ಅರೆರೆ ಅವಳ ನಗುವ
ನೋಡಿ ಮರೆತೆ ಜಗವ
ಹಗಲುಗನಸು ಮುಗಿಸಿ
ಸಂಜೆ ಮೇಲೆ ಸಿಗುವ
ಮುಸ್ಸಂಜೆಗೆ ಹಾಡಾಗಲು ತಂಗಾಳಿಯಾ ತಯಾರಿ
ಸದ್ದಿಲ್ಲದೆ ಆ ಸೂರ್ಯನು ಬಾನಾಚೆಗೆ ಪರಾರಿ
ಅವಳೆದುರು ಬಂದಾಗ ಎದೆಬಡಿತ ಜೋರಾಗಿ
ಕೂಗೋ ಕೋಗಿಲೆ ಮನದ ಮಾಮರಕೆ ಮರಳಿದೆ
ಮೈಕೂ ತರುವುದನೆ ಮರೆತಿದೆ
ಹಾಡುಹಗಲೇನೆ ಬಾನಲಿ
ಮೂನು ದಾರಿಯ ತಪ್ಪಿದೆ
ಈ ಹರೆಯವು ಬಳಿ ಬಂದರೆ ಬೋರ್ವೆಲ್ಲಿಗೂ ಬಾಯಾರಿಕೆ
ಈ ವಯಸಿಗೂ ಕನಸೆಲ್ಲವ ನನಸಾಗಿಸೊ ಕೈಗಾರಿಕೆ
ಗಿಡ ಮರವಾಗೊ ವರ ದೊರೆತಾಗ
ಬೆಟ್ಟ ಬಳಿ ಕರೆದು ಗುಟ್ಟು ಹೇಳಿದೆ
ಹೊಟ್ಟೆಯೊಳಗಿಂದ ಚಿಟ್ಟೆ ಹಾರಿದೆ ಓಓಓ
ಬಿಸಿಲೇರೊ ಟೈಮಲ್ಲಿ ಬೀಸಿರಲು ತಂಗಾಳಿ
ತೇಲೋ ಮೋಡವು ಮೂಡು ಬಂದ ಕಡೆ ಓಡಿದೆ
ಗಾಳಿ ಮಾತನ್ನೆ ಕೇಳದೆ
ಓಡೊ ಕಾಲದಾ ಕಾಲಿಗೆ
ಕಾಲು ಗಜ್ಜೆಯ ಕಟ್ಟಿದೆ
ದಿನ ಶಾಲೆಗೆ ಲೇಟಾದರೂ
ತುಸು ನಾಚುತಾ ತಲೆ ಬಾಚಿದ
ಕೊಡೋ ಪೆಟ್ಟಿಗೆ ಏಟಾದರೂ
ನಸುನಾಚುತಾ ಕೈ ಚಾಚಿದ
ಎಳೆ ಹೃದಯಕ್ಕೆ ಮಳೆ ಸುರಿದಾಗ
ಮೀಸೆ ಅಂಚಲ್ಲಿ ಆಸೆ ಚಿಗುರಿದೆ
ಬಂಚು ಬಂಚಾಗಿ ಕನಸು ಬಂದಿದೆ ಓಓಓ
ಕಿರುನಗೆಯ ತೇರನ್ನು ಕಣ್ಣಲ್ಲೆ ಎಳೆವಾಗ
ರಾಶಿ ಕಾಮನೆ ಎದೆಯ ಬಾಗಿಲಿಗೆ ಬಂದಿದೆ
ಏನೂ ಸುಳಿವನ್ನೆ ನೀಡದೆ
No comments:
Post a Comment