ವರನ ಮನೆ ಪ್ರವೇಶ :
Friday, February 27, 2026
ಗೌಡ ಸಂಸ್ಕೃತಿ- ಮದುವೆ(ವರನ ಮನೆ ಪ್ರವೇಶ )
ಗೌಡ ಸಂಸ್ಕೃತಿ- ಮದುವೆ- ಕುರುಂಟು (ಸಂಗಾತಿ) ಕಳುಹಿಸುವುದು
ಕುರುಂಟು (ಸಂಗಾತಿ) ಕಳುಹಿಸುವುದು
ಗೌಡ ಸಂಸ್ಕೃತಿ- ಮದುವೆ-(ಸೇರು ತುಪ್ಪ ತರುವ ಕ್ರಮ )
ವಧು-ವರರೊಂದಿಗೆ ವರನ ಕಡೆಯ ನೆಂಟರಿಷ್ಟರು ಚಪ್ಪರದಡಿಯಿಂದ ಹೊರಗೆ ಬರುವರು. [ಚಪ್ಪರದ ಹೊರಗೆ ವಧು-ವರರು ಹಾಗೂ ನೆಂಟರಿಷ್ಟರಿಗೆ ಆಸನದ ವ್ಯವಸ್ಥೆ ಮಾಡಿರುತ್ತಾರೆ.] ಇಲ್ಲಿ ವಿಶ್ರಮಿಸಿದ ನಂತರ ನೆಂಟರಿಷ್ಟರು, ವಧು-ವರರು ವಧುವಿನ ಬಲಕೈಯಲ್ಲಿ ಸೇರು ತುಪ್ಪ, ಎಡ ಕೈಯಲ್ಲಿ ಒಗ್ಗಿ ಹಾಕಿದ ಜೋಡಿ ತೆಂಗಿನಕಾಯಿ, ಬಲ ಹೆಗಲಲ್ಲಿ ಧಾರೆ ಸೀರೆಯೊಂದಿಗೆ ಚಪ್ಪರದ ಮೂಡಣ ತೋರಣದಡಿಗೆ ಬರುವರು. ಇವರನ್ನು ವಧುವಿನ ಕಡೆಯ ಮುತ್ತೈದೆಯರು ಕುರ್ದಿ ಆರತಿ ಎತ್ತಿ ಎಡಕೈಯಿಂದ ವಧು-ವರರ ಹಣೆಗೆ ಕುರ್ದಿ ಬೊಟ್ಟನ್ನಿಟ್ಟು ಕಾಲಿನ ಪಕ್ಕಕ್ಕೆ ಕುರ್ದಿ ನೀರನ್ನು ಚೆಲ್ಲುವರು. ಈ ಹರಿವಾಣಕ್ಕೆ ವರನು ಹಣದೊಂದಿಗೆ 5 ವೀಳ್ಯದೆಲೆ, 1 ಅಡಿಕೆಯೊಂದಿಗೆ ಗೌರವ ಸೂಚಿಸುವರು. ಈಗ ಹುಡುಗಿಯ ಕಿರಿಯ ಸಹೋದರ ಅಥವಾ ಕಿರಿಯರು ಯಾರಾದರೂ ಒಂದು ತಂಬಿಗೆ ನೀರನ್ನು ಕಾಲಿಗೆ ಹೊಯ್ಯುವರು. ಈ ತಂಬಿಗೆಗೂ ವರನು ಹಣದೊಂದಿಗೆ 5 ವೀಳ್ಯದೆಲೆ ಒಂದು ಅಡಿಕೆಯೊಂದಿಗೆ ಗೌರವ ನೀಡಬೇಕು. ವಧುವಿನ ಮನೆಯ ಹಿರಿಯ ಮುತ್ತೈದೆಯರು ವಧು-ವರರನ್ನು ಕೈಹಿಡಿದು ಪದ್ಧತಿಯಂತೆ ಮನೆ ಒಳಗೆ ಕರೆದುಕೊಂಡು ಹೋಗಿ, ಹಸೆ ಚಾಪೆಯ ಪಕ್ಕ ಇರಿಸಿದ ಮಣೆಯ ಮೇಲೆ ಉರಿಯುತ್ತಿರುವ ನಂದಾದೀಪದ ಎಡಬಲದಲ್ಲಿ ತುಪ್ಪದ ತಂಬಿಗೆ ಹಾಗೂ ತೆಂಗಿನಕಾಯಿ ಇರಿಸುವರು. ಒಕ್ಕಣೆಯೊಂದಿಗೆ ಊರು ಗೌಡರು ಹಸೆ ಚಾಪೆಯಲ್ಲಿ ಕುಳ್ಳಿರಿಸಿದ ನಂತರ ವಧು-ವರರ ಕೈಗೆ 5 ಎಲೆ, 1 ಅಡಿಕೆ ಕೊಡಬೇಕು. ವಧು-ವರರಿಗೆ ಕನಿಷ್ಟ 5 ಜನ ಮುತ್ತದೆಯರು ಹಾಲು ತುಪ್ಪ ಕುಡಿಸಿದ ನಂತರ ವಧುವಿನ ತಾಯಿ ಅಥವಾ ಮನೆಯ ಹಿರಿಯ ಮುತ್ತೈದೆ ಅವರಿಗೆ ಕುಡಿಯಲು ಹಾಲನ್ನು ನೀಡುವರು. ಈ ಪಾತ್ರೆಗೆ ವಧು- ವರರು 5 ವೀಳ್ಯದೆಲೆ ಅಡಿಕೆ ಹಾಕಿ ಗೌರವದೊಂದಿಗೆ ಹಿಂತಿರುಗಿಸುವರು. ಕುಳಿತಲ್ಲಿಂದಲೇ ಪಾದ ಮುಟ್ಟಿ ನಮಸ್ಕರಿಸುವರು. ಈಗ ಊರುಗೌಡರ ಒಕ್ಕಣೆಯೊಂದಿಗೆ ಎಬ್ಬಿಸುವರು. ನಂತರ ವಧುವಿನ ಕಡೆಯ ಊರುಗೌಡರು ವರನ ಕಡೆಯ ಊರುಗೌಡರಿಗೆ ಮನೆಯ ಯಜಮನರಿಂದ ನೀರು ಕೊಡಿಸಿ ತುಪ್ಪದ ತಂಬಿಗೆ ಬಿಚ್ಚಲು ಕರೆಯುವರು. ಇಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಕಟ್ಟಿದ ತುಪ್ಪದ ತಂಬಿಗೆಯನ್ನು ಬಿಚ್ಚುವರು. (ತಂಬಿಗೆ ಕಟ್ಟಿದ ರೀತಿ ತಪ್ಪಿದಲ್ಲಿ ತಪ್ಪು ಕೇಳಿಸುತ್ತಾರೆ) ಬಿಚ್ಚಿದ ತುಪ್ಪವನ್ನು ವಧು/ವರರು ನಂದಾದೀಪಕ್ಕೆ ಹಾಕಿ ಕೈ ಮುಗಿಯುವರು.ಉಳಿದ ತುಪ್ಪವನ್ನು ಮನೆಯ ಒಡತಿ ಖಾಲಿ ಮಾಡಿ ಹೊದುಳು ಬಾಳೆಹಣ್ಣು, ಬೆಲ್ಲ, ವೀಳ್ಯದೆಲೆ, 1ಅಡಿಕೆ ಹಾಕಿ ಯಥಾ ಪ್ರಕಾರ ತಂಬಿಗೆಯ ಬಾಯಿ ಕಟ್ಟಿ ಮಣೆಯ ಮೇಲಿಡುತ್ತಾರೆ. ಹೊರಡುವ ಮೊದಲು ವರನ ಮನೆಯಲ್ಲಿ ನಡೆಯುವ ನಾಗೋಳಿಶಾಸ್ತ್ರಕ್ಕೆ ವಧುವಿನ ಕಡೆಯ ನಂಟರಿಷ್ಟರಿಗೆ ವರನ ಕಡೆಯವರು ಹರಿವಾಣದಲ್ಲಿ ಸೂಡಿ ವೀಳ್ಯದೆಲೆ, 10 ಅಡಿಕೆ ಇಟ್ಟು ಹೇಳಿಕೆ ಕೊಡಬೇಕು. ವಧು-ವರರು ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ, ತಾಯಿ ಎತ್ತಿ ಕೊಟ್ಟ ತುಪ್ಪದ ತಂಬಿಗೆಯನ್ನು ಬಲಕೈಯಲ್ಲಿ ಪಡಕೊಂಡು ಹೆಗಲಲ್ಲಿ ಧಾರೆ ಸೀರೆ ಹಾಕಿಕೊಂಡು ವರನೊಂದಿಗೆ ಮನೆಯಿಂದ ಹೊರಡುವರು. ಮನೆಯವರು ಸೂಚಿಸಿದ ಕುರುಂಟುವನ್ನು ಊರುಗೌಡರು ವರನ ಕಡೆಯ ಊರುಗೌಡರಿಗೆ ಹಸ್ತಾಂತರಿಸುವರು. ಈಗ ಊರುಗೌಡರ ನೇತೃತ್ವದಲ್ಲಿ ವರನ ದಿಬ್ಬಣ ಹಿಂತಿರುಗುವುದು (ದಿಬ್ಬಣ ಹೊರಡುವಾಗ ತಿಂಡಿ ತಿನಿಸುಗಳಿರುವ ಬುತ್ತಿ ಕೊಟ್ಟು ಕಳಿಸುವರು)
Saturday, February 14, 2026
ಗೌಡ ಸಂಸ್ಕೃತಿ- ಮದುವೆ(ಹೆಣ್ಣು ಇಳಿಸಿ ಕೊಡುವ ಕ್ರಮ)
ಹೆಣ್ಣು ಇಳಿಸಿ ಕೊಡುವ ಕ್ರಮ : ವಧುವಿಗೆ ಕೊಡುವ ಬಳುವಳಿಯೊಂದಿಗೆ ತಾಯಿ- ತಂದೆಯರು ವಧು-ವರರು ಹಾಗೂ ಕುಟುಂಬಸ್ಥರು ಮೇಲ್ಕಟ್ಟಿನಡಿಯಲ್ಲಿ ಪೂರ್ವಾಭಿಮುಖವಾಗಿ ನಿಲ್ಲುವರು. ವಧುವಿನ ಬಲ ಹೆಗಲಲ್ಲಿ ಧಾರಾ ಸೀರೆ ಇರಬೇಕು. ಪರಿಣಿತರು ಹೆಣ್ಣು ಇಳಿಸಿ ಕೊಡುವ ಸೋಬಾನೆಯನ್ನು ಹೇಳುವರು. ಒಕ್ಕಣೆಯೊಂದಿಗೆ ವಧುವಿನ ತಂದೆ ವಧು-ವರರ ಕೈಯೆತ್ತಿ ವರನ ತಂದೆ ಅಥವಾ ಊರುಗೌಡರಿಗೆ ವಧು- ವರರನ್ನು ಒಪ್ಪಿಸುವರು. ತದನಂತರ ವಧುವರರು ವಧುವಿನ ತಾಯಿ-ತಂದೆಗೆ ಸೀರೆ ಹಾಗೂ ದೋತಿಯನ್ನು ಉಡುಗೊರೆಯಾಗಿ ನೀಡುವರು. (ಉಡುಗೊರೆಗಳನ್ನು ವರನ ಮನೆಯವರೇ ವ್ಯವಸ್ಥೆ ಮಾಡುವುದು. ವಧು ತಾಯಿಗೂ ವರನು ಮಾವನಿಗೂ ಕೊಡಬೇಕು). ನಂತರ ವಧು-ವರರು ತಾಯಿ-ತಂದೆ ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುವರು.
Saturday, January 24, 2026
ಗೌಡ ಸಂಸ್ಕೃತಿ- ಮದುವೆ(ಶೇಷೋಪಚಾರ)
ಶೇಷೋಪಚಾರ:
ಗೌಡ ಸಂಸ್ಕೃತಿ- ಮದುವೆ (ವಧುವಿನ ಮನೆಗೆ ಗೃಹ ಪ್ರವೇಶ)
ವಧುವಿನ ಮನೆಗೆ ಗೃಹ ಪ್ರವೇಶ:
Sunday, December 14, 2025
ಗೌಡ ಸಂಸ್ಕೃತಿ- ಮದುವೆ(ಧಾರಾಕಾರ್ಯ)
ಧಾರಾಕಾರ್ಯ
ಪರಿಕರಗಳು : ಕಾಲುದೀಪ, ಮಣೆ 2, ತಂಬಿಗೆ ನೀರು, ತೆರೆ ಹಿಡಿಯಲು ಶುಭ್ರ ಬಟ್ಟೆ, 10 ವೀಳ್ಯದೆಲೆ, 2 ಅಡಿಕೆ, ಕಂಚಿನಕ್ಕಿ, ಕೊಂಬು ಗಿಂಡಿ, ಹಿಂಗಾರದ ಮಾಲೆ 2. ದಾರೆ ಎರೆಯಲು ಕಂಚಿನ ಬಟ್ಟಲು 1, ತಾಳಿ ಕಂಠಿ,
Sunday, September 21, 2025
ಗೌಡ ಸಂಸ್ಕೃತಿ- ಮದುವೆ(ಮದುವೆಗೆ ಮುಂಚೆ ಕಟ್ಟುವ ವೀಳ್ಯ)
ಮದುವೆಗೆ ಮುಂಚೆ ಕಟ್ಟುವ ವೀಳ್ಯ
ಗೌಡ ಸಂಸ್ಕೃತಿ- ಮದುವೆ(ದಿಬ್ಬಣ ಹೊರಡುವುದು)
ದಿಬ್ಬಣ ಹೊರಡುವುದು : ನಿಗದಿತ ಸಮಯಕ್ಕೆ ಸರಿಯಾಗಿ ಧಾರಾ ಚಪ್ಪರಕ್ಕೆ ಮದುಮಗನ ಕಡೆಯ ದಿಬ್ಬಣ ಹೊರಡುವುದು. ದಿಬ್ಬಣ ಹೊರಡುವ ಮೊದಲು ಹಸೆಮಣೆಯ ಎದುರು ಕಾಲುದೀಪ ಹಚ್ಚಿ ಮದುಮಗನನ್ನು ಹಸೆಚಾಪೆಯಲ್ಲಿ ಕುಳ್ಳರಿಸಿ ಹಾಲುತುಪ್ಪ ಶಾಸ್ತ್ರ ಮಾಡುವುದು. ನಂತರ ಕುಡಿಯಲು ಹಾಲು ಕೊಡಬೇಕು. ಹಾಲು ಕುಡಿದ ಲೋಟಕ್ಕೆ ಎಲೆ ಅಡಿಕೆ ಹಾಕುವರು. ಇದಾದ ನಂತರ ಸೋದರ ಮಾವ ಊರು ಗೌಡರೆ ಒಕ್ಕಣೆಯೊಂದಿಗೆ ಮುಸುಕಿನ ಬಟ್ಟೆಯ ಬಲದ ಬದಿಯ ತುದಿಗೆ ಪಾವಲಿಯನ್ನು ಕಟ್ಟಬೇಕು. ಊರುಗೌಡರು ಒಕ್ಕಣೆಯೊಂದಿಗೆ ವರರನ್ನು ಎಬ್ಬಿಸುವರು. ನಂತರ ಹಿರಿಯರ ಪಾದ ಮುಟ್ಟಿ ಆಶೀರ್ವಾದ ಪಡೆಯಬೇಕು. ಮನೆಯ ಯಜಮಾನ ವರರನ್ನು ಮೆಟ್ಟಿಲಿಳಿಸಿ ದೇವ ಸಭೆಯ ಮೇಲ್ಕಟ್ಟಿನಡಿಯಲ್ಲಿ ಊರುಗೌಡರಿಗೆ ಹಸ್ತಾಂತರಿಸುವರು. ಬಣ್ಣ ಬಂಗಾರದ ಸಹಿತವಾಗಿ ಮದುವೆ ಕಾರ್ಯವನ್ನು ಸಂಪೂರ್ಣ ಯಶಸ್ವಿಗೊಳಿಸಲು ಅಧಿಕಾರ ವಹಿಸಿ ಕೊಡುತ್ತಾರೆ. ವಾಲಗ ಗರ್ನಾಲುನೊಂದಿಗೆ ದಿಬ್ಬಣ ಹೊರಡುವುದು.
ಗೌಡ ಸಂಸ್ಕೃತಿ- ಮದುವೆ(ಕುಲದೇವರಿಗೆ ಹರಿಕೆ ಹಣ ಕಟ್ಟುವುದು)
ಕುಲದೇವರಿಗೆ ಹರಿಕೆ ಹಣ ಕಟ್ಟುವುದು :
Friday, August 29, 2025
ಗೌಡ ಸಂಸ್ಕೃತಿ- ಮದುವೆ(ಹಸೆ ಚಾಪೆ ಹಾಕುವುದು)
ಹಸೆ ಚಾಪೆ ಹಾಕುವುದು : ಹಸೆ ಬರೆದ ನಂತರ ಅದರಡಿಯಲ್ಲಿ 5 ಜನ ಮುತ್ತೈದೆಯರು
Saturday, August 23, 2025
ಗೌಡ ಸಂಸ್ಕೃತಿ- ಮದುವೆ (ಹಸೆ ಬರೆಯುವುದು)
ಹಸೆ ಬರೆಯುವುದು : ಮದರಂಗಿ ಶಾಸ್ತ್ರಕ್ಕೆ ಕುಳ್ಳಿರಿಸಿದ ನಂತರ ಮನೆಯ ಯಜಮಾನ ತಂಬಿಗೆ ನೀರು ಕೊಟ್ಟು ಹಸೆ ಬರೆಯಲು ಕೇಳಿಕೊಳ್ಳುವರು ಊರುಗೌಡರ ಜವಾಬ್ದಾರಿಯ (ಸೋದರದವರು ಹಸೆ ಬರೆಯಬೇಕು.) ನಡುಮನೆಯ ಗೋಡೆಯಲ್ಲಿ ಪೂರ್ವಾಭಿಮುಖವಾಗಿ ಬರೆಯುವರು. ಬಲಬದಿಗೆ ಸೂರ್ಯ, ಎಡಬದಿಗೆ ಚಂದ್ರನ ಚಿತ್ರ ಬರುವಂತೆ ಚಿತ್ರಿಸುವುದು. ಬಲ ಬದಿಯ ಚಿತ್ರದ ಕೆಳಗೆ ವರನ ಹೆಸರು ಎಡಬದಿಯ ಚಿತ್ರದ ಕೆಳಗೆ ವಧುವಿನ ಹೆಸರು ಬರೆಯಬೇಕು. ಹಸೆ ಬರೆದು ಮುಗಿದ ನಂತರ ಹಸೆ ಬರೆದವರಿಗೆ ಮನೆಯೊಡತಿ ಅವಲಕ್ಕಿ, ಬಾಳೆಹಣ್ಣು, ಬೆಲ್ಲ ಇವುಗಳಿಂದ ಯಥೋಪಚಾರವಾಗಿಉಪಚರಿಸಬೇಕು.
ಗೌಡ ಸಂಸ್ಕೃತಿ- ಮದುವೆ(ಮದರಂಗಿ ಕೊಯ್ಯುವುದು)
ಮದರಂಗಿ ಕೊಯ್ಯುವುದು :
Monday, June 2, 2025
ಗೌಡ ಸಂಸ್ಕೃತಿ- ಮದುವೆ(ಭೂಮಿ ಹೆಸೆ ಬರೆಯುವುದು)
ಭೂಮಿ ಹೆಸೆ ಬರೆಯುವುದು
5 ಜನ ಮುತ್ತೈದೆಯರು ಭೂಮಿ ಹಸೆ ಬರೆಯುತ್ತೇವೆಂದು ಹೇಳಿ ಅಕ್ಕಿಯಿಂದ ಗೆರೆಹಾಕಿ ಚೌಕಟ್ಟು ಮಾಡಿ ಅದನ್ನು ಒಟ್ಟು ಸೇರಿಸಬೇಕು. ಎಡದ ಪ್ರಥಮ ಚೌಕಟ್ಟಿನೊಳಗೆ (ಮದುಮಗ ಕುಳಿತುಕೊಳ್ಳುವ ಬಲಭಾಗ) ಸೂರ್ಯ ಚಿತ್ರ, ಕೊನೆಯ ಚೌಕಟ್ಟಿನೊಳಗೆ ಚಂದ್ರ ಚಿತ್ರ ಬರೆದು ಮಣೆ ಇಡಬೇಕು. ಆ ನಂತರ ವಧು/ವರರನ್ನು ಎಣ್ಣೆ ಅರಶಿನ ಮಾಡುವುದಕ್ಕೆ ಊರು ಗೌಡರು ಒಕ್ಕಣೆಯೊಂದಿಗೆ ಕುಳ್ಳಿರಿಸುವರು.
Thursday, April 24, 2025
ಗೌಡ ಸಂಸ್ಕೃತಿ- ಮದುವೆ( ಎಣ್ಣೆ ಅರಶಿನ ಮತ್ತು ಮದರಂಗಿ ಶಾಸ್ತ್ರ (ಮೇಲ್ಕಟ್ಟಿನ ಅಡಿಯಲ್ಲಿ)
ಎಣ್ಣೆ ಅರಶಿನ ಮತ್ತು ಮದರಂಗಿ ಶಾಸ್ತ್ರ (ಮೇಲ್ಕಟ್ಟಿನ ಅಡಿಯಲ್ಲಿ) :
ಗೌಡ ಸಂಸ್ಕೃತಿ- ಮದುವೆ( ಗುರುಕಾರಣರಿಗೆ ಬಡಿಸುವುದು ಮತ್ತು ಮದುಮಗನ ಮುಖ ಕ್ಷೌರ)
ಗುರುಕಾರಣರಿಗೆ ಬಡಿಸುವುದು : ವೀಳ್ಯ ಶಾಸ್ತ್ರದ ನಂತರ ನಿಶ್ಚಯಿಸಿದ ದಿನದಂದು ವಧು/ವರರ ತಳಮನೆಯಲ್ಲಿ ಗುರು ಕಾರಣರಿಗೆ ಬಡಿಸುವ ಕ್ರಮವಿದೆ.
Tuesday, April 22, 2025
ಗೌಡ ಸಂಸ್ಕೃತಿ- ಮದುವೆ( ಮದುಮಗಳಿಗೆ ಬಳೆ ತೊಡಿಸುವ ಶಾಸ್ತ್ರ )
ಮದುಮಗಳಿಗೆ ಬಳೆ ತೊಡಿಸುವ ಶಾಸ್ತ್ರ (ಮದರಂಗಿ ಶಾಸ್ತ್ರದ ಮೊದಲ ದಿನ) : ವಧುವಿನ
ಗೌಡ ಸಂಸ್ಕೃತಿ- ಮದುವೆ(ಧಾರಾ ಮಂಟಪ )
ಧಾರಾ ಮಂಟಪ : ಮನೆಯ ಮುಂಭಾಗದಲ್ಲಿ ಪೂರ್ವಾಭಿಮುಖವಾಗಿ ನಾಲ್ಕು ಅಡಿಕೆ ಮರದ ಕಂಬಗಳನ್ನು ಉಪಯೋಗಿಸಿ ಧಾರಾ ಮಂಟಪ ರಚಿಸುವುದು. ಮಡಿವಾಳ ಮಣೆಯಿಟ್ಟ ದೀಪ ಹಚ್ಚಿ ಬೆಂಡು ಕುಕ್ಕೆಯಲ್ಲಿ 1 ಸೇರು ಅಕ್ಕಿ, 1 ತೆಂಗಿನ ಕಾಯಿ, 5 ವೀಳ್ಯದೆಲೆ, ಅಡಿಕೆ 1 ಪಾವಲಿ ಇಟ್ಟು ಕೈ ಮುಗಿದು ಮೇಲ್ಕಟ್ಟು ಕಟ್ಟುತ್ತಾನೆ. ಮೇಲ್ಕಟ್ಟು ಕಟ್ಟಿದ ಮಧ್ಯಭಾಗಕ್ಕೆ 5 ವೀಳ್ಯದೆಲೆ, 1 ಅಡಿಕೆಯಲ್ಲಿ ನಿಯಮನುಸಾರವಾಗಿ ಒಗ್ಗಿ ಹಾಕಿದ ಜೋಡು ತೆಂಗಿನ ಕಾಯಿಯೊಂದಿಗೆ ಪೋಣಿಸಿ ಕಟ್ಟುವನು. ನಾಲ್ಕು ಕಂಬಗಳಿಗೆ ಬಿಳಿ ವಸ್ತ್ರವನ್ನು ಕಟ್ಟುವನು (ಎಣ್ಣೆ ಅರಿಶಿನ ಮಾಡಿದ ಕೈ ಉಜ್ಜಲು)
ಗೌಡ ಸಂಸ್ಕೃತಿ- ಮದುವೆ(ಚಪ್ಪರ ಹಾಕುವ ಕ್ರಮ)
ಚಪ್ಪರ ಹಾಕುವ ಕ್ರಮ : ಮದುವೆಗೆ 4 ಅಥವಾ 5 ದಿನಗಳಿಗೆ ಮುಂಚಿತವಾಗಿ ಕುಟುಂಬಸ್ಥರಿಗೆ, ನೆರೆಕರೆಯವರಿಗೆ ಹೇಳಿಕೆ ಕೊಟ್ಟು ಚಪ್ಪರ ಹಾಕಲು ಕೇಳಿಕೊಳ್ಳುವುದು. ಊರುಗೌಡರ ನೇತೃತ್ವದಲ್ಲಿ ಮನೆಯ ಮುಂಭಾಗದಲ್ಲಿ ಚಪ್ಪರ ಹಾಕುವುದು. ಚಪ್ಪರದ ಕಂಬಗಳು ಸಮ ಸಂಖ್ಯೆಯಲ್ಲಿರಬೇಕು. ಮದುವೆಯ ಹಿಂದಿನ ದಿನ, ಮದರಂಗಿಯಂದು ವಿಶ್ವಕರ್ಮರು ನಿರ್ಮಿಸಿಕೊಟ್ಟ ಹಾಲೆಮರದ ಪಾದುಕೆಗಳನ್ನು ಪ್ರವೇಶ ದ್ವಾರದ ಅಡಿಯಲ್ಲಿ ನೆಲಕ್ಕೆ ಮರದ ಮೊಳೆಯಿಂದ ಅಳವಡಿಸುವುದು. ಚಪ್ಪರದ ಮುಖ ತೋರಣವನ್ನು ವಿಶ್ವಕರ್ಮರಿಂದ ಮಾಡಿಸಬೇಕು. ಪೂರ್ವ ಈಶಾನ್ಯದಲ್ಲಿ ದ್ವಾರ ನಿರ್ಮಿಸಿ, ಗೊನೆ ಹಾಕಿದ 2 ಕದಳಿ ಬಾಳೆ ಕಟ್ಟಿ ತಳಿರು ತೋರಣಗಳಿಂದ ಶೃಂಗರಿಸಬೇಕು. (ಚಪ್ಪರದ ನಾಲ್ಕು ಮೂಲೆಗಳಿಗೆ ಊರುಗೌಡರು ನಾನೇಲು ಸೊಪ್ಪು ಸುತ್ತಿ ಮನೆಯವರಿಗೆ ಚಪ್ಪರವನ್ನು ಒಪ್ಪಿಸುವುದು ಕ್ರಮ)
ಗೌಡ ಸಂಸ್ಕೃತಿ- ಮದುವೆ(ಗುರು ವೀಳ್ಯ ,ಸಲಾವಳಿ ವೀಳ್ಯ ಮತ್ತಿತರ ವೀಳ್ಯಗಳು)
3) ಗುರು ವೀಳ್ಯ: 7 ಕವಳೆ ವೀಳ್ಯದೆಲೆ, 7 ಅಡಿಕೆ, ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ವೀಳ್ಯ ಬದಲಾಯಿಸಿಕೊಳ್ಳಬೇಕು. (ಒಕ್ಕಣೆಯೊಂದಿಗೆ ಹೇಳಿ ವೀಳ್ಯ ಬದಲಾಯಿಸಿಕೊಳ್ಳಬೇಕು).