Thursday, April 14, 2016

ಅನಾಥ ಮಗುವಾದೆ ನಾನು ಹೊಸ ಜೀವನ ಚಿತ್ರದ ಗೀತೆ

ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ. ಅನ್ನ್ನು ತಮ್ಮನು ಇಲ್ಲ.
ಭಿಕಾರಿ ದೊರೆಯಾದೆ ನಾನು
ಅತ್ತರೆ ಮುದ್ದಿಸೋರಿಲ್ಲ ಸತ್ತರೆ ಹೊದಿಸೋರಿಲ್ಲ 
ಎಂಜಲೇ ಮೃಷ್ಟನ್ನಾವಾಯ್ತು  ಬೈಗುಳೇ ಮೈಗೂಡಿ ಹೋಯ್ತು 
ಈ ಮನಸ್ಸೇ ಕಲ್ಲಾಗಿ ಹೋಯ್ತು 
ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ. ಅಣ್ಣನು ತಮ್ಮನು ಇಲ್ಲ.

ಬೀದಿಗೆ ಒಂದು ನಾಯಿ ಕಾವಲಂತೆ
ನಾಯಿಗೆ ಒಂದು ರೊಟ್ಟಿ ಮೀಸಲಂತೆ
ನಾಯಿಗೂ ಹೀನನಾದೆ ನಾ
ಮಾಳಿಗೆಗೆ ಒಂದು ಬೆಕ್ಕು ಮೀಸಲಂತೆ
 ಬೆಕ್ಕಿಗೂ ನಿತ್ಯ ಹಾಲು ತುಪ್ಪವಂತೆ
ಬೆಕ್ಕಿಗಿಂತ ಕೆಟ್ಟ ಶಕುನ ನಾ
ತಿಂದೊರು ಎಲೆಯ ಬಿಸಾಡೋ ಹಾಗೆ ಹೆತ್ತೋರು ನನ್ನ ಎಸೆದಾಯ್ತು. 
ಸತ್ತೋರ ಎಲೆಯ ಕಾಗೆಗೆ ಇರಿಸಿ ಹೆತ್ತೋರ ಕೂಗಿ ಕರೆದಾಯ್ತು 
ಉತ್ತರ ಇಲ್ಲ, ಪ್ರಶ್ನೆಯೇ ಎಲ್ಲ, ಕೇಳೋ ದೇವನೇ. 

 
ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ. ಅಣ್ಣನು ತಮ್ಮನು ಇಲ್ಲ.
ನನ್ನ ಇತ್ತರಲ್ಲ ತಿಪ್ಪೆ ತೊಟ್ಟಿಯಲ್ಲಿ
ಹುಟ್ಟೋ ಮಕ್ಕಳೆಲ್ಲ ತೂಗೋ ತೊಟ್ಟಿಲಲ್ಲಿ 
ನಾನು ಏನು ಪಾಪ ಮಾಡಿದೆ 
ಅರ್ಧ ರಾತ್ರಿಯಲ್ಲಿ. ಅರ್ಧ ನಿದ್ದೆಯಲ್ಲಿ 
ತಾಯಿ ಹಾಲು ಎಲ್ಲಿ, ಲಾಲಿ ಹಾಡು ಎಲ್ಲಿ 
ನಾನು ಯಾವ ದ್ರೋಹ ಮಾಡಿದೆ. 
ಭೂಮಿಯ ತುಂಬಾ ಅನಾಥರೆಂಬ ಕೋಟ್ಯಾನು ಕೋಟಿ ಕೂಗು ಇದೆ. 
ಗ್ರಹಚಾರಬ ಬರೆಯೋ ಆ ಬ್ರಹ್ಮ ನಿನಗೆ ಎಂದೆಂದೂ ಅವರ ಶಾಪ ಇದೆ. 
ಉತ್ತರ ಇಲ್ಲ, ಪ್ರಶ್ನೆಯೇ ಎಲ್ಲ, ಕೇಳೋ ದೇವನೇ.

ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ. ಅಣ್ಣನು ತಮ್ಮನು ಇಲ್ಲ.
ಭಿಕಾರಿ ದೊರೆಯಾದೆ ನಾನು
ಅತ್ತರೆ ಮುದ್ದಿಸೋರಿಲ್ಲ ಸತ್ತರೆ ಹೊದಿಸೋರಿಲ್ಲ 
ಎಂಜಲೇ ಮೃಷ್ಟನ್ನಾವಾಯ್ತು  ಬೈಗುಳೇ ಮೈಗೂಡಿ ಹೋಯ್ತು 
ಈ ಮನಸ್ಸೇ ಕಲ್ಲಾಗಿ ಹೋಯ್ತು 
ಅನಾಥ ಮಗುವಾದೆ ನಾನು

ಅಪ್ಪನು ಅಮ್ಮನು ಇಲ್ಲ. ಅಣ್ಣನು ತಮ್ಮನು ಇಲ್ಲ.


No comments:

Post a Comment