Wednesday, September 21, 2016

ನೀನಿರದೆ ತಂಗಾಳಿಯು ಮುಂಗುರಳ ನೇವರಿಸಿದೆ ಗೂಗ್ಲಿ ಚಿತ್ರದ ಒಂದು ಗೀತೆ

ನೀನಿರದೆ ತಂಗಾಳಿಯು ಮುಂಗುರಳ ನೇವರಿಸಿದೆ
ನೀನಿರದೆ ಸದ್ದಿಲ್ಲದೆ ಹೊಂಗಿರಣವು ಆವರಿಸಿದೆ
ಬದಲಾಯಿತೀಗ ನನ್ನ ಲೋಕ ನಿನ್ನ ಗುಂಗಿಲ್ಲದೆ
ಹಗುರವಾಯಿತೀಗ ಒಂಟಿ ಜೀವ ನಿನ್ನ ಹಂಗಿಲ್ಲದೆ

ಪ್ರಣಯ ಗಿಣಯ ಒಲವು ಗಿಲವು ಎಲ್ಲಾ  ಮರೆತು ಇರಬಲ್ಲೆ ನಾನೊಬ್ಬನೇ
ವಿರಹ ಗಿರಹ  ಸರಸ ಗಿರಸ ಎಲ್ಲಾ ತೊರೆದು ಇರಬಲ್ಲೆ ನಾನೊಬ್ಬನೇ

ಹೇ ನನ್ನ ಏಕಾಂತವೂ ಸಂಪೂರ್ಣ ನನ್ನದಾಯಿತು
ಪ್ರತಿ ನಿತ್ಯವೂ ನನಗೀಗ ಸ್ವತಂತ್ರ ದಿನವಾಯಿತು
ಭಾರಿ ಕಂಗೆಡಿಸುವ ಬಿರುಗಾಳಿ ಮರೆ ಆಯಿತು
ನಡು ನೀರಲ್ಲೇ ನೀ ಬಿಟ್ಟು ನಾ ಈಜು ಕಲಿತಾಯ್ತು
ಪಿಸು ಮಾತನು ಪೋಣಿಸಿ ತರುವ ಬರದಾಟ ಇನ್ನಿಲ್ಲ ಸಾಕು
ಬಳಿ  ವಾಪಸು ಬಂದಿದೆ ಹೃದಯ ಇದಕ್ಕಿಂತ ಇನ್ನೇನು ಬೇಕು
ನೂತನ ಜೀವನ ಇಂದು ನನ್ನದಾಯಿತು

ಪ್ರಣಯ ಗಿಣಯ ಒಲವು ಗಿಲವು ಎಲ್ಲಾ  ಮರೆತು ಇರಬಲ್ಲೆ ನಾನೊಬ್ಬನೇ
ವಿರಹ ಗಿರಹ  ಸರಸ ಗಿರಸ ಎಲ್ಲಾ ತೊರೆದು ಇರಬಲ್ಲೆ ನಾನೊಬ್ಬನೇ

ನೀ ನನ್ನ ಜೊತೆಯಲ್ಲಿ ಜಗಳ ಆ ಡಿದ ಜಾಗ ಎಲ್ಲಾ  ಕಂಡಾಗ ಏನೆಲ್ಲಾ  ಜ್ಞಾಪಕವಾಗಿದೆ
ನೀ ನೆಟ್ಟು  ಹೋದಂಥ ಮುಳ್ಳೊಂದು ಎದೆಯಲ್ಲಿ ಹೂವಾಗಿ  ಅರಳುತ್ತಾ  ಮೋಹಕವಾಗಿದೆ
ತುಸು ದೂರ ಬಂದ ಮೇಲೆ ಹೊಸದಾಗಿ ಹೃದಯ ಬೇರೆ
ಬಡ ಜೀವ ಮತ್ತೆ  ನೀನೆ ಬೇಕೆಂದು ಹಠವ ಹಿಡಿದಿದೆ
ಪ್ರಣಯ ಗಿಣಯ ಒಲವು ಗಿಲವು ಎಲ್ಲಾ  ಮರೆತು ಇರಬಲ್ಲೆ ನಾನೊಬ್ಬನೇ
ವಿರಹ ಗಿರಹ  ಸರಸ ಗಿರಸ ಎಲ್ಲಾ ತೊರೆದು ಇರಬಲ್ಲೆ ನಾನೊಬ್ಬನೇ

ನೀನಿರದೆ ತಂಗಾಳಿಯು ಮುಂಗುರಳ ನೇವರಿಸಿದೆ
ನೀನಿರದೆ ಸದ್ದಿಲ್ಲದೆ ಹೊಂಗಿರಣವು ಆವರಿಸಿದೆ

No comments:

Post a Comment