ಕೈ ತುತ್ತು ಕೊಟ್ಟೋಳೇ ಐ ಲವ್ ಯು ಮೈ ಮದರ್ ಇಂಡಿಯಾ ಕಲಿಯುಗ ಭೀಮ ಚಿತ್ರದ ಗೀತೆ
ಈ ತಾಯಿಯ ಹಾರ್ಟು ಆ ಮೌಂಟ್ ಎವೆರೆಸ್ಟು
ಆ ಶಿಖರದ ಹೈಟು ಅಹಾ ತಿಳಿದವರೆಸ್ಟು
ಕೈ ತುತ್ತು ಕೊಟ್ಟೋಳೇ ಐ ಲವ್ ಯು ಮೈ ಮದರ್ ಇಂಡಿಯಾ
ಯಾವತ್ತು ಕಾಯೋಳೆ ಐ ಡೋಂಟ್ ಲೀವ್ ಮೈ ಮದರ್ ಇಂಡಿಯಾ ಮದರ್ ಇಂಡಿಯಾ
ತಾಯಿಗೆ ಮಿಗಿಲಾದ ಗಾಡ್ ಇಲ್ಲ ಅಂತ ನಂಬಿರೋ ಸನ್ ಇವ್ನೆಯಾ
ಬಾಯಿಗೆ ತುತ್ತಿಟ್ಟ ಮಮ್ಮಿಗೆ ಪ್ರಾಣ ನೀಡುವೆ ನೀ ಕಂಡೆಯ.
ಕೈ ತುತ್ತು ಕೊಟ್ಟೋಳೇ ಐ ಲವ್ ಯು ಮೈ ಮದರ್ ಇಂಡಿಯಾ
ಫುಡ್ ಇಲ್ದೆ ಕ್ಲಾತ್ ಇಲ್ದೆ ನಿಂತಿದ್ದೆ ನಾನು ಫುಟ್ಪಾತಲ್ಲಿ ಒಂದು ದಿನ
ಕಣ್ ಇದ್ದು ನೋಡದೆ ಹೋದರು ಫುಡು ಕ್ಲಾತು ಇದ್ದ ಎಷ್ಟೋ ಜನ
ಮುಚ್ಚಿದ ಕಣ್ಣಿನ ಮೇಲಿದ್ದ ನೋವು ಮುಟ್ಟಿತು ಒಂದು ಕೈ
ಮುಚ್ಚಿದ ಕಣ್ಣಿನ ಮೇಲಿದ್ದ ನೋವು ಮುಟ್ಟಿತು ಒಂದು ಕೈ
ಅತ್ತಿದ್ದ ಕೆನ್ನೆಗೆ ಮೆತ್ತಿದ್ದ ಬಿಸಿ ಕಂಬನಿ ಒರಸಿತು ಒರಸಿತು ಆ ಕೈ
ಕೊಡುಗೈ ದೇವರನ್ನು ನಾ ಕಾಣೆ ನಂಗೆ ನೀನೆ ದೈವವೆ ನಿನ್ನ ಆಣೆ
ಕೈ ತುತ್ತು ಕೊಟ್ಟೋಳೇ ಐ ಲವ್ ಯು ಮೈ ಮದರ್ ಇಂಡಿಯಾ ಮದರ್ ಇಂಡಿಯಾ
ಕೊಡುಗೈ ದೇವರನ್ನು ನಾ ಕಾಣೆ ನಂಗೆ ನೀನೆ ದೈವವೆ ನಿನ್ನ ಆಣೆ
ಕೈ ತುತ್ತು ಕೊಟ್ಟೋಳೇ ಐ ಲವ್ ಯು ಮೈ ಮದರ್ ಇಂಡಿಯಾ ಮದರ್ ಇಂಡಿಯಾ
ಬೆಡ್ ಇಲ್ದೆ ಬ್ಲಡ್ ಇಲ್ದೆ ಮಲಗಿದ್ದೆ ನಾನು ಸರಕಾರಿ ಆಸ್ಪತ್ರೇಲಿ
ನನ್ನ ಅಮ್ಮ ಅಲ್ಲಿಗೆ ಬರದಿದ್ದರೆ ನನ್ನ ಡೆಡ್ ಬಾಡಿ ಶೋಕೆಸ್ಲಿ
ಬಂದಳು ನನ್ನ ಅಮ್ಮ ಬಂದಳು ಎಲ್ಲ ದೇವರ ನಡುಗಿಸಲು ಪ್ರೀತಿಯ ಔಷದ ಬಾಡಿ ಗೆ ಕೊಟ್ಟು ಮಗನನ್ನು ಬದುಕಿಸಲು
ಅಮ್ಮ ಎಂಬ ಮಾತಲ್ಲಿ ಇದೆಯೋ ಮೆಡಿಸಿನ್ ಮಗನೆ ಎಂದ ಕೂಡಲೇ ಲೈಫ್ ಮೈ ಸನ್
ಕೈ ತುತ್ತು ಕೊಟ್ಟೋಳೇ ಐ ಲವ್ ಯು ಮೈ ಮದರ್ ಇಂಡಿಯಾ ಮದರ್ ಇಂಡಿಯಾ
ಹ್ಯಾಂಡ್ ಕೆಸರಾದರೆ ತಾನೆ ನಮ್ ಮುಖ ಮೊಸರಾಗುವುದು
ಹ್ಯಾಂಡ್ ಕೆಸರಾದರೆ ತಾನೆ ನಮ್ ಮುಖ ಮೊಸರಾಗುವುದು
ವರ್ಕೆ ವರ್ಶಿಪ್ ಎಂದರೆ ಸುತ್ತೋ ಗ್ಲೋಬಲ್ಲಿ ಹೆಸರು ಉಳಿಯೋದು
ದೇವರು ಕೊಟ್ಟಿದ್ದು ಹಂಚೋಕೆ ಕೂಡಿ ಇಟ್ಟರೆ ತಪ್ಪು ಮಗ
ಬಡವರ ಸೇವೆಯೇ ಪೂಜೆಯು ಅಂದ ಮಮ್ಮಿಗೆ ಜೈ ಜೈ
ನಾನೇ ಕರುವು ಆದರೆ ಅವಳೇ ಹಸುವು
ಅಂಬಾ ಎಂದ ಕೂಡಲೇ ಇರದು ಹಸಿವು
ಯಾವತ್ತು ಕಾಯೋಳೆ ಐ ಡೋಂಟ್ ಲೀವ್ ಮೈ ಮದರ್ ಇಂಡಿಯಾ ಮದರ್ ಇಂಡಿಯಾ
ತಾಯಿಗೆ ಮಿಗಿಲಾದ ಗಾಡ್ ಇಲ್ಲ ಅಂತ ನಂಬಿರೋ ಸನ್ ಇವ್ನೆಯಾ
ಬಾಯಿಗೆ ತುತ್ತಿಟ್ಟ ಮಮ್ಮಿಗೆ ಪ್ರಾಣ ನೀಡುವೆ ನೀ ಕಂಡೆಯ.
ಕೈ ತುತ್ತು ಕೊಟ್ಟೋಳೇ ಐ ಲವ್ ಯು ಮೈ ಮದರ್ ಇಂಡಿಯಾ
No comments:
Post a Comment