3) ಗುರು ವೀಳ್ಯ: 7 ಕವಳೆ ವೀಳ್ಯದೆಲೆ, 7 ಅಡಿಕೆ, ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ವೀಳ್ಯ ಬದಲಾಯಿಸಿಕೊಳ್ಳಬೇಕು. (ಒಕ್ಕಣೆಯೊಂದಿಗೆ ಹೇಳಿ ವೀಳ್ಯ ಬದಲಾಯಿಸಿಕೊಳ್ಳಬೇಕು).
4) ಸಲಾವಳಿ ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆ ಹಾಗೂ ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ಒಕ್ಕಣೆಯೊಂದಿಗೆ ವೀಳ್ಯ ಬದಲಾಯಿಸಿಕೊಳ್ಳಬೇಕು. (ಸಲಾವಳಿ ಎಂದರೆ ವಧು ವರರ ಜಾತಕಾದಿಗಳು, ಗೋತ್ರಗಳು, ನಕ್ಷತ್ರಗಳು, ದಶಕೂಟಗಳು, ಸಂಖ್ಯಾಶಾಸ್ತ್ರ ಮುಂತಾದುವುಗಳು ಒಳಗೊಂಡಿರುತ್ತವೆ.)
5) ಮಾತು ಕರಾರು ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆ ಹಾಗೂ ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ಒಕ್ಕಣೆಯೊಂದಿಗೆ ವೀಳ್ಯ ಬದಲಾಯಿಸಿಕೊಳ್ಳಬೇಕು. (ಕರಾರು ಪತ್ರ ಮಾಡಿಕೊಳ್ಳಬೇಕು. )
6) ವೀಳ್ಯ ಶಾಸ್ತ್ರದ ವೀಳ್ಯ: 9 ಅಡಿಕೆ 9ಕವಳೆ ವೀಳ್ಯದೆಲೆ ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ಒಕ್ಕಣೆಯೊಂದಿಗೆ ವೀಳ್ಯ ಬದಲಾಯಿಸಿಕೊಳ್ಳಬೇಕು. 5 ವೀಳ್ಯದೆಲೆ 1 ಅಡಿಕೆ ವರನಿಗಾಗಿ, ವರನ ಮನೆಯವರಿಗೂ, 5 ವೀಳ್ಯದೆಲೆ 1 ಅಡಿಕೆ ವಧುವಿಗಾಗಿ ವಧುವಿನ ಕಡೆಯವರಿಗೂ ಹರಿವಾಣದಲ್ಲಿಟ್ಟು ಕೊಡಬೇಕು.
7) ಲಗ್ನ ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆಯೊಂದಿಗೆ ಮಾತು ಕರಾರು ಪತ್ರ ಇಟ್ಟು ಒಕ್ಕಣೆಯೊಂದಿಗೆ ಮೇಲಿನಂತೆ ವೀಳ್ಯ ಬದಲಿಸಿಕೊಳ್ಳಬೇಕು.
8,9) ತಾಯಿ ತಂದೆ ವೀಳ್ಯ (2 ಹರಿವಾಣಗಳಿರಬೇಕು) : 9 ಕವಳೆ ವೀಳ್ಯದೆಲೆ, 9 ಅಡಿಕೆ ಹಾಗೂ ಅಡಿಕೆ ಹೋಳು ಇಟ್ಟಿರಬೇಕು. ಉಭಯ ಕಡೆಯಿಂದಲೂ ಊರುಗೌಡರ ಜೊತೆ ಒಬ್ಬರು ಎದ್ದು ಒಕ್ಕಣೆಯೊಂದಿಗೆ ವೀಳ್ಯ ಕೊಡುವುದು ಹಾಗೂ ತೆಗೆದುಕೊಳ್ಳುವುದು ಮಾಡಬೇಕು. ತಂದೆಯ ವೀಳ್ಯದಿಂದ ತಂದೆಯ ಕುಟುಂಬದವರಿಗೂ, ತಾಯಿ ವೀಳ್ಯದಿಂದ ತಾಯಿ ಕುಟುಂಬದವರಿಗೂ ಹಂಚಬೇಕು. ಹಿಂದಿನ ಕಾಲದಲ್ಲಿ ಉಭಯ ಕಡೆಯ ಕುಟುಂಬಸ್ಥರಿಗೆ ಹೀಗೆ ವೀಳ್ಯ ಕೊಟ್ಟು ಆಹ್ವಾನಿಸುತ್ತಿದ್ದರು.
ಚೌಕಿ ವೀಳ್ಯ : ಚೌಕಿ ವೀಳ್ಯವನ್ನು ಎತ್ತಿ ವಧುವಿನ ಕಡೆಯ ಊರುಗೌಡರಿಗೆ ಕಾರ್ಯಕ್ರಮ
ಚೆನ್ನಾಗಿ ಸುಧಾರಿಸಿಕೊಟ್ಟಿದ್ದೀರಿ ಎಂದು ಹೇಳಿ ವರನ ಕಡೆಯ ಊರುಗೌಡರು ನೀಡುವರು. ಹರಿವಾಣವನ್ನು ಆರಂಭದಲ್ಲಿ ಚೌಕಿ ವೀಳ್ಯದಂತೆ ಪ್ರದಕ್ಷಿಣೆ ತಂದು (ಸಾಂಕೇತಿಕವಾಗಿ ಚೌಕಿಯಲ್ಲಿರುವವರು 1 ವೀಳ್ಯದೆಲೆ, 1 ಅಡಿಕೆ ಹೋಳನ್ನು ತೆಗೆದುಕೊಳ್ಳುವರು) ವಧುವಿನ ಕಡೆಯ ಊರು ಗೌಡರು ಮಣೆಯ ಮೇಲಿಡಬೇಕು. (ಈಗ ಊರುಗೌಡರು ಸ್ಥಳ ಬದಲಾವಣೆ ಮಾಡಿಕೊಳ್ಳುವರು). ವೀಳ್ಯ ತಿನ್ನುತ್ತಾ ಮದುವೆಯ ಮುಂದಿನ ವ್ಯವಸ್ಥೆಯ ಬಗ್ಗೆ ಮಾತುಕತೆಯಾಗುತ್ತದೆ. ಮಾತುಕತೆ ಮುಗಿದ ನಂತರ ಕೈಮುಗಿದು ಎಲ್ಲರೂ ಚೌಕಿಯಿಂದ ಏಳುತ್ತಾರೆ. ಭೋಜನ ವ್ಯವಸ್ಥೆಯಾದ ನಂತರ ಹುಡುಗಿ ಮನೆಯವರ ಒಪ್ಪಿಗೆ ಪಡೆದು ವರನ ಮನೆಯವರು ತೆರಳುವರು.
No comments:
Post a Comment