Monday, May 16, 2016

ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದ ಗೀತೆ .


ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆಯ ಮೇಲೆ
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ

ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ
ಅನಸೂಯೆ ಜೋಗುಳ ಹಾಡಿ ನಲಿದ ರೀತಿ ।।೨।।
ನಿನ್ನ ಮಹಿಮೆಯ ಪಾಡಿ..ಪಾದ ಸೇವೆಯ ಮಾಡಿ. ಆ .... ಆಆ ... ಆಆಆ ....
ನಿನ್ನ ಮಹಿಮೆಯ ಪಾಡಿ..ಪಾದ ಸೇವೆಯ ಮಾಡಿ
ಧನ್ಯನಾಗುವೆ ಇಂದು ಕರುಣಿಸೋ ದಯ ಮಾಡಿ....

ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆಯ ಮೇಲೆ
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ


ಇರುಳು ಮುಗಿಯದೆ ಇರಲಿ ಹಗಲು ಮೂಡದೆ ಇರಲಿ
ಅನುಗಾಲ ಈ ಸೇವೆ ಸಾಗುತಲೆ ಇರಲಿ ।।೨।।
ಭಕ್ತಿ ಅರಿತವನಲ್ಲ. ಮುಕ್ತಿಯೂ ಬೇಕಿಲ್ಲ
ಭಕ್ತಿ ಅರಿತವನಲ್ಲ. ಮುಕ್ತಿಯೂ ಬೇಕಿಲ್ಲ
ನಿನ್ನ ಕಾಣದೆ ಜೀವ ಕ್ಷಣ ಕಾಲ ನಿಲ್ಲದಯ್ಯ

ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆಯ ಮೇಲೆ
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ


No comments:

Post a Comment