಲು ಬೆರೆತಾಗಲೇನೆ  ಹಾಡು

 ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ 
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಈಗ 

ದಾರೀಲಿ ಹೂ ಗಿಡವೊಂದು ಕಟ್ಟಿಲ್ಲ ಹೂಮಾಲೆ 
ಕಣ್ಣಲ್ಲಿ ಕಣ್ಣಿಡೂ ನೀನು ಮಾತಿಲ್ಲ ಆಮೇಲೆ 
ಕಾಣಬಲ್ಲೆ ಕನಸಲ್ಲೂ  ನಿನ್ನ ಹೆಜ್ಜೆ ಗುರುತು 
ಕೇಳಬೇಡ ಇನ್ನೇನು ನೀನು ನನ್ನ ಕುರಿತು 
ಎದೆಯಾಳದಿಂದ ಮಧು ಮೌನ ಒಂದು ಕರೆವಾಗ ಜಂಟಿಯಾಗಿ 
ಇಲ್ಲೊಂದು ಜೀವ ಅಲ್ಲೊಂದು ಜೀವ ಇರಬೇಕೆ ಒಂಟಿಯಾಗಿ 

 ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ 
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಈಗ