Monday, April 14, 2025

ಗೌಡ ಸಂಸ್ಕೃತಿ- ಮದುವೆ(ದೇವರ ವೀಳ್ಯ )

 2) ದೇವರ ವೀಳ್ಯ :

5 ಕವಳೆ ವೀಳ್ಯದೆಲೆ 5 ಅಡಿಕೆ, ಸ್ವಲ್ಪ ಅಡಿಕೆ ಹೋಳು ಹಾಕಿ ವರನ ಕಡೆಯ ಊರುಗೌಡರು, ನೀರಿನ ತಂಬಿಗೆ ಮುಟ್ಟಿ ಎದ್ದು ನಿಂತು ವೀಳ್ಯದ ತಟ್ಟೆಯನ್ನು ಕೈಯಲ್ಲಿ ಹಿಡಿದು ಹತ್ತು ಕುಟುಂಬ ಹದಿನೆಂಟು ಗೋತ್ರದ ಬಂಧು-ಬಾಂಧವರು, ನೆಂಟರಿಷ್ಟರು, ಗುರುಮನೆ, ಕಟ್ಟೆಮನೆ, ಸೀಮೆಮನೆ, ಮಾಗಣೆಮನೆ.........ಗೋತ್ರದ..............ಹೆಸರಿನ  ವರನಿಂದ ಸ್ವಜಾತಿ ಬಾಂಧವರ ಸಮ್ಮುಖದಲ್ಲಿ .......ಗೋತ್ರದ ........ವಧುವಿಗೆ ದೇವರ ವೀಳ್ಯವನ್ನು ಎತ್ತಿ ಕೊಡುತ್ತೇವೆ ಎಂದು ಹೆಣ್ಣಿನ ಕಡೆಯ ಊರುಗೌಡರಿಗೆ ಒಪ್ಪಿಸುವರು. ಅದೇ ರೀತಿಯ ಒಕ್ಕಣೆಯೊಂದಿಗೆ ವಧುವಿನ ಕಡೆಯ ಊರುಗೌಡರು ಸ್ವೀಕರಿಸುವರು (3 ಸಲ ಒಕ್ಕಣೆ ಹೇಳಬೇಕು). ಆಗ ಸಭೆಯಲ್ಲಿದ್ದವರು ಒಪ್ಪಿಗೆಯಾಗಿ ಒಳ್ಳೆ ಕಾರ್ಯಂತ ಗಟ್ಟಿಯಾಗಿ ಹೇಳಬೇಕು.


No comments:

Post a Comment