ಅಂತರಂಗದ ಹೂ ಬನಕೆ (ಏಳು ಸುತ್ತಿನ ಕೋಟೆ)
ಅಂತರಂಗದ ಹೂ ಬನಕೆ...ಎ...
ಒಲುಮೆ ಗಾಳಿ ಬೀಸಿ, ಹರುಷ ತೂಗಿ ತೊನೆದು, ಮಧುರ ಭಾವ ಮೂಡಿತು..ಉ..
ಅರಿವಿನ ಈಟಿಯು ಹಗಲಿರುಳು ನಾಟುತ.. ಪ್ರೀತಿಯ ಹೃದಯ ಗಾಯವಾಯಿತು.. ಗಾಯವಾಯಿತು...
ಅಂತರಂಗದ ಹೂ ಬನಕೆ...ಎ...
ಮನದೊಳಗೆ ಚಿಂತೆ.. ದಿನದಿನವು ಕುದಿದು..ಉ..
ಉರಿವ ಕುಲುಮೆಯಾಯಿತು.. ತನುವು..ಉ...
ಪ್ರೀತಿ ಬಿಟ್ಟು ಬಿಡದೆ.. ಭೀತಿ ಕಾಡಿ ಕಾಡಿ...
ಅಗ್ನಿಕುಂಡವಾಯಿತು ಒಡಲಾಳವು..ಒಡಲಾಳವು...
ಅಂತರಂಗದ ಹೂ ಬನಕೆ...ಎ...ಎ...
ನೂರನೋವ ನಡುವೆ.. ನಲಿವ ಗತ್ತು ಪಡೆದು..ಉ..
ಹೊಸತು ದಿಕ್ಕು ಕಾಣಹೋಗಿ ಬವಣೆ...ಎ...
ಮುತ್ತಿನಿಂತ ಭಯವಾ.. ಮೆಟ್ಟಿ ತುಳಿದು ನೆಡೆದು..
ಸುಗಮ ಹಾದಿ ಸಾಗದಾಗಿ ತೊಳಲಾಟವು...ತೊಳಲಾಟವು...
ಅಂತರಂಗದ ಹೂ ಬನಕೆ...ಎ...ಎ...
ಬದುಕಬಯಲಿನೊಳಗೆ ಒಂಟಿಯಾಗಿ ನಾನು..
ಪ್ರೀತಿಹಕ್ಕಿ ಬದಿಗೆ ಬಂದು ತುಮುಲಾ..ಅ...
ವಾಸ್ತವ ಜಗವ.. ಮರೆಯುತ ಸಾಗಿ...
ಜೊತೆಗಾತಿ ಸನಿಹ.. ಮಿಡುಕಾಟವು... ಮಿಡುಕಾಟವು...
ಅಂತರಂಗದ ಹೂ ಬನಕೆ...ಎ...ಎ...
ಒಲುಮೆ ಗಾಳಿ ಬೀಸಿ, ಹರುಷ ತೂಗಿ ತೊನೆದು, ಮಧುರ ಭಾವ ಮೂಡಿತು..ಉ..ಉ..
No comments:
Post a Comment