Tuesday, April 22, 2025

ಗೌಡ ಸಂಸ್ಕೃತಿ- ಮದುವೆ(ಚಪ್ಪರ ಹಾಕುವ ಕ್ರಮ)

 ಚಪ್ಪರ ಹಾಕುವ ಕ್ರಮ : ಮದುವೆಗೆ 4 ಅಥವಾ 5 ದಿನಗಳಿಗೆ ಮುಂಚಿತವಾಗಿ ಕುಟುಂಬಸ್ಥರಿಗೆ, ನೆರೆಕರೆಯವರಿಗೆ ಹೇಳಿಕೆ ಕೊಟ್ಟು ಚಪ್ಪರ ಹಾಕಲು ಕೇಳಿಕೊಳ್ಳುವುದು. ಊರುಗೌಡರ ನೇತೃತ್ವದಲ್ಲಿ ಮನೆಯ ಮುಂಭಾಗದಲ್ಲಿ ಚಪ್ಪರ ಹಾಕುವುದು. ಚಪ್ಪರದ ಕಂಬಗಳು ಸಮ ಸಂಖ್ಯೆಯಲ್ಲಿರಬೇಕು. ಮದುವೆಯ ಹಿಂದಿನ ದಿನ, ಮದರಂಗಿಯಂದು ವಿಶ್ವಕರ್ಮರು ನಿರ್ಮಿಸಿಕೊಟ್ಟ ಹಾಲೆಮರದ ಪಾದುಕೆಗಳನ್ನು ಪ್ರವೇಶ ದ್ವಾರದ ಅಡಿಯಲ್ಲಿ ನೆಲಕ್ಕೆ ಮರದ ಮೊಳೆಯಿಂದ ಅಳವಡಿಸುವುದು. ಚಪ್ಪರದ ಮುಖ ತೋರಣವನ್ನು ವಿಶ್ವಕರ್ಮರಿಂದ ಮಾಡಿಸಬೇಕು. ಪೂರ್ವ ಈಶಾನ್ಯದಲ್ಲಿ ದ್ವಾರ ನಿರ್ಮಿಸಿ, ಗೊನೆ ಹಾಕಿದ 2 ಕದಳಿ ಬಾಳೆ ಕಟ್ಟಿ ತಳಿರು ತೋರಣಗಳಿಂದ ಶೃಂಗರಿಸಬೇಕು. (ಚಪ್ಪರದ ನಾಲ್ಕು ಮೂಲೆಗಳಿಗೆ ಊರುಗೌಡರು ನಾನೇಲು ಸೊಪ್ಪು ಸುತ್ತಿ ಮನೆಯವರಿಗೆ ಚಪ್ಪರವನ್ನು ಒಪ್ಪಿಸುವುದು ಕ್ರಮ)

No comments:

Post a Comment