Monday, February 4, 2013

ಡೈರೆಕ್ಟರ್ಸ್ ಸ್ಪೆಷಲ್ (Directors Special)

ಮಠ, ಎದ್ದೇಳು  ಮಂಜುನಾಥ , ಹುಡುಗರು ಈ  ಎಲ್ಲಾ ಚಿತ್ರಗಳನ್ನು ನೋಡಿರುವವರಿಗೆ ಕನ್ನಡ ಚಿತ್ರರಂಗದಲ್ಲಿ ಒಬ್ಬ ತೆರೆಮರೆಯ ಡೈಲಾಗ್ ಕಿಂಗ್ ನ ಡೈಲಾಗ್ ಗಳ ಅನುಭವ ಆಗಿರುತ್ತೆ . ಡೈಲಾಗ್ ಕಿಂಗ್ ಎಂದಾಕ್ಷಣ ಸಾಯಿಕುಮಾರ್ ಎಂಬ ಒಬ್ಬ ಉತ್ತಮ ಕಲಾವಿದನ ನೆನಪಾಗುತ್ತೆ, ಅದೇ ರೀತಿ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಡೈಲಾಗ್ ಗಳನ್ನೂ  ಬರೆಯುವ  ನಿರ್ದೇಶಕ ಗುರುರಾಜ್ ಕೂಡ ಒಬ್ಬ ತೆರೆ ಮರೆಯ ಡೈಲಾಗ್ ಕಿಂಗ್ ಎಂದರೆ ತಪ್ಪಾಗಲ್ಲ.
          ಪಡ್ಡೆ ಹುಡುಗರ ಬಾಯಲ್ಲಿ ಬರುವಂತ ಒಂದು ಡೈಲಾಗ್ ಹುಡುಗರು ಚಿತ್ರದಿಂದ "ಚಡ್ಡಿ VIP  ಆಗಿರಲಿ Jockey  ಆಗಿರಲಿ ಚನ್ನಾಗಿ ತೊಳಿಬೇಕು ಇಲ್ಲಾಂದ್ರೆ ಬುಡಕ್ಕೆ ಬಂದು ಬಿಡುತೆ. ಫಿಲಂ ನಲ್ಲಿ ಬಿಡಿ ಸಾದರಣವಾದ ಡೈಲಾಗ್ ಗಳು ಕೂಡ ಸಂದರ್ಭ ಹಾಗೂ ಡೈಲಾಗ್ ಡೆಲಿವರಿ ಮಾಡುವ ನಟನ ಚಾಕಚಕ್ಯಥೆಯಿಂದಲೂ ಉತ್ತಮವಾದ ಡೈಲಾಗ್ ಗಳಾಗಿ ಬಿಡುತವೆ. ಆದರೆ ಗುರುರಾಜರ ಡೈಲಾಗ್ ಗಳು ಒಂಥರಾ ವಿಭಿನ್ನ ಅದಕ್ಕೆ ಅವರು ಬರೆದಿರುವ ಕಥೆಗಳಿಂದ ಆರಿಸಿದ ಕೆಳಗಿನ ತುಣುಕುಗಳೇ  ಸಾಕ್ಷಿ 

ಕಥೆ : ಎಣ್ಣೆ ಹೊಡೆಯುವಾಗ ಬರೆದ ಕಥೆ.... ಕಥೆಯಲ್ಲಿನ ಸಂದರ್ಭ ಪ್ರೇಮ ವೈಫಲ್ಯ 
*******************************************************************************

೧.  ಸಂಜೆಯಾಗುತ್ತಿದ್ದಂತೆ ಆತ ಅಲ್ಲಿ ಬಂದು ಕೂರುತ್ತಾನೆ. ಗುಡ್ಡದ ಕೆಳಗಿನ ಪ್ರಪಾತವನ್ನೇ ದಿಟ್ಟಿಸುತ್ತಾ.. ಕೈಗೆ ಸಿಗುವ ಒಂದೊಂದೇ ಗರಿಕೆಯನ್ನು ಕಿತ್ತು ಬುಡದ ರಸವನ್ನು ಹೀರುತ್ತಾ.. ಮುಖ್ಯವಾಗಿ ಅವಳನ್ನು ನೆನೆಯುತ್ತಾ.! ತಾನು ಸತ್ತು ಎರಡು ತಿಂಗಳಾಯಿತು.. ಆತ್ಮಹತ್ಯೆ ಮಹಾಪಾಪ ಅಂತ ತೀರ್ಮಾನವಾಗಿ ಅವನಿಗೆ ಘೋರ ಶಿಕ್ಷೆಯೂ ಆಯಿತು.. ಅವನು ಅದಕ್ಕೆ ಒಗ್ಗಿ ಹೋಗಿದ್ದು ಆಯಿತು.. ಭೂಮಿಯಲ್ಲಿ ಇವನ ಹುಡುಗಿಗೆ ಮದುವೆಯಾಗಿದ್ದೂ ಆಯಿತು.. ಇವನೂ ಹೋಗಿದ್ದ ಮದುವೆಗೆ ಹಾರಿಕೊಂಡು. ಏನೂ ಆಗದವಳಂತೆ ಅವಳು ನಗುನಗುತ್ತಾ ತಾಳಿ ಕಟ್ಟಿಸಿಕೊಳ್ಳುತ್ತಿದ್ದಾಳೆ. ಮುಯ್ಯಿ ಇಸ್ಕೋತ್ತಿದ್ದಾಳೆ. ಬಂದವರಿಗೆ ಊಟ ಮಾಡಿಕೊಂಡು ಹೋಗಿ ಅನ್ನುತ್ತಿದ್ದಾಳೆ.. ತನಗೇನು ಊಟ ಹಾಕಿಸ್ತಾಳೋ.. ತನಗೆ ಎಡೆಯಿಟ್ಟವಳು..

********************************************************************************

೨.  ದಿಕ್ಕು ತೊಚಿದ ಕಡೆಗೆ.. ನೀವು ಮಾತ್ರ ಈ ಮರ ಬಿಟ್ಟು ಎಲ್ಲೂ ಹೋಗಲ್ಲಾ.. ಯಾಕೆ ಅಂತ ತಿಳ್ಕೋಬೋದಾ..?'
'ಏನೋ.. ಬೇಜಾರು..'
'ಅದೇ ಏನೂಂತ ತಿಳ್ಕೊಬೋದಾ..?'
'ನಾನು ತುಂಬಾ ಪ್ರೀತಿಸಿದ್ದ ಹುಡುಗಿ ನನಗೆ ಮೋಸ ಮಾಡಿದಳು.. ಆಶ್ಚರ್ಯ ಗೊತ್ತಾ.. ನಾನು ಸತ್ತಿದ್ದು ಅವಳಿಗಿನ್ನೂ ಗೊತ್ತೇ ಇಲ್ಲ.. ಹ್ಹ..ಹ್ಹ..' ಅವನ ಕಣ್ಣಲ್ಲಿ ನೀರು..
'ಕ್ಷಮಿಸಿ.. ನನಗೆ ಇದು ಗೊತ್ತಿರಲ್ಲಿಲ್ಲ.. ಹಳೇದನ್ನು ಕೆದಕಿ ನಿಮಗೆ ನೋವುಂಟು ಮಾಡಿದೆನಾ..?'
********************************************************************************

೩.  ನೀವು ನಿಮ್ಮ ಹುಡುಗಿಯನ್ನ ತುಂಬಾ ಪ್ರೀತಿಸುತ್ತಿದ್ದರಾ..? ಎಷ್ಟು..?'
'ನೀವು ಬಹುಶಃ ಎಲ್ಲೂ ಕೇಳಿರದ ಪ್ರೇಮಕತೆ ನಮ್ಮದು..'
'ನಾನು ಅದನ್ನು ತಿಳ್ಕೋಬೋದಾ..? ನಿಮಗೆ ನೊವಾಗುತ್ತೆ ಅಂದ್ರೆ ಬೇಡಾ..'
'ಗಂಡಸಿನ ಸಮಸ್ಯೆಯೇ ಅದು.. ಅವನು ನೋವನ್ನು ತುಂಬಾ ದಿನ ಆಚರಿಸ್ತಾನೆ.. ಅದನ್ನ ಎಲ್ಲರ ಹತ್ತಿರ ಹೇಳಿಕೊಳ್ತಾ ತಾನು ವಿಶೇಷ ಎಂಬ ಭಾವವನ್ನ ಆನಂದಿಸ್ತಾನೆ..'
********************************************************************************೪೪. ನೀನು ನನ್ನನ್ನು ಪ್ರಪಂಚದಲ್ಲೇ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸೋದಾದರೆ, ನನ್ನ ಒಳಿತನ್ನೇ ಬಯಸೋದಾದರೆ ನನ್ನನ್ನ ಈ ಕ್ಷಣದಿಂದ ಮರೆತು ಬಿಡು.. ನಾನು ಮದುವೆಯಾಗ್ತಿದ್ದೀನಿ..'

'ತಮಾಷೆ ಮಾಡ್ತಿದ್ದಾಳೇನೋ ಅಂದ್ಕೊಂಡೆ.. ನೋಡಿ ಅಲ್ಲೂ ನಾನವಳನ್ನ ಸರಿಯಾಗಿ ಅರ್ಥ ಮಾಡ್ಕೊಳ್ಳಲ್ಲಿಕ್ಕೆ ಆಗ್ಲಿಲ್ಲ.. ಹ್ಹ..ಹ್ಹ..
*********************************************************************************
ಮೇಲಿನ ಎಲ್ಲಾ ಡೈಲಾಗ್ ಗಳು ಎಲ್ಲರಿಗೂ ಅರ್ಥವಾಗುತ್ಹೋ ಇಲ್ಲವೋ  ಗೊತ್ತಿಲ್ಲ ಆದರೆ ಪ್ರೀತಿಯಲ್ಲಿ ಸೋತ ಪ್ರತಿಯೊಬ್ಬರಿಗೂ ಅರ್ಥವಾಗುತ್ತೆ 

No comments:

Post a Comment