Thursday, November 23, 2017

ಮಾತಿನಲ್ಲಿ ಹೇಳಲಾರೆನು, ಬೊಂಬಾಟ್ ಚಿತ್ರದ ಗೀತೆ

ಮಾತಿನಲ್ಲಿ ಹೇಳಲಾರೆನು,
ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ ಉಳಿಯಲಾರೆನು
ಅಂತ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ ದಯಮಾಡಿ ವಾಸಿ ಮಾಡಬೇಡಿ
ಅಂತ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ

ಕಣ್ಣಲಿದೆ ಆ ಕಣ್ಣಲಿದೆ
ಹೊಂಬೆಳಕಿನ ನವನೀಲಾಂಜನ
ಇನ್ನೆಲಿದೆ ಆಹಾ ಇನ್ನೆಲ್ಲಿದೆ
ಹೂ ಮನಸ್ಸಿನ  ಆ ಮಧುಗುಂಜನ
ಬೇರೆ ಏನು ಕಾಣಲಾರೆ ಯಾರ ನಾನು ದೂರಲಾರೆ
ಸಾಕು ಇನ್ನು ದೂರವನ್ನು ತಾಳಲಾರೆನು
ನನ್ನ ಕನಸಿನಲ್ಲಿ ದಯಮಾಡಿ ಪಾಲು ಕೇಳಬೇಡಿ
ಅಂತ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ
ಮಾತಿನಲ್ಲಿ ಹೇಳಲಾರೆನು,
ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ ಉಳಿಯಲಾರೆನು

ನಗೆಯೆಲ್ಲಿದೆ ಆ ಬಗೆಯಲ್ಲಿದೆ
ಬಗೆಹರಿಯದ  ಆ ಅವಲೋಕನ
ನಡೆಯೆಲ್ಲಿದೆ ಆ ನುಡಿಯಲ್ಲಿದೆ
ತಲೆ ಕೆಡಿಸುವ ಆ ಆಮಂತ್ರಣ
ಕನಸಿಗಿಂತ ಚಂದವಾಗಿ
ಅಳಿಸದಂತ ಗಂಧವಾಗಿ
ಮೊದಲಬಾರಿ ಕಂಡ ಕ್ಷಣವೇ ಬಂಧಿಯಾದೆನು
ಹೋದೆ ನಾನು ಕಳೆದು ದಯಮಾಡಿ ಪತ್ತೆ ಮಾಡಬೇಡಿ
ಒಮ್ಮೆ ಅವಳಿಗೆ ನನ್ನ ತೋರಿಸಿ
ಮಾತಿನಲ್ಲಿ ಹೇಳಲಾರೆನು,
ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ ಉಳಿಯಲಾರೆನು

ಮಾತಿನಲ್ಲಿ ಹೇಳಲಾರೆನು,
ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ ಉಳಿಯಲಾರೆನು
ಅಂತ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ ದಯಮಾಡಿ ವಾಸಿ ಮಾಡಬೇಡಿ
ಅಂತ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ

No comments:

Post a Comment