ಶುಭಾಶಯಗಳನ್ನು ಕೋರಿ ಸಿಹಿ ತಿಂದು ಸಂಬ್ರಮಿಸುವವರಿಗೆ ಈ ದಿನ ಪ್ರೇಮಿಗಳ ದಿನ
ನಿನ್ನ ನೋಟದಲ್ಲಿ ನಿನ್ನ ಮಾತಿನಲ್ಲಿ ಮೈ ಮರೆಯುವ ನನಗೆ ಪ್ರತಿದಿನವು ಪ್ರೇಮಿಗಳ ದಿನ
ಒಂದು ದಿನಕ್ಕೆ ಬಾಡಿ ಹೋಗುವ ಗುಲಾಬಿಯನ್ನು ಕೊಟ್ಟು, ಪ್ರೆಮಿಯಾಗಲೇ
ಇಲ್ಲಾ, ಪ್ರತಿದಿನವು ನಿನ್ನ ಮೊಗದಲ್ಲಿ ನಗುವೆಂಬ ಗುಲಾಬಿಯನ್ನು ಅರಳಿಸುವ ಪ್ರೆಮಿಯಾಗಲೇ
ನಾಲಿಗೆ ಮೇಲಿರುವವರೆಗೆ ಸಿಹಿ ನೀಡುವ ಚಾಕಲೇಟ್ ಕೊಟ್ಟು ಪ್ರೇಮಿಯಾಗಲೇ
ಇಲ್ಲ ನಿನ್ನ ಹೃದಯದೊಳಗೆ ಪ್ರೀತಿಯ ಸಿಹಿ ಸಿಂಚನ ಮೂಡಿಸುವ ಪ್ರೇಮಿಯಾಗಲೇ
ಎಲ್ಲರಂತೆ ಗಂಟೆ ಗಟ್ಟಲೆ ಫೋನಿನಲ್ಲೇ ಮಾತಾಡಲಾರೆ,
ಆದರೆ ಮಾತಾಡಿದಾಗಲೆಲ್ಲ ನಿನ್ನ ಪ್ರೀತಿಯ ದನಿಯಾಗುವೆ
ದಿನವು ಮಾರ್ಕೆಟ್ ಮಾಲ್ ಎಂದು ಸುತ್ತಿಸಲಾರೆ,
ಆದರೆ ಹೊರಗೆ ಹೋಗುವಾಗ ನಾ ನಿನ್ನ ಜೊತೆಗಿರುವೆ
ಹೇಗೆ ಆರಂಭವಾಯ್ತು ನಾ ಅರಿಯೆ,ಎಲ್ಲಿಂದ ಪ್ರಾರಂಭವಾಯ್ತು ನಾ ತಿಳಿಯೆ
ಆರಂಭ ಪ್ರಾರಂಭ ಬೇಕಿಲ್ಲ ಎನಗೆ, ಅಂತ್ಯವಾಗದಿರಲಿ ಈ ಪ್ರೀತಿ ಸಾಕೆನಗೆ
ನಗುವಿರಲಿ ಅಳುವಿರಲಿ ನಾ ನಿನ್ನ ಜೊತೆಗಿರುವೆ,
ಹಗಲಿರಲಿ ಇರುಳಿರಲಿ ನಿನ್ನೊಡನೆ ಇರಲು ಬಯಸುವೆ
ನಿನ್ನ ಮನಸ್ಸಿನ ಮಾತು ಕೂಡ ಇದೆ ಎಂದು ಭಾವಿಸಿರುವೆ
ಬೈದನೆಂದರೆ ಬೈಗುಳವಲ್ಲ ಅದು ನಿನ್ನ ಮೇಲಿನ ಕಾಳಜಿಯಷ್ಟೇ
ಕೋಪಿಸಿ ಕೊಂಡರೆ ಅದು ಕೊಪವಲ್ಲ ಅದು ಹುಸಿಮುನಿಸಷ್ಟೇ
ಪ್ರೀತಿಯಿಲ್ಲದ
ಕೋಪ ಕೊಪವಲ್ಲ. ಕೊಪವಿಲ್ಲದ ಪ್ರೀತಿ ಪ್ರೀತಿಯಲ್ಲ
ಬರೆಯುತ್ತಾ
ಕುಳಿತರೆ ಅಕ್ಷರೆಗಳಿಗೆ ಅಂತ್ಯವೇ ಇಲ್ಲ, ಹಾಗೆ ನನ್ನ ಪ್ರೀತಿಗೆ ಎಂದಿಗೂ ಬರ ಇಲ್ಲ
ಪ್ರೀತಿಸುವೆ
ಎಂದು ಆಗಾಗ ಹೇಳಲ್ಲ ,ಹಾಗಂತ ನನ್ನ ಪ್ರೀತಿಗೆ ಕೊರತೆ ಇಲ್ಲ
ಪ್ರೀತಿ ಹೇಳುವಂತದಲ್ಲ
ಮುಚ್ಚಿಡುವಂತದಲ್ಲ, ಕೊನೆಯವರೆಗೂ ಇರುವಂಥದ್ದು
ಆದಿ ಅಂತ್ಯ
ಇಲ್ಲದ ಪ್ರೀತಿ ನಮ್ಮದಾಗಲಿ ಎಂಬ ಹಾರೈಕೆಯೊಂದಿಗೆ -
- ಪ್ರೇಮಿಗಳ ದಿನದ ಪುಟ್ಟ ಕಾಣಿಕೆ (ಅಕ್ಷರಗಳ ಪೋಣಿಕೆಯ ಮೂಲಕ)