Sunday, April 6, 2014

ರಾಜಾ ರಾಜ ಹೆಂಗಿರಬೇಕು ಗೊತ್ತ ನನ್ನ ರಾಜ (ಪ್ರೀತ್ಸೋದ್ ತಪ್ಪಾ )

ರಾಜಾ ರಾಜ ಹೆಂಗಿರಬೇಕು ಗೊತ್ತ ನನ್ನ ರಾಜ (ಪ್ರೀತ್ಸೋದ್ ತಪ್ಪಾ )

ರಾಜಾ ರಾಜ ರಾಜ ರಾಜ 
ಹೆಂಗಿರಬೇಕು ಗೊತ್ತಾ  ನನ್ನ ರಾಜ ರಾಜ. ರಾಜ ರಾಜ 

ರಾಜಾ ರಾಜ ಕನಸಿನ ರಾಜ 
ನಾ ಮೆಚ್ಚೋ ಹುಡುಗ ರಾಜರ ರಾಜ 
ಜೋಕುಮಾರ ಬ್ರೇಕುವೀರ ಯಾರು ಇಲ್ಲ ಇವನ ಮುಂದೆ 
ಜಾಕ್ಕಿಚಾನು ಜೇಮ್ಸ್ ಬಾಂಡು ಇವನ ಮುಂದೆ ಕುರಿ ಮಂದೆ. 

ರಾಜಾ ರಾಜ ರಾಜ ರಾಜ 
ಹೆಂಗಿರಬೇಕು ಗೊತ್ತಾ  ನನ್ನ ರಾಜ ರಾಜ. ರಾಜ ರಾಜ 

ಕಣ್ಣಲ್ಲೇ ಕನಸಲ್ಲೇ ಕೂತವ್ನೆ ನನ್ನ ರಾಜ 
ಕೈಲಾಸವಾಕಿಂಗ್  ನಾ ನೆಟ್ಟಗೆ ಸ್ಮೈಲ್ ಇಂಗು 
ಅವನ ಹಿಂದೆ ನೂರಾರು ಹೆಣ್ಣು ಆದ್ರೆ ನನ್ಮೇಲೆ ಅವನ ಕಣ್ಣು 
ನಕ್ತಾನೆ ನಗಿಸ್ತಾನೆ  ಹಾಡ್ತಾನೆ ನನ್ನ ರಾಜ 
ಆ ನಗು ಕಾಯ್ತಾ ಇದೀನಿ ನಾ ನಗುತ  ಆ ಹಾಡು ಕಾಯ್ತಾ ಇದ್ದೀನಿ ಹಾಡುತ 
ಬಂದಿದಾನಂತೆ ನನ್ನ ರೋಮಿಯೋ ಸುದ್ದಿ ಕೊಟ್ಟಿದೆ ನನ್ನ ಹೃದಯ ಬಡಿಯೋ 
ಬಂದ ಕೂಡಲೇ ಪ್ರೀತಿಯಿಂದಲೇ ಕನ್ಯಾಸೆರೆಗೆ ನನ್ನ ಟಾಟಾ ಚೀರಿಯೋ  


ರಾಜಾ ರಾಜ ರಾಜ ರಾಜ 
ಹೆಂಗಿರಬೇಕು ಗೊತ್ತಾ  ನನ್ನ ರಾಜ ರಾಜ. ರಾಜ ರಾಜ 

ರಾಜಾ ರಾಜ ಕನಸಿನ ರಾಜ 
ನಾ ಮೆಚ್ಚೋ ಹುಡುಗ ರಾಜರ ರಾಜ 

ನಾನಂತೂ ಅಪರಂಜಿ ನನ್ನಂಗೆ ನನ್ನ ರಾಜ 
ಕೂಗ್ತಾ ಇದೀನಿ ನಾನು ಕೇಳ್ತಾ ಇದನಾವನು ದೂರ ಇದ್ರೂ ಸೂರ್ಯ ತಾವರೆ ಅರಳದೆನು 
ನಾ  ತಿನ್ನೋ ರಸಗುಲ್ಲ ನನ್ನ ನಲ್ಲ ನಲ್ಲ ರಾಜ ರಾಜ 
ರಾಮ ಶಾಮ ಭೀಮ ಸಿಕ್ರು ಬೇಕಿಲ್ಲ  ವೀರ ರಣಧೀರ ಸಿಕ್ರೆ ಸಕ್ರೆ ಬೆಲ್ಲ 
ಜೋಕುಮಾರ ಬ್ರೇಕುವೀರ ಯಾರು ಇಲ್ಲ ಇವನ ಮುಂದೆ 
ಜಾಕ್ಕಿಚಾನು ಜೇಮ್ಸ್ ಬಾಂಡು ಇವನ ಮುಂದೆ ಕುರಿ ಮಂದೆ. 

ರಾಜಾ ರಾಜ ರಾಜ ರಾಜ 
ಎಲ್ಲಿರುವನೋ ನನ್ನ ಪ್ರೀತಿಯ ರಾಜ ರಾಜ .... ರಾಜ ..... ರಾಜ 
ರಾಜಾ ರಾಜ ಕನಸಿನ ರಾಜ 
ನಾ ಮೆಚ್ಚೋ ಹುಡುಗ ರಾಜರ ರಾಜ 




Monday, March 31, 2014

Raja Raja Hengirabeku gotha Nanna raja Song Lyrics from Prethsod Thappa

Raja Raja  Hengirabeku gotha Nanna raja Song Lyrics from Prethsod Thappa


Raja Raja Raja raja...
Hengirabeku gotta nanna raja raja raja..

Raja raja kanasina raja
Naa mechcho huduga Rajara raja
Jokumara Breakuveera yaru illa ivana munde
Jaakichanu Jamesbondu ivana munde kuri mande

Raja Raja Raja raja...
Hengirabeku gotha nanna raja raja raja..

Kannalle kanasalle koothavnae nanna raja
Kailasavaaakingu naa nettage smilingu
Avanahinde nooraru heenu adre nanmele avana kannu 
Nakthhaane nagistane haadthane nanna raja
Aa nagu kayutha iddini Na Nagutha aa haadu kayutha Iddinin Haadutha

Bandidaananthe Nanna Romio Suddi Kottide Nanna Hrudaya Badiyo 
Banda Koodale Preethiyindale kanyaserege nana Tata Cheerio


Raja Raja Raja raja...
Hengirabeku gotha nanna raja raja raja..
Rajaa Rajaa Kanasina Rajaa
Naa mecho Rajaa

Naananthu Aparanji Nannange Nanna raja
Koogtha Idini nanu keltha idaanavnu doora idru surya thaavare araladenu
Naan thinno rasagulla Nanna nalla rajaa rajaa
Rama Shama Bheem Sokru Bekilla Veera Randira Sikre Sakre Bella
Jokumara Breakuveera yaru illa ivana munde
Jaakichanu Jamesbondu ivana munde kuri mande

Raja Raja Raja Raja
Elliruvano Nanna Preethiya Raja Raja Raja
Raja Raja Kanasina Raja
Naan Mecho Huduga Rajara Raja 



Sunday, March 2, 2014

ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ (ಸಿಂಪಲ್ಲಾಗಿ ಒಂದು ಲವ್ ಸ್ಟೋರಿಯ ಗೀತೆ )

ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ  (ಸಿಂಪಲ್ಲಾಗಿ ಒಂದು ಲವ್ ಸ್ಟೋರಿಯ ಗೀತೆ )

ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೆ ಸುಂದರ 
ಬಾಡಿದ ಈ ಮನ ಬಯಸೋ ಹುಡುಗನು ನೀನಾ 
ಅರಳುವ ಈ ಮನ ಮೊಗ್ಗದೆನಾ 
ಕಾಡು ಮಳೆಯನು ಮಳೆಯ ನೆನಪನು ನೆನಪ ಹಸಿವನ್ನು ಮರೆಸು ಬಾ 
ಸಿಗುವ ಒಲವನು ಒಲವ ಕನಸನು ಕನಸ ಉದುಪನು ತೋಡಿಸು ಬಾ 
ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೆ ಸುಂದರ 

ನೆರಳಿನ ನೆನಪನೆ ಹೋಲುವ  ಗೆಳೆಯನೆ 
ಬೆಳಗಿದೆ ಬದುಕನೇ ಮೂಡಿಸಿ ಕಲ್ಪನೆ
ನೀರ ಒಳಗೆ ಅಳುವ ಮೀನು ನಾ ಹನಿಯ ಒರೆಸೋ ಬೆರಳು ನೀನೇನಾ
ನಡುಗಿ ಬಾಡೋ ಹೂವು ನಾನಾದೆ ಮೆಲ್ಲ ಒಳಗೆ ನುಸುಳಿ  ನೀ ಬಂದೆ
ಹಗಲ ಶಶಿಯು ನೀನಾದೆಯ 
ಕಾಡು ಮಳೆಯನು ಮಳೆಯ ನೆನಪನು ನೆನಪ ಹಸಿವನ್ನು ಮರೆಸು ಬಾ 
ಸಿಗುವ ಒಲವನು ಒಲವ ಕನಸನು ಕನಸ ಉದುಪನು ತೋಡಿಸು ಬಾ 
ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೆ ಸುಂದರ 

ಚದುರಿದ ಮೊಡವ ಕೂಡಿಸೋ ಬಿಂದುವೇ 
ನನ್ನಯ  ನೀರವ ತೊರೆಯಲು ಸಾದ್ಯವೇ 
ಸುರಿವ ಮಳೆಯ ಪರಿವೆ ನನಗಿಲ್ಲ ನಿನ್ನ ಹೊರತು ಬೇರೆ ಸೊಗಸಿಲ್ಲ 
ಸರಿದ ಸೂರ್ಯ ಕಿರಣ ಬೀರೋಲ್ಲ ನಿನ್ನ ಹೊಳಪ ಮೀರೋ ಮಿನುಗಿಲ್ಲ 
ಇರುಳ ದೀಪ ನೀನಾದೆಯ 
ಕಳೆದ ದಿನವನು  ಪಡೆದ ನೋವನು ಕಾಡು ಮಳೆಯನು  ಮರೆಸು ಬಾ 
ಸಿಗುವ ನಗುವನು ನಾಳೆ ಕನಸನು ಒಲವ ಉಡುಪನು ತೋಡಿಸು ಬಾ 

Karagida Baaninalli Moodi Baa Nee Chandira Lyrics from the Movie Simpallagi Ondu Love Story

Karagida Baaninalli Moodi Baa Nee Chandira Lyrics from the Movie Simpallagi Ondu Love Story

Karagida Baaninalli Moodi Baa Nee Chandira..
Nasukina Kanasinalli Ninna Nenape Sundara..
Baadida Ee Mana.. Bayaso Huduganu Neena..
Araluva Ee Mana.. Moggaadena..
Kaadu Maleyanu.. Maleya Nenapanu.. Nenapa Hasivanu Maresu Baa..
Siguva Olavanu.. Olava Kanasanu.. Kanasa Udupanu Todisu Baa..
Karagida Baaninalli Moodi Baa Nee Chandira..
Nasukina Kanasinalli Ninna Nenape Sundara..

Neralina Nenapane Holuva Geleyane..
Belagide Badukane Moodisi Kalpane..
Neera Olage Aluva Meenu Naa.. Haniya Oreso Beralu Neenena..
Nadugi Baado Hoovu Naanaade.. Mella Olage Nusuli Nee Bande..
Hagala Shashiyu Neenaadeya..
Kaadu Maleyanu.. Maleya Nenapanu.. Nenapa Hasivanu Maresu Baa..
Siguva Olavanu.. Olava Kanasanu.. Kanasa Udupanu Todisu Baa..
Karagida Baaninalli Moodi Baa Nee Chandira..
Nasukina Kanasinalli Ninna Nenape Sundara..

Chadurida Modava Koodiso Binduve..
Nannaya Neerava Thoreyalu Saadhyave..
Suriva Maleya Parive Nanagilla.. Ninna Horathu Bere Sogasilla..
Sarida Soorya Kirana Beerolla.. Ninna Holapa Meero Minugilla..
Irula Deepa Neenaadeya..
Kaleda Dinavanu.. Padeda Novanu.. Kaadu Maleyanu Maresu Baa..
Siguva Naguvana.. Naale Kanasanu.. Olava Udupanu Todisu Baa..

Sunday, February 16, 2014

ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು (ಭಾವಗೀತೆ ಕೆ ಎಸ್ ನರಸಿಂಹಸ್ವಾಮಿ )

ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು (ಭಾವಗೀತೆ ಕೆ ಎಸ್ ನರಸಿಂಹಸ್ವಾಮಿ )

ರಾಯರು ಬಂದರು  ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು
ತುಂಬಿದ ಚಂದಿರ ಬಂದಿತ್ತು 

ಮಾವನ ಮನೆಯಲ್ಲಿ ಮಲ್ಲಿಗೆ ಹೂಗಳ  ಪರಿಮಳ  ತುಂಬಿತ್ತು
ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ ತಂಬಿಗೆ ಬಂದಿತ್ತು
ಒಳಗಡೆ ದೀಪದ ಬೆಳಕಿತ್ತು

ಘಮ ಘಮಿಸುವ ಮೃಷ್ಟಾನ್ನದ  ಭೋಜನ ರಾಯರ ಕಾದಿತ್ತು
ಬೆಳ್ಳಿಯ ಬಟ್ಟಲ ಗಸಗಸೆ  ಪಾಯಸ ರಾಯರ ಕಾದಿತ್ತು
ಭೂಮಿಗೆ  ಸ್ವರ್ಗವೇ ಇಳಿದಿತ್ತು

ಚಪ್ಪರಗಾಲಿನ ಮಂಚದ ಮೇಲೆ ಮೆತ್ತನೆ  ಹಾಸಿತ್ತು
ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು
ಪದುಮಳು ಹಾಕಿದ ಹೂವಿತ್ತು

ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗು ನಗುತಾ
ಬಿಸಿ ಬಿಸಿ ಹಾಲಿನ ಬಟ್ಟಲ ತಂದರು ಅಕ್ಕರೆಯಲಿ ಮಾವ
ಮಡದಿಯ ಸದ್ದೇ ಇರಲಿಲ್ಲ 

ಮಡದಿಯ ತಂಗಿಯ ಕರೆದಿಂತೆಂದರು  ಅಕ್ಕನ ಕರೆಯಮ್ಮ
ಮೆಲು ದನಿಯಲ್ಲಿ  ನಾದಿನಿ ಇಂತೆಂದಳು ಪದುಮಳು ಒಳಗಿಲ್ಲ
ನಕ್ಕಳು ರಾಯರು ನಗಲಿಲ್ಲ

ಏರುತ ಇಳಿಯುತಾ  ಬಂದರು ರಾಯರು ದೂರದ ಊರಿಂದ
ಕಣ್ಣನು ಕಡಿದರು ನಿದೇಯು ಬಾರದು ಪದುಮಳು ಒಳಗಿಲ್ಲ
ಪದುಮಳ ಬಳೆಗಳ ದನಿಯಿಲ್ಲ

ಬೆಳಗಾಯಿತು ಸರಿ ಹೊರಡುವೆನೆಂದರು  ರಾಯರು ಮುನಿಸಿನಲ್ಲಿ
ಒಳಮನೆಯಲ್ಲಿ ನೀರಾಯಿತು ಎಂದಳು ನಾದಿನಿ ರಾಗದಲ್ಲಿ
ಯಾರಿಗೆ ಎನ್ನಲು ಹರುಷದಲ್ಲಿ

ಪದುಮಳು ಬಂದಳು ಹೂವನು ಮುಡಿಯುತಾ ರಾಯರ  ಕೋಣೆಯಲ್ಲಿ


Rayaru bandaru Mavana manege Rathriyagithu (Bhaavageethe by K S Narashimha Swamy)

Raayaru bandaru Maavana manege Raathriyagithu

Raayaru bandaru maavana  manege raathriyaagithu
Hunnime harasida baanina naduve chandira bandithu
thumbida chandira bandithu

Maavana maneyalli mallige hoovugala parimala thumbithu
baagila bali kaalige bisi neerina thambige bandithu
olagade deepada belakithu

Ghama ghamisuva mrushtanhda bhojana raayara kaadithu
Belliya battala gasagase paayasa raayara kaadithu
Bhoomige swaragave ilidithu

chapparagalina manchada melgade methane haasithu
appata reshime dimbina anchige chithrada hoovithu
padumalu haakida hovvithu

chigurele bannada adikeya thandalu naadini nagu nagutha
bisi bisi haalina battala thandaru akkareyalli maava
madadiya sadde iralilla

madadiya thangiya karedinthendaru akkana  kareaymma
melu daniyali naadini inthendalu padumalu olagilla
nakkalu raayaru nagalilla

erutha iliyutha bandaru raayaru doorada oorinda
kannanu kadidaru niddeyu baaradu padumalu olagilla
padumala balegala dani illa

belagaayithu sari horaduvenendaru raayaru munisinalli
olamaneyali neerayithu endalu naadini raagadalli
yaarige ennalu harushadali

padumalu bandalu hoovanu mudiyutha rayara koneyali





Monday, January 13, 2014

ಹುಚ್ಚು ಪ್ರೀತಿ

ಹುಚ್ಚಿಯಂತೆ ಪ್ರೀತಿಸುತ್ತಿರುವೆ  ನೀ ನನ್ನ ಇಂದು. 
ಕೊಚ್ಚ್ಚಿ ಹೋಗುತಿರುವೆ ಆ ಪ್ರೀತಿಯ ರಭಸದಲ್ಲಿ ನಾನಿಂದು
ಕಟ್ಟಿ ಹಾಕಿರುವೆ ನಿನ್ನೆಡೆಗೆ ಜಾರಬರದೆಂದು 
ಬಿಚ್ಚಿಬಿಟ್ಟರೆ ಹಾರಿ ಹೋಗಬಹುದೆಂದು 
ಎಲ್ಲವನ್ನು ಬಿಟ್ಟು ದೂರ ತೀರಕ್ಕೆ 
ಮರಳಿ ಬಾರದ  ಲೋಕಕ್ಕೆ 
---------******--------------

ತೆಂಗಿನ ಮರ

ನೀ ಒಂದು ಬೆಳೆಯುತಿರುವ ತೆಂಗಿನ ಮರದಂತೆ
ನಾ ತೆಂಗಿನ ಮರದ ಬುಡದಲ್ಲಿ ಹುಲ್ಲಿನಂತೆ
ನೀ ಬೆಳದಂತೆ  ನಾ ಕಳೆ
ಕಳೆ ತೆಗೆದಂತೆ ಹೆಚ್ಚಿದೆ ನಿನ್ನ ಬೆಲೆ
-----------************----------------

ತಂಗಾಳಿ

ಕಡಲ ತೀರದಲ್ಲಿ ಕುಳಿತಿರಲು ತಂಗಾಳಿ ಯಾಗಿ ನೀ ಬಂದೆ. 
ಸುಡುವ ಮನದ ಬೇಗುದಿಯ ತಣಿಸುವ ಗೆಳತಿಯಾಗಿ 
ಬೇಗುದಿಯ ತಣಿಸುವ ತವಕದಲ್ಲಿ 
ಮನಸನ್ನು ಕೊಚ್ಚಿಕೊಂಡು ಹೋಗದಿರು ಸುನಾಮಿಯಾಗಿ
--------------********-----------------