ನಗುವ ನಯನ, ಮಧುರ ಮೌನ.
ಮಿಡಿವಾ ಹೃದಯ, ಇರೆ ಮಾತೇಕೆ?
ಹೊಸ ಭಾಷೆಯಿದು, ರಸ ಕಾವ್ಯವಿದು,
ಇದ ಹಾಡಲು ಕವಿ ಬೇಕೇ?
ನಗುವ ನಯನ, ಮಧುರ ಮೌನ.
ಮಿಡಿವಾ ಹೃದಯ, ಇರೆ ಮಾತೇಕೆ?
ನಿಂಗಾಗಿ ಹೇಳುವೆ ಕಥೆ ನೂರನು,
ನಾನಿಂದು ನಗಿಸುವೆ ಈ ನಿನ್ನನು.
ಇರುಳಲ್ಲು ಕಾಣುವೆ ಕಿರು ನಗೆಯನು,
ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು.
ಜೊತೆಯಾಗಿ ನಡೆವೆ ನಾ ಮಳೆಯಲೂ,
ಬಿಡದಂತೆ ಹಿಡಿವೆ ಈ ಕೈಯನು.
ಗೆಳೆಯ ಜೊತೆಗೆ ಹಾರಿ ಬರುವೆ,
ಬಾನ ಎಲ್ಲೆ ದಾಟಿ ನಲಿವೆ.
ನಗುವ ನಯನ, ಮಧುರ ಮೌನ.
ಮಿಡಿವಾ ಹೃದಯ, ಇರೆ ಮಾತೇಕೆ?
ಈ ರಾತ್ರಿ ಹಾಡು ಪಿಸುಮಾತಲಿ,
ನಾ ಕಂಡೆ ಇನಿದಾದ ಸವಿ ರಾಗವ.
ನೀನಲ್ಲಿ ನಾನಿಲ್ಲಿ ಏಕಾಂತದಿ,
ನಾ ಕಂಡೆ ನನ್ನದೇ ಹೊಸ ಲೋಕವ.
ಈ ಸ್ನೇಹ ತಂದಿದೆ ಎದೆಯಲ್ಲಿ,
ಎಂದೆಂದೂ ಅಳಿಸದ ರಂಗೋಲಿ.
ಆಸೆ ಹೂವ, ಹಾಸಿ ಕಾದೆ, ನಡೆ ನೀ ಕನಸಾ ಹೊಸಕಿ ಬಿಡದೆ.
ನಗುವ ನಯನ, ಮಧುರ ಮೌನ.
ಮಿಡಿವಾ ಹೃದಯ, ಇರೆ ಮಾತೇಕೆ?
ಹೊಸ ಭಾಷೆಯಿದು, ರಸ ಕಾವ್ಯವಿದು,
ಇದ ಹಾಡಲು ಕವಿ ಬೇಕೇ?
ಮಿಡಿವಾ ಹೃದಯ, ಇರೆ ಮಾತೇಕೆ?
ಹೊಸ ಭಾಷೆಯಿದು, ರಸ ಕಾವ್ಯವಿದು,
ಇದ ಹಾಡಲು ಕವಿ ಬೇಕೇ?
ನಗುವ ನಯನ, ಮಧುರ ಮೌನ.
ಮಿಡಿವಾ ಹೃದಯ, ಇರೆ ಮಾತೇಕೆ?
ನಿಂಗಾಗಿ ಹೇಳುವೆ ಕಥೆ ನೂರನು,
ನಾನಿಂದು ನಗಿಸುವೆ ಈ ನಿನ್ನನು.
ಇರುಳಲ್ಲು ಕಾಣುವೆ ಕಿರು ನಗೆಯನು,
ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು.
ಜೊತೆಯಾಗಿ ನಡೆವೆ ನಾ ಮಳೆಯಲೂ,
ಬಿಡದಂತೆ ಹಿಡಿವೆ ಈ ಕೈಯನು.
ಗೆಳೆಯ ಜೊತೆಗೆ ಹಾರಿ ಬರುವೆ,
ಬಾನ ಎಲ್ಲೆ ದಾಟಿ ನಲಿವೆ.
ನಗುವ ನಯನ, ಮಧುರ ಮೌನ.
ಮಿಡಿವಾ ಹೃದಯ, ಇರೆ ಮಾತೇಕೆ?
ಈ ರಾತ್ರಿ ಹಾಡು ಪಿಸುಮಾತಲಿ,
ನಾ ಕಂಡೆ ಇನಿದಾದ ಸವಿ ರಾಗವ.
ನೀನಲ್ಲಿ ನಾನಿಲ್ಲಿ ಏಕಾಂತದಿ,
ನಾ ಕಂಡೆ ನನ್ನದೇ ಹೊಸ ಲೋಕವ.
ಈ ಸ್ನೇಹ ತಂದಿದೆ ಎದೆಯಲ್ಲಿ,
ಎಂದೆಂದೂ ಅಳಿಸದ ರಂಗೋಲಿ.
ಆಸೆ ಹೂವ, ಹಾಸಿ ಕಾದೆ, ನಡೆ ನೀ ಕನಸಾ ಹೊಸಕಿ ಬಿಡದೆ.
ನಗುವ ನಯನ, ಮಧುರ ಮೌನ.
ಮಿಡಿವಾ ಹೃದಯ, ಇರೆ ಮಾತೇಕೆ?
ಹೊಸ ಭಾಷೆಯಿದು, ರಸ ಕಾವ್ಯವಿದು,
ಇದ ಹಾಡಲು ಕವಿ ಬೇಕೇ?
No comments:
Post a Comment