ಹಸೆ ಚಾಪೆ ಹಾಕುವುದು : ಹಸೆ ಬರೆದ ನಂತರ ಅದರಡಿಯಲ್ಲಿ 5 ಜನ ಮುತ್ತೈದೆಯರು
ಸೋಭಾನೆಯೊಂದಿಗೆ 5 ಕುಡ್ತೆ ಕುಚುಲು ಅಕ್ಕಿಯನ್ನು 5 ಸಾಲುಗಳಾಗಿ ಹಾಕುವರು. ನಂತರ ಎರಡು ಬದಿಯಲ್ಲಿ 5 ಎಲೆ, 1 ಅಡಿಕೆ ಇಡುವರು. ಸೋಭಾನೆಯೊಂದಿಗೆ ಅದರ ಮೇಲೆ ಹಸೆ ಚಾಪೆ ಹಾಕಿ ಅದರ ಮೇಲೆ ಕುಳಿತುಕೊಳ್ಳುವರು. ಇವರಿಗೆ ಮನೆಯ ಮುತ್ತೈದೆಯರು ತಲೆಗೆ ಎಣ್ಣೆ ಕೊಟ್ಟು ಹಸೆ ಚಾಪೆಯನ್ನು ಬಿಟ್ಟು ಕೊಡುವಂತೆ ವಿನಂತಿಸಿಕೊಳ್ಳುವರು. ಅವರು ಹಸೆ ಚಾಪೆಯಿಂದ ಏಳುವ ಮೊದಲು ಒಗ್ಗಿ ಹಾಕಿದ ತೆಂಗಿನಕಾಯಿಯನ್ನು ಚಾಪೆಯಲ್ಲಿಟ್ಟು ಏಳುವರು. (ತುಪ್ಪದ ಕ್ರಮ ಮುಗಿದ ನಂತರ ಹಸೆ ಚಾಪೆ ಹಾಗೂ ಅಕ್ಕಿ, ಎಣ್ಣೆ, ಅರಿಶಿನಕ್ಕೆ ಸಂಬಂಧಪಟ್ಟ ವಸ್ತ್ರವನ್ನು ಮಡಿವಾಳರು ತೆಗೆದುಕೊಂಡು ಹೋಗುವರು) ಕೈಯಲ್ಲಿಟ್ಟ ಮದರಂಗಿ ಚಿತ್ತಾರವು ಒಣಗಿದ ನಂತರ ವಧು/ವರರು ಕುಳಿತಲ್ಲಿಗೆ, ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ಕೈ ತೊಳೆಯುವರು. (ನೀರನ್ನು ಫಲ ಬರುವ ಮರದ ಬುಡಕ್ಕೆ ಹೊಯ್ಯುವರು) ಊರುಗೌಡರು ಒಕ್ಕಣೆಯೊಂದಿಗೆ ವಧು-ವರರನ್ನು ಎಬ್ಬಿಸುವರು.ನಂತರ ವಧು-ವರರನ್ನು ಒಳಗೆ ಕರೆದುಕೊಂಡು ಹಸೆ ಚಾಪೆಯಲ್ಲಿ ಒಕ್ಕಣೆಯೊಂದಿಗೆ ಕುಳ್ಳಿರಿಸುವರು. ಊರುಗೌಡರು 5 ಎಲೆ 1 ಅಡಿಕೆ ಅವರ ಕೈಯಲ್ಲಿಡಬೇಕು. ಒಂದು ಮಣೆ ಒಂದು ಚೆಂಬು, ಒಂದು ಕಾಲುದೀಪ ಇರಬೇಕು. ಒಂದು ಹರಿವಾಣದಲ್ಲಿ ಅಕ್ಕಿ, 5 ವೀಳ್ಯದೆಲೆ, 1 ಅಡಿಕೆ. ಇನ್ನೊಂದು ಹರಿವಾಣದಲ್ಲಿ ಹಾಲು ತುಪ್ಪ ಮಿಶ್ರಿತ ಬಳೆಗಳನ್ನು ಹಾಕಿಡಬೇಕು). ಕಾಲುದೀಪ ಹಚ್ಚಿರಬೇಕು. 5 ಜನ ಮುತ್ತೈದೆಯರು ಅಕ್ಕಿ ದೇಸೆ ಮಾಡಿ ಹಾಲು ತುಪ್ಪ ಶಾಸ್ತ್ರ ಮಾಡಬೇಕು.
No comments:
Post a Comment