ಹಸೆ ಬರೆಯುವುದು : ಮದರಂಗಿ ಶಾಸ್ತ್ರಕ್ಕೆ ಕುಳ್ಳಿರಿಸಿದ ನಂತರ ಮನೆಯ ಯಜಮಾನ ತಂಬಿಗೆ ನೀರು ಕೊಟ್ಟು ಹಸೆ ಬರೆಯಲು ಕೇಳಿಕೊಳ್ಳುವರು ಊರುಗೌಡರ ಜವಾಬ್ದಾರಿಯ (ಸೋದರದವರು ಹಸೆ ಬರೆಯಬೇಕು.) ನಡುಮನೆಯ ಗೋಡೆಯಲ್ಲಿ ಪೂರ್ವಾಭಿಮುಖವಾಗಿ ಬರೆಯುವರು. ಬಲಬದಿಗೆ ಸೂರ್ಯ, ಎಡಬದಿಗೆ ಚಂದ್ರನ ಚಿತ್ರ ಬರುವಂತೆ ಚಿತ್ರಿಸುವುದು. ಬಲ ಬದಿಯ ಚಿತ್ರದ ಕೆಳಗೆ ವರನ ಹೆಸರು ಎಡಬದಿಯ ಚಿತ್ರದ ಕೆಳಗೆ ವಧುವಿನ ಹೆಸರು ಬರೆಯಬೇಕು. ಹಸೆ ಬರೆದು ಮುಗಿದ ನಂತರ ಹಸೆ ಬರೆದವರಿಗೆ ಮನೆಯೊಡತಿ ಅವಲಕ್ಕಿ, ಬಾಳೆಹಣ್ಣು, ಬೆಲ್ಲ ಇವುಗಳಿಂದ ಯಥೋಪಚಾರವಾಗಿ
ಉಪಚರಿಸಬೇಕು.
No comments:
Post a Comment