Monday, August 5, 2013

ಸ್ನೇಹಿತರ ದಿನ

ನೆನೆ ನೆನೆಯುತಾ ಮಾತಾಡುವವರಿಗೆ  ಇಂದು ಸ್ನೇಹಿತರ ದಿನ.
ನಿಜವಾದ ಸ್ನೇಹಿತರಿಗೆ ಸ್ನೇಹ ಅನುದಿನ
ನಗು ನಗುತ ಮುಂದುವರೆಯಲಿ ಈ ಸ್ನೇಹ
ಕೊನೆಯಾಗದಿರಲಿ ಎಂದೆಂದಿಗೂ ಸಹ
ಎ ಸ್ನೇಹದ ಆರಂಭ ಆಕಸ್ಮಿಕ
ಅಂತ್ಯ    ಎಂಬ ಮಾತಿಲ್ಲಿ ಅನವಶ್ಯಕ

Friday, July 26, 2013

ಅಭಿನಂದನೆ

ನೀನೊಂದು ಜ್ಞಾನದ ಕಡಲು.
ಪ್ರೀತಿ ವಿಶ್ವಾಸದಿಂದ ಕೂಡಿದೆ ನಿನ್ನ ಒಡಲು
ಒಡಲ ಸೇರಲು ಹಾತೊರೆಯುತಿವೆ ನದಿಗಳ ಸಾಲು
ನಾನೊಂದು ಪುಟ್ಟ ತೊರೆ
ಆಲಿಸಲಾರೆ ದೂರದ ಕಡಲ ಕರೆ

ಆದರೂ ಅಭಿನಂದಿಸುವೆ ನಿನ್ನ ಮನಸಾರೆ

Saturday, March 23, 2013

Ivanu geleyanalla song lyrics from the Movie Mungaru Male

Ivanu geleyanalla, gelathi nanu modale alla,
ivanu iniyanalla, thumba saniha bandihanalla,
novinallu naguthihanalla, yake ithara
jana manave kelu jara beda ivana kadege
yake ninage sallada salige
irali anthara….

Ivanu geleyanalla…gelathi nanu modale alla

Olava hadiyalli ivanu nanage hoovo mullo
manada kadalinalli ivanu aleya bhikara suliyo
ariyadantha hosa kampanavo yako kanenu
aritha maretha jeeva valadanthe ivana kadege
soladanthe kaye manave
ulisu nannanu

Ivanu iniyanalla,thumba saniha bandihanalla

Thilidu thilidu ivanu thana thane sothihanalla
olume emba sulige eju barade ilidihanalla
savinallu naguvuda balla enu kalamala
muluguvavana koogu chachuvanthe madide kaiya
jaribiduvude e hrudaya eno talamala..
Ivanu iniyanalla,thumba saniha bandihanalla

ಇವನು ಗೆಳೆಯನಲ್ಲ (Ivanu geleyanall tumba saniha bandihanall from Mungaru male)

ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ ತುಂಬಾ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ ಯಾಕೆ ಈ ಥರ
ಜಾಣ ಮನವೇ ಕೇಳು ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅಂತರ


ಇವನು ಇನಿಯಲ್ಲ ತುಂಬ ಸನಿಹ ಬಂದಿಹನಲ್ಲ

ಒಲವ ಹಾದಿಯಲ್ಲಿ ಇವನು ನನಗೆ ಹೂವೋ ಮುಳ್ಲೋ       
ಮನದ ಕಡಲಿನಲ್ಲಿ ಇವನು ಅಲೆಯೋ ಭೀಕರ ಸುಳಿಯೊ
ಅರಿಯದಂಥ ಹೊಸ ಕಂಪನವೊ ಯಾಕೋ ಕಾಣೆನೊ
ಅರಿತೊ ಮರೆತೊ ಜೀವ ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯೇ ಮನವೆ ಉಳಿಸು ನನ್ನನು

ಇವನು ಇನಿಯಲ್ಲ ತುಂಬ ಸನಿಹ ಬಂದಿಹನಲ್ಲ

ತಿಳಿದು ತಿಳಿದು ಇವನು ತನ್ನ ತಾನೇ ಸುಡುತಿಹನಲ್ಲ
ಒಲುಮೆ ಎಂಬ ಸುಳಿಗೆ ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲು ನಗುವುದ ಬಲ್ಲ ಏನೋ ಕಳವಳ
ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯ
ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ 

ಇವನು ಇನಿಯನಲ್ಲ ತುಂಬ ಸನಿಹ ಬಂದಿಹನಲ್ಲ

Neeralli Sanna Aleyondu Moodi Choorada Chandraneega- kannada song lyrics from Hudugaru movie

Neeralli Sanna Aleyondu Moodi Choorada Chandraneega
Illondu Chooru Allondu Chooru Ondaga Beku Bega
Thusu Doora Summane Jotheyalli Bandeya
Naduvello Mellage Maayavadeya

Neeralli Sanna Aleyondu Moodi Choorada Chandraneega
Illondu Chooru Allondu Chooru Ondaga Beku Bega

Iddalli Aalisa Balle Ninnella Pisumaathu
Nannalli Neeniruvaga Inneke Rujuvathu
Nenapinalle Neeneega Yendiginta Saniha
ALisalaare Naanindu Manada Gode Baraha
Sahiyada Mele Saha Geetheyondu Mareyayitheke Nodu
Illondu Saalu Allondu Saalu Berethaagalene Haadu

Neeralli Sanna Aleyondu Moodi Choorada Chandraneega
Illondu Chooru Allondu Chooru Ondaga Beku Bega

Daareeli Hoogidavondu Kattilla Hoomale
Kannalli Kannidu Neenu Mattilla Aamele
Kaanaballe Kanasallu Ninna Hejje Guruthu
Kela Beda Innenu Neenu Nanna Kurithu
Edeyaaladinda Madhu Mouna ondu Karevaaga Jantiyagi
Illondu Jeeva Allondu Jeeva Irabeke Ontiyaagi

Neeralli Sanna Aleyondu Moodi Choorada Chandraneega
Illondu Chooru Allondu Chooru Ondaga Beku Bega

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ (Neeralli Sanna Aleyondu Moodi)

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ 
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಈಗ 
ತುಸು ದೂರ ಸುಮ್ಮನೆ  ಜೊತೆಯಲಿ ಬಂದೆಯಾ 
ನಡುವೆಲ್ಲೋ ಮೆಲ್ಲಗೆ ಮಾಯವಾದೆಯೋ ||೨|| 

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ 
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಈಗ 

ಇದ್ದಲ್ಲೇ ಆಲಿಸ ಬಲ್ಲೆ ನಿನ್ನೆಲ್ಲ ಪಿಸುಮಾತು 
ನನ್ನಲ್ಲಿ ನೀನಿರುವಾಗ ಇನ್ನೇಕೆ ರುಜುವಾತು 
ನೆನಪಿನಲ್ಲೇ ನೀನೀಗ ಎಂದಿಗಿಂತ ಸನಿಹ 
ಆಲಿಸಲಾರೆ ನಾನೀಗ ಮನದ ಗೋಡೆ ಬರಹ 
ಸಹಿಯಾದ ಮೇಲೆ ಸಹ ಗೀತೆಯೊಂದು ಮರೆಯಾಯಿತೆಕೆ ನೋಡು 
ಇಲ್ಲೊಂದು ಸಾಲು ಅಲ್ಲೊಂದು ಸಾಲು ಬೆರೆತಾಗಲೇನೆ  ಹಾಡು

 ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ 
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಈಗ 

ದಾರೀಲಿ ಹೂ ಗಿಡವೊಂದು ಕಟ್ಟಿಲ್ಲ ಹೂಮಾಲೆ 
ಕಣ್ಣಲ್ಲಿ ಕಣ್ಣಿಡೂ ನೀನು ಮಾತಿಲ್ಲ ಆಮೇಲೆ 
ಕಾಣಬಲ್ಲೆ ಕನಸಲ್ಲೂ  ನಿನ್ನ ಹೆಜ್ಜೆ ಗುರುತು 
ಕೇಳಬೇಡ ಇನ್ನೇನು ನೀನು ನನ್ನ ಕುರಿತು 
ಎದೆಯಾಳದಿಂದ ಮಧು ಮೌನ ಒಂದು ಕರೆವಾಗ ಜಂಟಿಯಾಗಿ 
ಇಲ್ಲೊಂದು ಜೀವ ಅಲ್ಲೊಂದು ಜೀವ ಇರಬೇಕೆ ಒಂಟಿಯಾಗಿ 

 ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ 
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಈಗ 









Thursday, February 14, 2013

ಪ್ರೇಮಿಗಳ ದಿನದ ಪುಟ್ಟ ಕಾಣಿಕೆ (ಅಕ್ಷರಗಳ ಪೋಣಿಕೆಯ ಮೂಲಕ)


ಶುಭಾಶಯಗಳನ್ನು ಕೋರಿ ಸಿಹಿ ತಿಂದು ಸಂಬ್ರಮಿಸುವವರಿಗೆ ದಿನ ಪ್ರೇಮಿಗಳ ದಿನ
ನಿನ್ನ ನೋಟದಲ್ಲಿ  ನಿನ್ನ ಮಾತಿನಲ್ಲಿ ಮೈ ಮರೆಯುವ ನನಗೆ ಪ್ರತಿದಿನವು ಪ್ರೇಮಿಗಳ ದಿನ
ಒಂದು ದಿನಕ್ಕೆ ಬಾಡಿ ಹೋಗುವ ಗುಲಾಬಿಯನ್ನು ಕೊಟ್ಟು, ಪ್ರೆಮಿಯಾಗಲೇ
ಇಲ್ಲಾ, ಪ್ರತಿದಿನವು ನಿನ್ನ ಮೊಗದಲ್ಲಿ ನಗುವೆಂಬ ಗುಲಾಬಿಯನ್ನು ಅರಳಿಸುವ ಪ್ರೆಮಿಯಾಗಲೇ
ನಾಲಿಗೆ ಮೇಲಿರುವವರೆಗೆ ಸಿಹಿ ನೀಡುವ ಚಾಕಲೇಟ್ ಕೊಟ್ಟು ಪ್ರೇಮಿಯಾಗಲೇ
ಇಲ್ಲ ನಿನ್ನ ಹೃದಯದೊಳಗೆ ಪ್ರೀತಿಯ ಸಿಹಿ ಸಿಂಚನ ಮೂಡಿಸುವ ಪ್ರೇಮಿಯಾಗಲೇ

ಎಲ್ಲರಂತೆ ಗಂಟೆ ಗಟ್ಟಲೆ ಫೋನಿನಲ್ಲೇ ಮಾತಾಡಲಾರೆ,
ಆದರೆ ಮಾತಾಡಿದಾಗಲೆಲ್ಲ ನಿನ್ನ ಪ್ರೀತಿಯ ದನಿಯಾಗುವೆ
ದಿನವು ಮಾರ್ಕೆಟ್ ಮಾಲ್ ಎಂದು ಸುತ್ತಿಸಲಾರೆ,
ಆದರೆ ಹೊರಗೆ ಹೋಗುವಾಗ ನಾ ನಿನ್ನ ಜೊತೆಗಿರುವೆ

ಹೇಗೆ ಆರಂಭವಾಯ್ತು ನಾ ಅರಿಯೆ,ಎಲ್ಲಿಂದ ಪ್ರಾರಂಭವಾಯ್ತು ನಾ ತಿಳಿಯೆ
ಆರಂಭ ಪ್ರಾರಂಭ ಬೇಕಿಲ್ಲ ಎನಗೆ, ಅಂತ್ಯವಾಗದಿರಲಿ ಪ್ರೀತಿ ಸಾಕೆನಗೆ
ನಗುವಿರಲಿ ಅಳುವಿರಲಿ ನಾ ನಿನ್ನ ಜೊತೆಗಿರುವೆ,
ಹಗಲಿರಲಿ ಇರುಳಿರಲಿ  ನಿನ್ನೊಡನೆ ಇರಲು ಬಯಸುವೆ
ನಿನ್ನ ಮನಸ್ಸಿನ ಮಾತು ಕೂಡ ಇದೆ ಎಂದು ಭಾವಿಸಿರುವೆ

ಬೈದನೆಂದರೆ ಬೈಗುಳವಲ್ಲ ಅದು ನಿನ್ನ ಮೇಲಿನ ಕಾಳಜಿಯಷ್ಟೇ
ಕೋಪಿಸಿ ಕೊಂಡರೆ ಅದು ಕೊಪವಲ್ಲ ಅದು ಹುಸಿಮುನಿಸಷ್ಟೇ
ಪ್ರೀತಿಯಿಲ್ಲದ ಕೋಪ ಕೊಪವಲ್ಲ. ಕೊಪವಿಲ್ಲದ ಪ್ರೀತಿ ಪ್ರೀತಿಯಲ್ಲ
ಬರೆಯುತ್ತಾ ಕುಳಿತರೆ ಅಕ್ಷರೆಗಳಿಗೆ ಅಂತ್ಯವೇ ಇಲ್ಲ, ಹಾಗೆ ನನ್ನ ಪ್ರೀತಿಗೆ ಎಂದಿಗೂ ಬರ ಇಲ್ಲ
ಪ್ರೀತಿಸುವೆ ಎಂದು ಆಗಾಗ ಹೇಳಲ್ಲ ,ಹಾಗಂತ ನನ್ನ ಪ್ರೀತಿಗೆ ಕೊರತೆ ಇಲ್ಲ

ಪ್ರೀತಿ ಹೇಳುವಂತದಲ್ಲ ಮುಚ್ಚಿಡುವಂತದಲ್ಲ, ಕೊನೆಯವರೆಗೂ ಇರುವಂಥದ್ದು
ಆದಿ ಅಂತ್ಯ ಇಲ್ಲದ ಪ್ರೀತಿ ನಮ್ಮದಾಗಲಿ ಎಂಬ ಹಾರೈಕೆಯೊಂದಿಗೆ  -
    - ಪ್ರೇಮಿಗಳ ದಿನದ ಪುಟ್ಟ ಕಾಣಿಕೆ (ಅಕ್ಷರಗಳ ಪೋಣಿಕೆಯ ಮೂಲಕ)

Tuesday, February 12, 2013

ಸ್ನೇಹ - ಪ್ರೀತಿ


ಸ್ನೇಹವೆಂದರೆ ಒಂದು ಸುಂದರ ಹೂವಿನಂತೆ.
ದಿನಕೊಂದು ಹೊಸ ಹೂವು ಅರಳುತೆ
ಮೊದಲೇ ಅರಳಿದ ಹೂವು ಬಾಡುತೆ.
ಬಾಡಿದ ಹೂವ ನೋಡಿ ಅರಳಿದ ಹೂವು ನಗುತ್ತೆ.
ಬಾಡಿದ ಹೂವು ಅಳುತೆ.
ಅರಳಿ ಬಾಡುವ ದಿನಗಳ ನಡುವಿನ ಆ ನೋವು ನಲಿವುಗಳು ಮಾತ್ರ ನೆನಪಿನಲ್ಲಿ ಇರುತೆ.


ಒಳ್ಳೆಯದು-ಕೆಟ್ಟದು


ಜಗತ್ಹಿನಲ್ಲಿ ನಾನೊಬ್ಬನೇ ಒಳ್ಳೆಯವನಲ್ಲ
ಬೇರೆಯವರೆಲ್ಲ ಕೆಟ್ಟವರಲ್ಲ
ಕೊಲೆಗಾರನ ತಾಯಿಗೆ ಕೊಲೆಗಾರ ಕೆಟ್ಟವನಲ್ಲ
ಹಾಗಂತ ಕೊಲೆಗಾರ ಒಳ್ಳೆಯವನಲ್ಲ
ಮತ್ತು ಕೊಲೆಗಾರನ ತಾಯಿ ಕೆಟ್ಟವಳಲ್ಲ
ಯಾರು ಒಳ್ಳೆಯವರಲ್ಲ ಯಾರು ಕೆಟ್ಟವರಲ್ಲ
ಸಮಯ ಸಂದರ್ಭಗಳಷ್ಟೇ ಒಳ್ಳೆಯದು ಕೆಟ್ಟದು ;-(

Monday, February 11, 2013

Aalochane Aaraadhane Ella Nindene. from Romeo


Aalochane Aaraadhane Ella Nindene..
Aalaapane Aakarshane Ella Neenene..
Naavibbaru Ondaadare Kanditha..
Ee Jeevana Allindale Adbutha..
Kanasigintha Sogasu Ninna Saniha..
Jagave Sullu Nanage Ninna Vinaha..
Yaaro Nanage Neenu..

Aalochane Aaraadhane Ella Nindene..
Aalaapne Aakarshane Ella Neenene..

Aadamele Nange Ninna Parichaya..
Nanna Baalu Aayithalla Rasamaya..
Nijadali Neenu.. Manujano Gaandhaarano..
Saaku Saaku Innu Ninna Abhinaya..
Nodi Kooda Nodadanthe Nadideya..
Hudugiya Heege Hedarisa Beda Kano..
Andu Neenu Aagantuka.. Indu Neene Nanna Sakha..
Kanasigintha Sogasu Ninna Saniha..
Jagave Sullu Nanage Ninna Vinaha..
Yaaro Nanage Neenu..
Aalochane Aaraadhane Ella Nindene..
Aalaapane Aakarshane Ella Neenene..

Ninna Kenne Hinduvantha Salugeya..
Bega Bega Nange Neenu Koduveya..
Thadedare Innu Thadeyenu Naa Nannanu..
Ninge Thaagi Nintha Vele Thalamala..
Sone Soki Aada Hage Hasi Nela..
Bevaruve Yaako.. Araluve Naanetako..
Kelo Aase Aalingana.. Yaako Naachi Neeraadena..
Kanasigintha Sogasu Ninna Saniha..
Jagave Sullu Nanage Ninna Vinaha..
Yaaro Nanage Neenu..
Aalochane Aaraadhane Ella Nindene..
Aalaapane Aakarshane Ella Neenene..

ಆಲೋಚನೆ ಆರಾಧನೆ ಎಲ್ಲಾ ನಿಂದೇನೆ (Alochane Aradhane ella nindene from Romeo)

ಚಿತ್ರ: ರೋಮಿಯೋ


ಆಲೋಚನೆ ಆರಾಧನೆ ಎಲ್ಲಾ ನಿಂದೇನೆ
 ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ
ನಾವಿಬ್ಬರು ಒಂದಾದರೆ  ಖಂಡಿತ
ಈ ಜೀವನ  ಅಲ್ಲಿಂದಲೇ ಅದ್ಭುತ
ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೇ  ಸುಳ್ಳು ನನಗೆ ನಿನ್ನ ವಿನ:
ಯಾರೋ ನನಗೆ ನೀನು

ಆಲೋಚನೆ ಆರಾಧನೆ ಎಲ್ಲಾ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ

ಆದ ಮೇಲೆ ನಂಗೆ ನಿನ್ನ ಪರಿಚಯ
ನನ್ನ ಬಾಳು ಆಯ್ತಲ್ಲ ರಸಮಯ
ನಿಜದಲಿ ನೀನು ಮನುಜನೋ  ಗಾಂಧಾರನೋ
ಸಾಕು ಸಾಕು ಇನ್ನು ನಿನ್ನ ಅಭಿನಯ
ನೋಡಿ  ಕೂಡ ನೋಡದಂತೆ ನಡಿದೆಯ
ಹುಡುಗಿಯ ಹೀಗೆ ಹೆದರಿಸಬೇಡ ಕಣೋ
ಅಂದು ನೀ ಆಗಂತುಕ  ಇಂದು ನೀ ನನ್ನ ಸಖ

ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೇ  ಸುಳ್ಳು ನನಗೆ ನಿನ್ನ ವಿನ:
ಯಾರೋ ನನಗೆ ನೀನು




ಆಲೋಚನೆ ಆರಾಧನೆ ಎಲ್ಲಾ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ

ನಿನ್ನ ಕೆನ್ನೆ ಹಿಂಡುವಂಥ ಸಲುಗೆಯ
ಬೇಗ ಬೇಗ ನಂಗೆ ನೀನು ಕೊಡುವೆಯ
ತಡೆದರೆ ಇನ್ನು ತಡೆಯನು  ನಾ ನನ್ನನು
ನಿಂಗೆ ತಾಗಿ ನಿಂತ ವೇಳೆ ತಳಮಳ
ಸೋನೆ ಸೋಕೇ ಆದ ಹಾಗೆ ಹಸಿ ನೆಲ
ಬೆವರುವೆ ಯಾಕೋ ಅರಳುವೆ ನಾನೆತಕೋ
ಕೇಳೋ ಆಸೆ  ಅಲಿಂಗನ ಯಾಕೋ ನಾಚಿ ನೀರಾದೆ ನಾ

ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೇ  ಸುಳ್ಳು ನನಗೆ ನಿನ್ನ ವಿನ:
ಯಾರೋ ನನಗೆ ನೀನು

ಆಲೋಚನೆ ಆರಾಧನೆ ಎಲ್ಲಾ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ






Tuesday, February 5, 2013

Gaganave Baagi Bhuviyanu Kelida haage Lyrics

Movie: Sanju Weds Geetha (2011)


Gaganave Baagi Bhuviyanu Kelida Haage..
Kadalu Karedanthe Nadiyanu Bhetige..
Yaaru Bandirada Manasali.. Ninna Aagaamana Ee Dina..
Needuva Munna Naane Aamantrana..
Gaganave Baagi Bhuviyanu Kelida Haage..Kadalu Karedanthe Nadiyanu Bhetige..

Jeevana.. Ee Kshana.. Shuruvaadanthide..
Kanasina Oorina Kada Tereyuttide..
Alabeku Omme Anthaniside.. Kushiyeega Mere Meeri..
Madhumaasadanthe Kaichaachide.. Hasiraaythu Nanna Daari
Needuva Munna Naane Aamantrana..

Gaganave Baagi Bhuviyanu Kelida Haage..
Kadalu Karedanthe Nadiyanu Bhetige..
Yaaru Bandirada Manasali.. Ninna Aagaamana Ee Dina..
Needuva Munna Naane Aamantrana..

Saavina.. Anchina.. Badukanthaade Nee..
Saavira.. Sooryara.. Belakanthaade Nee..
Koneyaase Onde Ee Jeevake Ninna Koodi Baalabeku
Prati Janmadallu Nee Heegeye Nanna Preethi Maadabeku..
Needuva Munna Naane Aamantrana..

Gaganave Baagi Bhuviyanu Kelida Haage..
Kadalu Karedanthe Nadiyanu Bhetige..
Yaaru Bandirada Manasali.. Ninna Aagaamana Ee Dina..
Needuva Munna Naane Aamantrana..

ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ(Gaganave baagi bhuviyanu Kelida Haage Lyrics)

ಚಿತ್ರ : ಸಂಜು ವೆಡ್ಸ್ ಗೀತ (Sanju weds Geetha)

ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ...
ಕಡಲು ಕರೆದಂತೆ ನದಿಯನು ಭೇಟಿಗೆ 
ಯಾರು ಬಂದಿರದ ಮನಸಿನಲಿ ನಿನ್ನ  ಆಗಮನ ಈ ದಿನ.
ನೀಡುವ ಮುನ್ನ ನಾನೇ ಆಮಂತ್ರಣ 

ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ...
ಕಡಲು ಕರೆದಂತೆ ನದಿಯನು ಭೇಟಿಗೆ 

ಜೀವನ ಈ ಕ್ಷಣ ಶುರುವಾದಂತಿದೆ 
ಕನಸಿನ ಊರಿನ ಕದ ತೆರೆಯುತಿದೆ 
ಅಳಬೇಕು ಒಮ್ಮೆ ಅಂತನಿಸಿದೆ ಖುಷಿಯೀಗ ಮೇರೆ ಮೀರಿ
ಮಧು ಮಾಸದಂತೆ ಕೈ ಚಾಚಿದೆ.. ಹಸಿರಾಯಿತು ನನ್ನ ದಾರಿ 
ನೀಡುವ ಮುನ್ನ ನಾನೇ ಆಮಂತ್ರಣ


ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ...
ಕಡಲು ಕರೆದಂತೆ ನದಿಯನು ಭೇಟಿಗೆ 
ಯಾರು ಬಂದಿರದ ಮನಸಿನಲಿ ನಿನ್ನ  ಆಗಮನ ಈ ದಿನ.
ನೀಡುವ ಮುನ್ನ ನಾನೇ ಆಮಂತ್ರಣ 

ಸಾವಿನ ಅಂಚಿನ ಬದುಕಂತಾದೆ ನೀ 
ಸಾವಿರ ಸೂರ್ಯರ ಬೆಳಕಂತಾದೆ ನೀ 
ಕೊನೆಯಾಸೆ ಒಂದೇ ಈ ಜೀವಕ್ಕೆ ನಿನ್ನ ಕೂಡಿ ಬಾಳಬೇಕು 
ಪ್ರತಿ ಜನುಮದಲ್ಲೂ ನೀ ಹೀಗೆ ನನ್ನ ಪ್ರೀತಿ ಮಾಡಬೇಕು 
ನೀಡುವ ಮುನ್ನ ನಾನೇ ಆಮಂತ್ರಣ 


ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ...
ಕಡಲು ಕರೆದಂತೆ ನದಿಯನು ಭೇಟಿಗೆ 
ಯಾರು ಬಂದಿರದ ಮನಸಿನಲಿ ನಿನ್ನ  ಆಗಮನ ಈ ದಿನ.
ನೀಡುವ ಮುನ್ನ ನಾನೇ ಆಮಂತ್ರಣ





Monday, February 4, 2013

ಡೈರೆಕ್ಟರ್ಸ್ ಸ್ಪೆಷಲ್ (Directors Special)

ಮಠ, ಎದ್ದೇಳು  ಮಂಜುನಾಥ , ಹುಡುಗರು ಈ  ಎಲ್ಲಾ ಚಿತ್ರಗಳನ್ನು ನೋಡಿರುವವರಿಗೆ ಕನ್ನಡ ಚಿತ್ರರಂಗದಲ್ಲಿ ಒಬ್ಬ ತೆರೆಮರೆಯ ಡೈಲಾಗ್ ಕಿಂಗ್ ನ ಡೈಲಾಗ್ ಗಳ ಅನುಭವ ಆಗಿರುತ್ತೆ . ಡೈಲಾಗ್ ಕಿಂಗ್ ಎಂದಾಕ್ಷಣ ಸಾಯಿಕುಮಾರ್ ಎಂಬ ಒಬ್ಬ ಉತ್ತಮ ಕಲಾವಿದನ ನೆನಪಾಗುತ್ತೆ, ಅದೇ ರೀತಿ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಡೈಲಾಗ್ ಗಳನ್ನೂ  ಬರೆಯುವ  ನಿರ್ದೇಶಕ ಗುರುರಾಜ್ ಕೂಡ ಒಬ್ಬ ತೆರೆ ಮರೆಯ ಡೈಲಾಗ್ ಕಿಂಗ್ ಎಂದರೆ ತಪ್ಪಾಗಲ್ಲ.
          ಪಡ್ಡೆ ಹುಡುಗರ ಬಾಯಲ್ಲಿ ಬರುವಂತ ಒಂದು ಡೈಲಾಗ್ ಹುಡುಗರು ಚಿತ್ರದಿಂದ "ಚಡ್ಡಿ VIP  ಆಗಿರಲಿ Jockey  ಆಗಿರಲಿ ಚನ್ನಾಗಿ ತೊಳಿಬೇಕು ಇಲ್ಲಾಂದ್ರೆ ಬುಡಕ್ಕೆ ಬಂದು ಬಿಡುತೆ. ಫಿಲಂ ನಲ್ಲಿ ಬಿಡಿ ಸಾದರಣವಾದ ಡೈಲಾಗ್ ಗಳು ಕೂಡ ಸಂದರ್ಭ ಹಾಗೂ ಡೈಲಾಗ್ ಡೆಲಿವರಿ ಮಾಡುವ ನಟನ ಚಾಕಚಕ್ಯಥೆಯಿಂದಲೂ ಉತ್ತಮವಾದ ಡೈಲಾಗ್ ಗಳಾಗಿ ಬಿಡುತವೆ. ಆದರೆ ಗುರುರಾಜರ ಡೈಲಾಗ್ ಗಳು ಒಂಥರಾ ವಿಭಿನ್ನ ಅದಕ್ಕೆ ಅವರು ಬರೆದಿರುವ ಕಥೆಗಳಿಂದ ಆರಿಸಿದ ಕೆಳಗಿನ ತುಣುಕುಗಳೇ  ಸಾಕ್ಷಿ 

ಕಥೆ : ಎಣ್ಣೆ ಹೊಡೆಯುವಾಗ ಬರೆದ ಕಥೆ.... ಕಥೆಯಲ್ಲಿನ ಸಂದರ್ಭ ಪ್ರೇಮ ವೈಫಲ್ಯ 
*******************************************************************************

೧.  ಸಂಜೆಯಾಗುತ್ತಿದ್ದಂತೆ ಆತ ಅಲ್ಲಿ ಬಂದು ಕೂರುತ್ತಾನೆ. ಗುಡ್ಡದ ಕೆಳಗಿನ ಪ್ರಪಾತವನ್ನೇ ದಿಟ್ಟಿಸುತ್ತಾ.. ಕೈಗೆ ಸಿಗುವ ಒಂದೊಂದೇ ಗರಿಕೆಯನ್ನು ಕಿತ್ತು ಬುಡದ ರಸವನ್ನು ಹೀರುತ್ತಾ.. ಮುಖ್ಯವಾಗಿ ಅವಳನ್ನು ನೆನೆಯುತ್ತಾ.! ತಾನು ಸತ್ತು ಎರಡು ತಿಂಗಳಾಯಿತು.. ಆತ್ಮಹತ್ಯೆ ಮಹಾಪಾಪ ಅಂತ ತೀರ್ಮಾನವಾಗಿ ಅವನಿಗೆ ಘೋರ ಶಿಕ್ಷೆಯೂ ಆಯಿತು.. ಅವನು ಅದಕ್ಕೆ ಒಗ್ಗಿ ಹೋಗಿದ್ದು ಆಯಿತು.. ಭೂಮಿಯಲ್ಲಿ ಇವನ ಹುಡುಗಿಗೆ ಮದುವೆಯಾಗಿದ್ದೂ ಆಯಿತು.. ಇವನೂ ಹೋಗಿದ್ದ ಮದುವೆಗೆ ಹಾರಿಕೊಂಡು. ಏನೂ ಆಗದವಳಂತೆ ಅವಳು ನಗುನಗುತ್ತಾ ತಾಳಿ ಕಟ್ಟಿಸಿಕೊಳ್ಳುತ್ತಿದ್ದಾಳೆ. ಮುಯ್ಯಿ ಇಸ್ಕೋತ್ತಿದ್ದಾಳೆ. ಬಂದವರಿಗೆ ಊಟ ಮಾಡಿಕೊಂಡು ಹೋಗಿ ಅನ್ನುತ್ತಿದ್ದಾಳೆ.. ತನಗೇನು ಊಟ ಹಾಕಿಸ್ತಾಳೋ.. ತನಗೆ ಎಡೆಯಿಟ್ಟವಳು..

********************************************************************************

೨.  ದಿಕ್ಕು ತೊಚಿದ ಕಡೆಗೆ.. ನೀವು ಮಾತ್ರ ಈ ಮರ ಬಿಟ್ಟು ಎಲ್ಲೂ ಹೋಗಲ್ಲಾ.. ಯಾಕೆ ಅಂತ ತಿಳ್ಕೋಬೋದಾ..?'
'ಏನೋ.. ಬೇಜಾರು..'
'ಅದೇ ಏನೂಂತ ತಿಳ್ಕೊಬೋದಾ..?'
'ನಾನು ತುಂಬಾ ಪ್ರೀತಿಸಿದ್ದ ಹುಡುಗಿ ನನಗೆ ಮೋಸ ಮಾಡಿದಳು.. ಆಶ್ಚರ್ಯ ಗೊತ್ತಾ.. ನಾನು ಸತ್ತಿದ್ದು ಅವಳಿಗಿನ್ನೂ ಗೊತ್ತೇ ಇಲ್ಲ.. ಹ್ಹ..ಹ್ಹ..' ಅವನ ಕಣ್ಣಲ್ಲಿ ನೀರು..
'ಕ್ಷಮಿಸಿ.. ನನಗೆ ಇದು ಗೊತ್ತಿರಲ್ಲಿಲ್ಲ.. ಹಳೇದನ್ನು ಕೆದಕಿ ನಿಮಗೆ ನೋವುಂಟು ಮಾಡಿದೆನಾ..?'
********************************************************************************

೩.  ನೀವು ನಿಮ್ಮ ಹುಡುಗಿಯನ್ನ ತುಂಬಾ ಪ್ರೀತಿಸುತ್ತಿದ್ದರಾ..? ಎಷ್ಟು..?'
'ನೀವು ಬಹುಶಃ ಎಲ್ಲೂ ಕೇಳಿರದ ಪ್ರೇಮಕತೆ ನಮ್ಮದು..'
'ನಾನು ಅದನ್ನು ತಿಳ್ಕೋಬೋದಾ..? ನಿಮಗೆ ನೊವಾಗುತ್ತೆ ಅಂದ್ರೆ ಬೇಡಾ..'
'ಗಂಡಸಿನ ಸಮಸ್ಯೆಯೇ ಅದು.. ಅವನು ನೋವನ್ನು ತುಂಬಾ ದಿನ ಆಚರಿಸ್ತಾನೆ.. ಅದನ್ನ ಎಲ್ಲರ ಹತ್ತಿರ ಹೇಳಿಕೊಳ್ತಾ ತಾನು ವಿಶೇಷ ಎಂಬ ಭಾವವನ್ನ ಆನಂದಿಸ್ತಾನೆ..'
********************************************************************************೪೪. ನೀನು ನನ್ನನ್ನು ಪ್ರಪಂಚದಲ್ಲೇ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸೋದಾದರೆ, ನನ್ನ ಒಳಿತನ್ನೇ ಬಯಸೋದಾದರೆ ನನ್ನನ್ನ ಈ ಕ್ಷಣದಿಂದ ಮರೆತು ಬಿಡು.. ನಾನು ಮದುವೆಯಾಗ್ತಿದ್ದೀನಿ..'

'ತಮಾಷೆ ಮಾಡ್ತಿದ್ದಾಳೇನೋ ಅಂದ್ಕೊಂಡೆ.. ನೋಡಿ ಅಲ್ಲೂ ನಾನವಳನ್ನ ಸರಿಯಾಗಿ ಅರ್ಥ ಮಾಡ್ಕೊಳ್ಳಲ್ಲಿಕ್ಕೆ ಆಗ್ಲಿಲ್ಲ.. ಹ್ಹ..ಹ್ಹ..
*********************************************************************************
ಮೇಲಿನ ಎಲ್ಲಾ ಡೈಲಾಗ್ ಗಳು ಎಲ್ಲರಿಗೂ ಅರ್ಥವಾಗುತ್ಹೋ ಇಲ್ಲವೋ  ಗೊತ್ತಿಲ್ಲ ಆದರೆ ಪ್ರೀತಿಯಲ್ಲಿ ಸೋತ ಪ್ರತಿಯೊಬ್ಬರಿಗೂ ಅರ್ಥವಾಗುತ್ತೆ 

Saturday, January 26, 2013

ಸೋನೆ ಮಳೆ


ಸೋನೆ ಮಳೆಯು ಸುರಿಯುತಿರಲು
ಗೆಳತಿ, ನಿನ್ನ ನೆನಪು ಮನದಿ ಸುಳಿಯುತಿರಲು
ಮನವಿಂದು ತ್ಹೊಯಿದಿದೆ
ಮಳೆಯಿಂದಲ್ಲ ಕಣ್ಣಿರಿನಿಂದ
ಬಿಸಿಲು ಮತ್ತೆ ಮಳೆಯೂ ಕಳ್ಳಾಟ ಆಡುತಿರಲು
ಗೆಳತಿ ನಿನ್ನ ನೆನಪು ಮೂಡಿದೆ ಮನದಲ್ಲಿ  ಕಾಮನ ಬಿಲ್ಲಿನಂತೆ 


ಕಾದಿರುವೆ ನಿನಗಾಗಿ


ಮತ್ತೆ ಮತ್ತೆ ನಡೆಯುತಿರುವ ಕಹಿ ಘಟನೆಗಳು
ಮನಸಿನ ಸಿಹಿ ಭಾವನೆಗೆ ಹುಳಿ ಹಿಂಡಿದೆ.
ಮನಸೆಲ್ಲಾ ಖಾಲಿ ಖಾಲಿ
ತನ್ನವರೆಲ್ಲಾ ದೂರ ದೂರ
ಈ ಹೃದಯ ಭಾರ ಭಾರ
ಈ ಮನಸ್ಸಿನ ಖಾಲಿ ಮನೆಯನ್ನೂ ತುಂಬುವ ಓ ಅತಿಥಿ ಎಲ್ಲಿರುವೆ
ಬರಡಾಗಿರುವ ಈ ಬನದಲ್ಲಿ ಅರಳುವ ಹೂವೆ
ನಿನಗಾಗಿ ಕಾದಿರುವೆ