ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ,
ಇದಕಿಂತ ಬೇಗ ಇನ್ನೂ, ಸಿಗಬಾರದಿತ್ತೆ ನೀನು,
ಇನ್ನಾದರೂ ಕೂಡಿಟ್ಟುಕೊ ನೀ ನನ್ನನೂ ಕಳೆಯುವ ಮುನ್ನವೇ,
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಾಣಯಕು ಮುನ್ನವೇ
ನಿನ್ನ ಕಣ್ಣಿಗಂತು ನಾನು, ನಿರುಪಯೋಗಿ ಈಗಲೂ,
ಇನ್ನು ಬೇರೆ ಏನು ಬೇಕು, ಪ್ರೇಮಯೋಗಿಯಾಗಲು,
ಹೂ ಅರಳುವ ಸದ್ದನು, ನಿನ್ನ ನಗೆಯಲಿ ಕೇಳಬಲ್ಲೆ,
ನನ್ನ ಏಕಾಂತವನ್ನು,ತಿದ್ದಿಕೊಡು ನೀನೀಗ ನಿಂತಲ್ಲೆ,
ನಾನೇನೇ ಅಂದರೂನೂ,ನನಗಿಂತ ಚೂಟಿ ನೀನು,
ತುಟಿಯಲ್ಲಿಯೇ ಮುಚ್ಚಿಟ್ಟುಕೊ ಮುತ್ತೊಂದನೂ ಕದಿಯುವ ಮುನ್ನವೇ;
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ;
ಕನಸಲಿ ತುಂಬ ಕೆಟ್ಟಿರುವೆನು ನಿನ್ನನು ಕೇಳದೇ,
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೆ,
ನನ್ನಾ ಕೌತುಕ ಒಂದೊಂದೇ ಹೇಳಬೇಕು,
ಆಲಿಸುವಾಗ ನಂಬು ನನ್ನನ್ನೆ ಸಾಕು,
ಸಹವಾಸ ದೋಷದಿಂದ, ಸರಿಹೋಗಬಹುದೆ ನಾನು,
ನನಗಾಗಿಯೇ ಕಾದಿಟ್ಟುಕೊ ಹಟವೊಂದನೂ, ಕೆಣಕುವ ಮುನ್ನವೇ;
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೇ ಪ್ರಣಯಕು ಮುನ್ನವೇ.
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ,
ಇದಕಿಂತ ಬೇಗ ಇನ್ನೂ, ಸಿಗಬಾರದಿತ್ತೆ ನೀನು,
ಇನ್ನಾದರೂ ಕೂಡಿಟ್ಟುಕೊ ನೀ ನನ್ನನೂ ಕಳೆಯುವ ಮುನ್ನವೇ,
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಾಣಯಕು ಮುನ್ನವೇ
ನಿನ್ನ ಕಣ್ಣಿಗಂತು ನಾನು, ನಿರುಪಯೋಗಿ ಈಗಲೂ,
ಇನ್ನು ಬೇರೆ ಏನು ಬೇಕು, ಪ್ರೇಮಯೋಗಿಯಾಗಲು,
ಹೂ ಅರಳುವ ಸದ್ದನು, ನಿನ್ನ ನಗೆಯಲಿ ಕೇಳಬಲ್ಲೆ,
ನನ್ನ ಏಕಾಂತವನ್ನು,ತಿದ್ದಿಕೊಡು ನೀನೀಗ ನಿಂತಲ್ಲೆ,
ನಾನೇನೇ ಅಂದರೂನೂ,ನನಗಿಂತ ಚೂಟಿ ನೀನು,
ತುಟಿಯಲ್ಲಿಯೇ ಮುಚ್ಚಿಟ್ಟುಕೊ ಮುತ್ತೊಂದನೂ ಕದಿಯುವ ಮುನ್ನವೇ;
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ;
ಕನಸಲಿ ತುಂಬ ಕೆಟ್ಟಿರುವೆನು ನಿನ್ನನು ಕೇಳದೇ,
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೆ,
ನನ್ನಾ ಕೌತುಕ ಒಂದೊಂದೇ ಹೇಳಬೇಕು,
ಆಲಿಸುವಾಗ ನಂಬು ನನ್ನನ್ನೆ ಸಾಕು,
ಸಹವಾಸ ದೋಷದಿಂದ, ಸರಿಹೋಗಬಹುದೆ ನಾನು,
ನನಗಾಗಿಯೇ ಕಾದಿಟ್ಟುಕೊ ಹಟವೊಂದನೂ, ಕೆಣಕುವ ಮುನ್ನವೇ;
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೇ ಪ್ರಣಯಕು ಮುನ್ನವೇ.
No comments:
Post a Comment