Wednesday, June 8, 2016

ಈ ಸಂಜೆ ಏಕೆ ಜಾರುತಿದೆ ರಂಗಿತರಂಗ ಚಿತ್ರದ ಗೀತೆ.


ಈ ಸಂಜೆ ಏಕೆ ಜಾರುತಿದೆ
ಸದ್ದಿಲ್ಲದಂತೆ ಸಾಗುತಿದೆ
ಬೆಳಕ ಸೆರೆಯ ತೊರೆದು
ಈ ಸಂಜೆ ಏಕೆ ಜಾರುತಿದೆ

ನೆರಳನೆ ಅರಿಯದ
ಅಪರಿಚಿತ ದಾರಿಯಲ್ಲಿ
ಇರುಳಿನ ಸನಿಹಕೆ
ಈ ಸಂಜೆ ಏಕೆ ಜಾರುತಿದೆ


ಕಾರ್ಮೋಡ ಮಡಿಲಲ್ಲಿ  ಹಾಸಿ ಮಲಗಿಸಲು
ಶಶಿಯಿನ್ನು ಬರಲಿಲ್ಲ ಭುವಿ ಬೆಳಗಿಸಲು

ಸೂರ್ಯನು ಅರಳುವವರೆಗೆ
ಬೆಳಕನ್ನೇ ಕಾಣದ ಧರೆಗೆ
ವಿಹಾರಿಸೊ  ಈ ಹಂಬಲದೊಂದಿಗೆ
ಈ ಸಂಜೆ ಏಕೆ ಜಾರುತಿದೆ

ಹತ್ತಿರ ತೀರವ ಸೇರಿ
ಕತ್ತಲೆಯ ತೆರನ್ನೇರಿ
ಬೀಸುವ ಗಾಳಿಯ ಜೊತೆಗೆ

ಮುಸುಕನ್ನು ತೆರೆದಾಗ ಬಾರೋ ನಸುಕಿನಲ್ಲಿ
ಮಸುಕುಂಟು  ಜೋಪಾನ ಕಲ್ಲುಸುಕಿನಲ್ಲಿ
ಸೆಳೆಯುವ ನೆನಪಿನ  ಮರಳು
ಹೋದರೆ ಶಾಶ್ವತ ಇರುಳು
ಈ ಮಾತಿನ ತಿರುಳನ್ನು ಅರಿಯದೆ

ಮುಂಗುರುಳನ್ನು ಹಿಂದೆ ತಳ್ಳಿ
ನಿಲ್ಲದಂತ ವೇಗದಲ್ಲಿ
ಹಾರುವ ಹಕ್ಕಿಯ ಜೊತೆಗೆ

ಈ ಸಂಜೆ ಏಕೆ ಜಾರುತಿದೆ

No comments:

Post a Comment