ಒಂದೇ ಸಮನೆ ನಿಟ್ಟುಸಿರು
ಪಿಸುಗುಡುವ ತೀರದ ಮೌನ
ತುಂಬಿ ತುಳುಕೊ ಕಂಗಳಲ್ಲಿ
ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯೊಳಗೆ
ಕಾಲಿಡದೆ ಕೊಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ
ಮಳೆ ಬಿಲ್ಲಿನಂತೆ ನೋವು
ಕೊನೆ ಇರದ ಏಕಾಂತವೇ ಒಲವು
ಒಂದೇ ಸಮನೆ ನಿಟ್ಟುಸಿರು
ಪಿಸುಗುಡುವ ತೀರದ ಮೌನ
ತುಂಬಿ ತುಳುಕೊ ಕಂಗಳಲ್ಲಿ
ಕರಗುತಿದೆ ಕನಸಿನ ಬಣ್ಣ
ಜೀವ ಕಳೆವ ಅಮೃತಕ್ಕೆ
ಒಲವೆಂದು ಹೆಸರಿಡಬಹುದೆ
ಪ್ರಾಣ ಉಳಿಸೋ ಕಾಯಿಲೆಗೆ
ಪ್ರೀತಿ ಎಂದೆನ್ನಬಹುದೆ
ಹೊಂಗನಸ ಚಾದರದಲ್ಲಿ
ಮುಳ್ಳಿನ ಹಾಸಿಗೆಯಲಿ ಮಲಗಿ
ಯಾತನೆಗೆ ಮುಗಳ್ನಗು ಬರಲು
ಕಣ್ಣ ಹನಿ ಸುಮ್ಮನೆ ಒಳಗೆ
ಅವಳನ್ನೇ ಜಪಿಸುವುದೇ ಒಲವೇ
ಜೀವ ಕಳೆವ ಅಮೃತಕ್ಕೆ
ಒಲವೆಂದು ಹೆಸರಿಡಬಹುದೆ
ಪ್ರಾಣ ಉಳಿಸೋ ಕಾಯಿಲೆಗೆ
ಪ್ರೀತಿ ಎಂದೆನ್ನಬಹುದೆ
ನಾಲ್ಕು ಪದದ ಗೀತೆಯಲ್ಲಿ
ಮಿಡಿತಗಳ ಬಣ್ಣಿಸಬಹುದೆ
ಮೂರು ಸ್ವರದ ಹಾಡಿನಲ್ಲಿ
ಹೃದಯವನ್ನು ಹಾರಿಬಿಡಬಹುದೆ
ಉಕ್ಕಿ ಬರುವ ಕಂಠದಲ್ಲಿ
ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವ ಎದೆಯೊಳಗೆ
ನಗುತಲಿದೆ ಮಡಿದ ಕವನ
ಒಂಟಿತನದ ಗುರುವೇ ಒಲವು
ಪಿಸುಗುಡುವ ತೀರದ ಮೌನ
ತುಂಬಿ ತುಳುಕೊ ಕಂಗಳಲ್ಲಿ
ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯೊಳಗೆ
ಕಾಲಿಡದೆ ಕೊಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ
ಮಳೆ ಬಿಲ್ಲಿನಂತೆ ನೋವು
ಕೊನೆ ಇರದ ಏಕಾಂತವೇ ಒಲವು
ಒಂದೇ ಸಮನೆ ನಿಟ್ಟುಸಿರು
ಪಿಸುಗುಡುವ ತೀರದ ಮೌನ
ತುಂಬಿ ತುಳುಕೊ ಕಂಗಳಲ್ಲಿ
ಕರಗುತಿದೆ ಕನಸಿನ ಬಣ್ಣ
ಜೀವ ಕಳೆವ ಅಮೃತಕ್ಕೆ
ಒಲವೆಂದು ಹೆಸರಿಡಬಹುದೆ
ಪ್ರಾಣ ಉಳಿಸೋ ಕಾಯಿಲೆಗೆ
ಪ್ರೀತಿ ಎಂದೆನ್ನಬಹುದೆ
ಹೊಂಗನಸ ಚಾದರದಲ್ಲಿ
ಮುಳ್ಳಿನ ಹಾಸಿಗೆಯಲಿ ಮಲಗಿ
ಯಾತನೆಗೆ ಮುಗಳ್ನಗು ಬರಲು
ಕಣ್ಣ ಹನಿ ಸುಮ್ಮನೆ ಒಳಗೆ
ಅವಳನ್ನೇ ಜಪಿಸುವುದೇ ಒಲವೇ
ಜೀವ ಕಳೆವ ಅಮೃತಕ್ಕೆ
ಒಲವೆಂದು ಹೆಸರಿಡಬಹುದೆ
ಪ್ರಾಣ ಉಳಿಸೋ ಕಾಯಿಲೆಗೆ
ಪ್ರೀತಿ ಎಂದೆನ್ನಬಹುದೆ
ನಾಲ್ಕು ಪದದ ಗೀತೆಯಲ್ಲಿ
ಮಿಡಿತಗಳ ಬಣ್ಣಿಸಬಹುದೆ
ಮೂರು ಸ್ವರದ ಹಾಡಿನಲ್ಲಿ
ಹೃದಯವನ್ನು ಹಾರಿಬಿಡಬಹುದೆ
ಉಕ್ಕಿ ಬರುವ ಕಂಠದಲ್ಲಿ
ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವ ಎದೆಯೊಳಗೆ
ನಗುತಲಿದೆ ಮಡಿದ ಕವನ
ಒಂಟಿತನದ ಗುರುವೇ ಒಲವು
Correction:
ReplyDeleteಎದೆಯ ಜೋಪಡಿಯ ಒಳಗೆ
ಕಾಲಿಡದೆ ಕೊಲುತಿದೆ ಒಲವು
Thank you for highlighting the error its corrected now..
Delete