Monday, April 4, 2016

ಏನೋ ಮಾಡಲು ಹೋಗಿ ಏನು ಮಾಡಿದೆ ನೀನು ಏಳು ಸುತ್ತಿನ ಕೋಟೆ ಚಿತ್ರದ ಗೀತೆ

ಏನೋ ಮಾಡಲು ಹೋಗಿ ಏನು ಮಾಡಿದೆ ನೀನು 
ನೀತಿ ಹೇಳುವ ನೀನೆ ನೀತಿಯನ್ನು ಮುರಿದೆ 
ಬಾಯಿ ಇದ್ದರೂ ಮೂಕನಾದೆ.. ಬಾಯಿ ಇದ್ದರೂ ಮೂಕನಾದೆ
ನೋ ಮಾಡಲು ಹೋಗಿ ಏನು ಮಾಡಿದೆ ನೀನು 

ಮುಳ್ಳಲ್ಲಿ  ನಡೆಯುದಕ್ಕೆ ಎಚ್ಚರಿಕೆ ಬೇಕು ಎಚ್ಚರಿಕೆ ಬೇಕು
ಜಗದೆಲ್ಲ ಕತ್ತಲೆಗೆ ನೀನಲ್ಲ ಬೆಳಕು ನೀನಲ್ಲ ಬೆಳಕು 
ಒಂದು ರೋಗದ ರೆಂಬೆ ಕಡಿದು ಗೆಲ್ಲುವೆನೆಂದೆ...  ಒಂದು ರೋಗದ ರೆಂಬೆ ಕಡಿದು ಗೆಲ್ಲುವೆನೆಂದೆ. 
ಕೋಟಿ ಬೇರುಗಳಿಂದ ನರಳುತಿದೆ ಬದುಕು 
ನೋ ಮಾಡಲು ಹೋಗಿ ಏನು ಮಾಡಿದೆ ನೀನು 

ವಿಷದ ಬಳ್ಳಿಯ ಜೊತೆ ಹೂ ಗಿಡವ ಕಡಿದೆ ಒಂದು ಕೋಪಕೆ ಎರಡು ಪಾಪಗಳ ಬೆಳೆದೆ.
ಎಲ್ಲ ಬದಲಿಸಬಲ್ಲ ವಿಧಿಯು ನೀನಲ್ಲ. ಎಲ್ಲ ಬದಲಿಸಬಲ್ಲ ವಿಧಿಯು ನೀನಲ್ಲ
ಇದ್ದಂತೆ ಜಗವಿಹುದು ನೀನು ಬದಲಾದೆ
ನೋ ಮಾಡಲು ಹೋಗಿ ಏನು ಮಾಡಿದೆ ನೀನು 

ಹೆತ್ತೊಡಲು ತುಡಿಯುತಿದೆ ತಳಮಳಿಸಿ ನೊಂದು
ಅಕ್ಕರೆಯ ಸೋದರಿಗೆ ತಣ್ಣೀರ ಬಿಂದು
ನಿನ್ನಿಂದ ಸುಖವಿಲ್ಲ ನಿನ್ನೊಳಗು ಸುಖವಿಲ್ಲ. ನಿನ್ನಿಂದ ಸುಖವಿಲ್ಲ ನಿನ್ನೊಳಗು ಸುಖವಿಲ್ಲ
ಏಳು ಸುತ್ತಿನ ಕೋಟೆ ಸೆರೆಯಾದೆ ಇಂದು.. ಏಳು ಸುತ್ತಿನ ಕೋಟೆಯಲ್ಲಿ ಸೆರೆಯಾದೆ 

No comments:

Post a Comment