3) ಗುರು ವೀಳ್ಯ: 7 ಕವಳೆ ವೀಳ್ಯದೆಲೆ, 7 ಅಡಿಕೆ, ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ವೀಳ್ಯ ಬದಲಾಯಿಸಿಕೊಳ್ಳಬೇಕು. (ಒಕ್ಕಣೆಯೊಂದಿಗೆ ಹೇಳಿ ವೀಳ್ಯ ಬದಲಾಯಿಸಿಕೊಳ್ಳಬೇಕು).
Tuesday, April 22, 2025
ಗೌಡ ಸಂಸ್ಕೃತಿ- ಮದುವೆ(ಗುರು ವೀಳ್ಯ ,ಸಲಾವಳಿ ವೀಳ್ಯ ಮತ್ತಿತರ ವೀಳ್ಯಗಳು)
Monday, April 14, 2025
ಗೌಡ ಸಂಸ್ಕೃತಿ- ಮದುವೆ(ದೇವರ ವೀಳ್ಯ )
2) ದೇವರ ವೀಳ್ಯ :
5 ಕವಳೆ ವೀಳ್ಯದೆಲೆ 5 ಅಡಿಕೆ, ಸ್ವಲ್ಪ ಅಡಿಕೆ ಹೋಳು ಹಾಕಿ ವರನ ಕಡೆಯ ಊರುಗೌಡರು, ನೀರಿನ ತಂಬಿಗೆ ಮುಟ್ಟಿ ಎದ್ದು ನಿಂತು ವೀಳ್ಯದ ತಟ್ಟೆಯನ್ನು ಕೈಯಲ್ಲಿ ಹಿಡಿದು ಹತ್ತು ಕುಟುಂಬ ಹದಿನೆಂಟು ಗೋತ್ರದ ಬಂಧು-ಬಾಂಧವರು, ನೆಂಟರಿಷ್ಟರು, ಗುರುಮನೆ, ಕಟ್ಟೆಮನೆ, ಸೀಮೆಮನೆ, ಮಾಗಣೆಮನೆ.........ಗೋತ್ರದ..............ಹೆಸರಿನ ವರನಿಂದ ಸ್ವಜಾತಿ ಬಾಂಧವರ ಸಮ್ಮುಖದಲ್ಲಿ .......ಗೋತ್ರದ ........ವಧುವಿಗೆ ದೇವರ ವೀಳ್ಯವನ್ನು ಎತ್ತಿ ಕೊಡುತ್ತೇವೆ ಎಂದು ಹೆಣ್ಣಿನ ಕಡೆಯ ಊರುಗೌಡರಿಗೆ ಒಪ್ಪಿಸುವರು. ಅದೇ ರೀತಿಯ ಒಕ್ಕಣೆಯೊಂದಿಗೆ ವಧುವಿನ ಕಡೆಯ ಊರುಗೌಡರು ಸ್ವೀಕರಿಸುವರು (3 ಸಲ ಒಕ್ಕಣೆ ಹೇಳಬೇಕು). ಆಗ ಸಭೆಯಲ್ಲಿದ್ದವರು ಒಪ್ಪಿಗೆಯಾಗಿ ಒಳ್ಳೆ ಕಾರ್ಯಂತ ಗಟ್ಟಿಯಾಗಿ ಹೇಳಬೇಕು.
Friday, April 11, 2025
ಗೌಡ ಸಂಸ್ಕೃತಿ- ಮದುವೆ(ಚೌಕಿ ವೀಳ್ಯ)
ಚೌಕಿ ವೀಳ್ಯ
ಗೌಡ ಸಂಸ್ಕೃತಿ- ಮದುವೆ(ವೀಳ್ಯ ಕೊಡುವ ಕ್ರಮ)
ವೀಳ್ಯ ಕೊಡುವ ಕ್ರಮ :
Thursday, April 10, 2025
ಗೌಡ ಸಂಸ್ಕೃತಿ- ಮದುವೆ( ಊರು ಗೌಡರ((ದಿಬ್ಬಣದ ಮುಖ್ಯಸ್ಥ) ಉಡುಗೆ ತೊಡುಗೆಗಳು)
ಊರು ಗೌಡರ ಉಡುಗೆ ತೊಡುಗೆಗಳು :
Wednesday, April 9, 2025
ಗೌಡ ಸಂಸ್ಕೃತಿ- ಮದುವೆ(ವೀಳ್ಯಶಾಸ್ತ್ರ (ವಧುವಿನ ಮನೆಯಲ್ಲಿ))
ವೀಳ್ಯಶಾಸ್ತ್ರ (ವಧುವಿನ ಮನೆಯಲ್ಲಿ)
Thursday, April 3, 2025
ಗೌಡ ಸಂಸ್ಕೃತಿ-ದೀಪಾವಳಿ ಹಬ್ಬದ ಆಚರಣೆಗಳು
ನರಕ ಚತುರ್ದಶಿ:
ಆಶ್ವಯುಜ ಮಾಸದ ಅಮಾವಾಸ್ಯೆಯ ಮೊದಲ ದಿನ ದೀಪಾವಳಿ ಹಬ್ಬ ಆರಂಭವಾಗುತ್ತದೆ. ಅಂದು ನರಕ ಚತುರ್ದಶಿ ದಿನ. ಬಿಸಿ ನೀರ ಹಂಡೆಯನ್ನು ತೊಳೆದು ಅದರ ಮೇಲೆ ಚಿತ್ತಾರ ಬಿಡಿಸಿ ನೀರು ತುಂಬಿಸಿಡಬೇಕು. ಮರುದಿನ ಮುಂಜಾನೆ ಎದ್ದು ನೀರು ಬಿಸಿ ಮಾಡಿ ಮನೆ ಮಂದಿಯೆಲ್ಲಾ ತಲೆಗೆ ಮೈಗೆ ಎಣ್ಣೆ ಹಾಕಿ ಸ್ಥಾನ ಮಾಡಬೇಕು. ನಂತರ ಬಾಳೆಹಣ್ಣು ರಸಾಯನ ಮತ್ತು ಹುಳಿ ದೋಸೆ ತಯಾರಿಸಿ ತಿನ್ನುತ್ತಾರೆ.
ಮನೆಯಲ್ಲಿನ ಕೃಷಿ ಸಾಮಾಗ್ರಿಗಳನ್ನೆಲ್ಲಾ ತೊಳೆದು ಶುದ್ಧಗೊಳಿಸಿ ಮನೆಯಂಗಳದ ನಿರ್ದಿಷ್ಟ ಸ್ಥಳದಲ್ಲಿ ಓರಣವಾಗಿ ಜೋಡಿಸಿಡುತ್ತಾರೆ. ದನಗಳ ಹಟ್ಟಿ, ತುಳಸಿಕಟ್ಟೆ, ಅಂಗಳದ ಕಡೆಯೆಲ್ಲಾ ಗುಡಿಸಿ ಸ್ವಚ್ಛಗೊಳಿಸಬೇಕು.
ಅಮಾವಾಸ್ಯೆಯ ದಿನ ಬೆಳಿಗ್ಗೆ ಎದ್ದು ಬಾಳೆಹಣ್ಣು ರಸಾಯನದೊಂದಿಗೆ ಹುಳಿ ದೋಸೆ ತಿಂದು ಮನೆಯ ಯಜಮಾನ ಮತ್ತು ಇತರರು ಹಾಲೆಮರದ (ಪಾಲೆಮರ) 3 ಕಂಬಗಳನ್ನು ಮತ್ತು ಅದರೊಟ್ಟಿಗೆ 2-3 ಸಣ್ಣ ಸಣ್ಣ ಕಂಬಗಳನ್ನು ಕಡಿದು ತರುತ್ತಾರೆ.
ಅಮಾವಾಸ್ಯೆ ರಾತ್ರಿ ಮನೆಯ ಯಜಮಾನ ಅಥವಾ ಹಿರಿಯರು ಅಂಗಳದ ನಿರ್ಧಿಷ್ಟ ಸ್ಥಳದಲ್ಲಿ (ಅಥವಾ ತುಳಸಿ ಕಟ್ಟೆಯ ಹತ್ತಿರ ಅಥವಾ ಕೆಲವು ಭಾಗದಲ್ಲಿ ದೈವಸ್ಥಾನದ ಎದುರು ಹಾಕುತ್ತಾರೆ.) 3 ಗುಂಡಿಗಳನ್ನು ತೆಗೆದು ತಂದಿಟ್ಟ ಹಾಲೆಮರದ 3 ಕಂಬಗಳನ್ನು ಹಾಕಬೇಕು. ಕೆಲವು ಭಾಗಗಳಲ್ಲಿ 1 ಅಥವಾ 2 ಕಂಬಗಳನ್ನು ಹಾಕಿ ಶ್ರಂಗರಿಸುತ್ತಾರೆ. ನಂತರ ಸ್ನಾನ ಮಾಡಿ ಮರದ ತುದಿಭಾಗದಲ್ಲಿ ದೀಪ ಇಟ್ಟು ನೆನೆಬತ್ತಿ ಹಚ್ಚಬೇಕು. 1 ವೀಳ್ಯದೆಲೆ, 1 ಅಡಿಕೆ ಹೋಳು ಇಡಬೇಕು. ನೆನೆಬತ್ತಿ ಆರತಿ ಬಾಳೆಲೆ ತುದಿಯಲ್ಲಿಡಬೇಕು ಹಾಗೂ ಕೈಮುಗಿಯಬೇಕು. ಮಾರನೆ ದಿನ ಬೆಳಗ್ಗೆ ಅಂದರೆ ಪಾಡ್ಯದ ದಿನ ಬಾಳೆಲೆ ತೆಗೆದು ಫಲಬರುವ ಮರದ ಬುಡಕ್ಕೆ ಹಾಕಿ ಸ್ಥಳ ಸ್ವಚ್ಛಮಾಡಬೇಕು.
******************************